»   » ಹತ್ತು-ಹಲವು ಸರ್ಪೈಸ್ ಗಳೊಂದಿಗೆ ಬರಲಿದೆ 'ಬಿಗ್ ಬಾಸ್ ಕನ್ನಡ-5'

ಹತ್ತು-ಹಲವು ಸರ್ಪೈಸ್ ಗಳೊಂದಿಗೆ ಬರಲಿದೆ 'ಬಿಗ್ ಬಾಸ್ ಕನ್ನಡ-5'

Posted By:
Subscribe to Filmibeat Kannada

ಕನ್ನಡ ಕಿರುತೆರೆಯಲ್ಲಿ 'ಬಿಗ್ ಬಾಸ್' ಅಬ್ಬರ ಮತ್ತೆ ಶುರು ಆಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಂದಿನಂತೆ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಇನ್ನು ಕೆಲವೇ ತಿಂಗಳುಗಳಲ್ಲಿ ಆರಂಭ ಆಗಲಿದೆ.

'ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!

ಈಗಾಗಲೇ ಪ್ರಸಾರ ಅಗಿರುವ ನಾಲ್ಕು ಆವೃತ್ತಿಗಳಿಗಿಂತಲೂ, ಐದನೇ ಅವೃತ್ತಿಯಲ್ಲಿ (ಸೀಸನ್ 5) ಸರ್ಪ್ರೈಸ್ ಜಾಸ್ತಿ ಇದ್ಯಂತೆ. ಹಾಗಂತ, 'ಬಿಗ್ ಬಾಸ್' ಕಾರ್ಯಕ್ರಮದ ಮಾಸ್ಟರ್ ಮೈಂಡ್ ಗುರುದಾಸ್ ಶೆಣೈ ಟ್ವೀಟ್ ಮಾಡಿದ್ದಾರೆ.

''Bigg Boss Kannada 5 to have lot of surprises'' tweets Shenoy

ಗುರುದಾಸ್ ಶೆಣೈ ಮಾಡಿರುವ ಈ ಟ್ವೀಟ್ ಗೆ ''ನಾನು ಕೂಡ ಉತ್ಸುಕನಾಗಿದ್ದೇನೆ'' ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ ಕಿಚ್ಚ ಸುದೀಪ್.


ಕಳೆದ ನಾಲ್ಕು ಸೀಸನ್ ಗಳಲ್ಲಿ ಹೋಸ್ಟ್ ಆಗಿ ಕಾರ್ಯಕ್ರಮ ಯಶಸ್ವಿ ಆಗಲು ಪ್ರಮುಖ ಪಾತ್ರ ವಹಿಸಿದ್ದ ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ-5' ರಲ್ಲೂ ಅದೇ ಕೆಲಸ ನಿರ್ವಹಿಸಲಿದ್ದಾರೆ.

'ಬಿಗ್ ಬಾಸ್ ಕನ್ನಡ-5' ತೆರೆಮರೆಯ ಕೆಲಸಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ''ಹೆಚ್ಚು ಸರ್ಪ್ರೈಸ್ ಗಳಿವೆ'' ಎಂದು ಹೇಳಿರುವುದರಿಂದ ಕುತೂಹಲ ಕೂಡ ಡಬಲ್ ಆಗಿದೆ.

English summary
''Bigg Boss Kannada 5 to have lot of surprises'' tweets Gurudas Shenoy, Master Mind of Bigg Boss Kannada series.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada