»   » ಕಲರ್ಸ್ ಕನ್ನಡ ವಾಹಿನಿಯಲ್ಲಿಲ್ಲ 'ಬಿಗ್ ಬಾಸ್ ಕನ್ನಡ-5' ಪ್ರಸಾರ.!

ಕಲರ್ಸ್ ಕನ್ನಡ ವಾಹಿನಿಯಲ್ಲಿಲ್ಲ 'ಬಿಗ್ ಬಾಸ್ ಕನ್ನಡ-5' ಪ್ರಸಾರ.!

Posted By:
Subscribe to Filmibeat Kannada
Bigg Boss Kannada Season 5 to telecast in Colors Super Channel | Filmibeat Kannada

'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ನಾಲ್ಕು ಸೀಸನ್ ಗಳು ಜನಪ್ರಿಯತೆ ಪಡೆದುಕೊಂಡಿದೆ. ಐದನೇ ಆವೃತ್ತಿ ಇನ್ನೇನು ಶುರು ಆಗಬೇಕು. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. 'ಬಿಗ್ ಬಾಸ್ ಕನ್ನಡ-5' ಪ್ರೋಮೋ ಶೂಟ್ ಕೂಡ ಮುಗಿದಿದೆ.

ವಿಡಿಯೋ:'ಬಿಗ್ ಬಾಸ್ ಕನ್ನಡ-5' ಪ್ರೋಮೋ ರಿಲೀಸ್ ಆಯ್ತು ನೋಡಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಪ್ರಸಾರ ಯಾವಾಗ್ಲಿಂದ ಅನ್ನೋ ಖಚಿತ ಮಾಹಿತಿ ನಮಗೆ ಸಿಕ್ಕಿಲ್ಲ. ಆದ್ರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಾತ್ರ 'ಬಿಗ್ ಬಾಸ್ ಕನ್ನಡ-5' ಪ್ರಸಾರ ಆಗಲ್ಲ ಅನ್ನೋದು ಮಾತ್ರ ಗ್ಯಾರೆಂಟಿ. ಮುಂದೆ ಓದಿರಿ...

ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್' ಪ್ರಸಾರ

ಹಿಂದಿನ ಸೀಸನ್ ಗಳಂತೆ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲ್ಲ. ಬದಲಾಗಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಚಿತ್ರಗಳು: 'ಬಿಗ್ ಬಾಸ್ ಸೀಸನ್ 5' ಪ್ರೋಮೋದಲ್ಲಿ ಸುದೀಪ್ ಸಖತ್ ಸಿಂಪಲ್

ಖಚಿತ ಪಡಿಸಿದ ಕಿಚ್ಚ ಸುದೀಪ್

''ಬಿಗ್ ಬಾಸ್ ಕನ್ನಡ-5' ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ'' ಎಂದು ಸ್ವತಃ ಸುದೀಪ್ ಟ್ವೀಟ್ ಮಾಡಿದ್ದಾರೆ.

ಕಳೆದ ಬಾರಿಯೂ ಕಲರ್ಸ್ ಸೂಪರ್ ನಲ್ಲಿ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಎರಡು ವಾರಗಳ ಕಾಲ ಎಕ್ಸ್ ಟೆಂಡ್ ಆದಾಗ, ಕೊನೆಯ ಎರಡು ವಾರಗಳ 'ಬಿಗ್ ಬಾಸ್' ಸಂಚಿಕೆಗಳು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಿತ್ತು.

ಕೊನೆಯ ಎರಡು ವಾರಗಳ 'ಬಿಗ್ ಬಾಸ್' ಕಲರ್ಸ್ ಸೂಪರ್ ನಲ್ಲಿ.!

ವೀಕ್ಷಕರನ್ನು ಸೆಳೆಯುವ ಯತ್ನ

ಕನ್ನಡದ 'ಬಿಗ್ ಬಾಸ್' ಕಾರ್ಯಕ್ರಮ ಜನರನ್ನು ರಂಜಿಸುತ್ತಾ ಬಂದಿದೆ. ಕಲರ್ಸ್ ಸೂಪರ್ ವಾಹಿನಿಗೆ 'ಬಿಗ್ ಬಾಸ್' ಶಿಫ್ಟ್ ಆಗಿರುವುದರಿಂದ, ವಾಹಿನಿಗೆ ಹೊಸ ವೀಕ್ಷಕರು ಸಿಗುತ್ತಾರೆ ಎಂಬ ನಂಬಿಕೆ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ರವರಿಗಿದೆ.

English summary
'Bigg Boss Kannada 5' season to telecast in Colors Super Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada