'ಬಿಗ್ ಬಾಸ್' ಗೆದ್ದರೆ, ಬರುವ ದುಡ್ಡಲ್ಲಿ ಅನುಪಮಾ ಏನ್ ಮಾಡ್ತಾರೆ ಗೊತ್ತಾ.?
Recommended Video

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ತಮ್ಮ ಲವ್ ಸ್ಟೋರಿ, ಬ್ರೇಕಪ್ ಕಹಾನಿಯನ್ನ ಜಗಜ್ಜಾಹೀರು ಮಾಡಿ, ಆಗಾಗ ಕಣ್ಣೀರು ಸುರಿಸಿ, ಕೆಲ ವೀಕ್ಷಕರಿಂದ 'ಡ್ರಾಮಾ ಕ್ವೀನ್' ಅಂತಲೇ ಕರೆಯಿಸಿಕೊಂಡ ಸ್ಪರ್ಧಿ ಅನುಪಮಾ ಗೌಡ.
ಅಡುಗೆ ಮನೆಯಲ್ಲಿಯೇ ಹೆಚ್ಚಾಗಿ ಗುರುತಿಸಿಕೊಂಡ ಅನುಪಮಾ ಗೌಡ 'ಬಿಗ್ ಬಾಸ್' ಕಾರ್ಯಕ್ರಮದ ಮೊದಲ ಕ್ಯಾಪ್ಟನ್ ಕೂಡ ಹೌದು. ಇಲ್ಲಿಯವರೆಗೂ ಎರಡು ಬಾರಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಅನುಪಮಾ ಹಲವಾರು ಬಾರಿ ಡೇಂಜರ್ ಝೋನ್ ಗೆ ಬಂದು ವೀಕ್ಷಕರ ಬೆಂಬಲದಿಂದ ಸೇಫ್ ಆಗಿದ್ದಾರೆ.
ಟಾಪ್ 7 ಹಂತದ ವರೆಗೂ ಬಂದಿರುವ ಅನುಪಮಾ ಗೌಡ, ಟಾಪ್ 5 ಲೆವೆಲ್ ಗೆ ತಲುಪುತ್ತಾರಾ ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆ. ಆದ್ರೆ, ಟಾಪ್ 5 ಹಂತ ತಲುಪಲೇ ಬೇಕು, 'ಬಿಗ್ ಬಾಸ್' ವಿನ್ನರ್ ಆಗಲೇಬೇಕು ಎಂಬ ಹಠ, ಛಲ ಅನುಪಮಾ ಗೌಡ ರವರಲ್ಲಿ ಇದೆ. ಒಂದು ವೇಳೆ 'ಬಿಗ್ ಬಾಸ್ ಕನ್ನಡ-5' ಗೆದ್ದರೆ, ಬರುವ ಬಹುಮಾನದ ದುಡ್ಡಿನಲ್ಲಿ ಅನುಪಮಾ ಏನು ಮಾಡ್ತಾರೆ ಗೊತ್ತಾ.? ವಿವರ ಫೋಟೋ ಸ್ಲೈಡ್ ಗಳಲ್ಲಿ....

ಮೊನ್ನೆಯಷ್ಟೇ ವಾಪಸ್ ಕಳುಹಿಸಿ ಎಂದಿದ್ದರು.
''ಪ್ಲೀಸ್ ನನ್ನನ್ನ ವಾಪಸ್ ಕಳುಹಿಸಿ'' ಎಂದು ಮೊನ್ನೆ ಮೊನ್ನೆಯಷ್ಟೇ ಕ್ಯಾಮರಾ ಮುಂದೆ ಕಣ್ಣೀರು ಹಾಕುತ್ತಿದ್ದ ಅನುಪಮಾ ಗೌಡ ಮನಸ್ಸಿನಲ್ಲಿ ಈಗ 'ಬಿಗ್ ಬಾಸ್' ಶೋ ಗೆಲ್ಲುವ ಛಲ ಬಂದಿದೆ.

'ಬಿಗ್ ಬಾಸ್' ಅವಕಾಶ ಕಲ್ಪಿಸಿದಾಗ..
ತಮ್ಮಲ್ಲಿರುವ ವೈಶಿಷ್ಟತೆ ಏನು ಹಾಗೂ ತಾವು ಈ ಸ್ಪರ್ಧೆಯನ್ನು ಏಕೆ ಗೆಲ್ಲಬೇಕು ಎಂದು ಎಲ್ಲರ ಮುಂದೆ ವಿವರಿಸುವ ಅವಕಾಶವನ್ನ ಎಲ್ಲ ಸ್ಪರ್ಧಿಗಳಿಗೂ 'ಬಿಗ್ ಬಾಸ್' ಕಲ್ಪಿಸಿದರು. ಇದರ ಅನುಸಾರ ತಮ್ಮ ಮನಸ್ಸಿನಲ್ಲಿ ಇರುವ ಆಸೆಯನ್ನ ಅನುಪಮಾ ಗೌಡ ಹೊರ ಹಾಕಿದರು.

'ಬಿಗ್ ಬಾಸ್' ಮನೆಗೆ ಬಂದಿದ್ಯಾಕೆ.?
''ನನಗೆ ಕೆಲವು ಬದಲಾವಣೆಗಳು ಬೇಕೇ ಬೇಕಿತ್ತು. ಒಳಗೆ ಬಂದ ಮೇಲೆ ಕೆಲವು ಬದಲಾವಣೆಗಳು ಆಗಿವೆ. ಸ್ವಾರ್ಥಿಯಾಗಿ ಉತ್ತರ ಕೊಡುತ್ತೇನೆ. ನನ್ನ ಫ್ಯಾಮಿಲಿಗೆ ಸಹಾಯ ಮಾಡಬೇಕು'' ಎನ್ನುತ್ತ 'ಬಿಗ್ ಬಾಸ್' ಕಾರ್ಯಕ್ರಮದ ವಿನ್ನರ್ ಯಾಕಾಗಬೇಕು ಎಂದು ಅನುಪಮಾ ವಿವರಿಸಿದರು.

''ತಂದೆ-ತಾಯಿಗೆ ಮನೆ ಕೊಡಿಸಬೇಕು''
''ನನ್ನ ತಂದೆ-ತಾಯಿಗೆ ಮನೆ ಕೊಡಿಸಬೇಕು ಅಂತಿದ್ದೀನಿ. ಐವತ್ತು ಲಕ್ಷ ಬಂದರೆ, ನನ್ನ ತಂದೆ-ತಾಯಿ ಸೆಟೆಲ್ ಆಗ್ತಾರೆ. ಅದೊಂದೇ ಕಾರಣಕ್ಕೆ ನಾನು ಗೆಲ್ಲಬೇಕು ಅಂತ ಹೇಳ್ತೀನಿ. ಅದು ಬಿಟ್ಟರೆ ಗೆಲ್ಲುವುದಕ್ಕೆ ಯಾವುದೇ ಕಾರಣಗಳು ಈ ಮನೆಯಲ್ಲಿ ಇಲ್ಲ. ನಾನು ನಾನಾಗಿ ಇದ್ದೇನೆ. ಇದು ಕೂಡ ನನಗೆ ಕೆಲಸ. ಸುಮ್ಮನೆ ಬಂದಿಲ್ಲ. ಜವಾಬ್ದಾರಿ ತೆಗೆದುಕೊಂಡು ಒಳಗೆ ಬಂದೆ. ಹೊರಗಡೆ ಕೂಡ ಜವಾಬ್ದಾರಿ ಕೊಟ್ಟು ಬಂದಿದ್ದೇನೆ ಅಂದ್ರೆ ಅದರ ಬಗ್ಗೆ ಕೂಡ ಯೋಚನೆ ಇರುತ್ತದೆ'' ಎಂದರು ಅನುಪಮಾ ಗೌಡ.

ಅನುಪಮಾ ರನ್ನ ಗೆಲ್ಲಿಸುವ ಇಚ್ಛೆ ಇದ್ಯಾ.?
'ಬಿಗ್ ಬಾಸ್' ಯಾಕೆ ಗೆಲ್ಲಬೇಕು ಎಂಬುದರ ಬಗ್ಗೆ ಅನುಪಮಾ ಅಂತೂ ವಿವರಣೆ ಕೊಟ್ಟಾಯ್ತು. ಅನುಪಮಾ ಅವರನ್ನ ಗೆಲ್ಲಿಸುವ ಇಚ್ಛೆ ನಿಮಗಿದ್ದರೆ, ಅವರ ಪರ ಮತ ಹಾಕಿ...


Click it and Unblock the Notifications











