»   » ಕಾರ್ತಿಕ್ ಜಯರಾಂ (ಜೆ.ಕೆ) ಚೀಟಿಂಗ್ ಮಾಡಿದ್ರಂತೆ: ಬೆಟ್ಟು ಮಾಡಿದ ಆಶಿತಾ.!

ಕಾರ್ತಿಕ್ ಜಯರಾಂ (ಜೆ.ಕೆ) ಚೀಟಿಂಗ್ ಮಾಡಿದ್ರಂತೆ: ಬೆಟ್ಟು ಮಾಡಿದ ಆಶಿತಾ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 24ನೇ ದಿನ 'ದೊಡ್ಮನೆ'ಯಲ್ಲಿ ದೊಡ್ಡ ಯುದ್ಧವೇ ನಡೆಯಿತು. 'ಬಿಗ್ ಬಾಸ್' ನೀಡಿದ್ದ 'ಜ್ಯೂಸ್ ಬೇಕು' ಟಾಸ್ಕ್ ನಿಂದಾಗಿ 'ಬಿಗ್' ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದು ಹೋಯ್ತು.

ಜ್ಯೂಸ್ ಕುಡಿದ ಲೋಟಗಳ ಬಗ್ಗೆ ಕ್ಯಾಮರಾ ಮುಂದೆ ರಿಯಾಝ್ ಹೇಳಿದ ಮಾತನ್ನ ಸರಿಯಾಗಿ ಕೇಳಿಸಿಕೊಳ್ಳದೆ, ಜಗನ್ ತೆಗೆದುಕೊಂಡ ನಿರ್ಧಾರ 'ಬಿಗ್ ಬಾಸ್' ಮನೆಯಲ್ಲಿ ಘೋರ ಸಮರಕ್ಕೆ ಸಾಕ್ಷಿ ಆಯ್ತು.

ಇಲ್ಲಿಯವರೆಗೂ ಯಾರ ಮೇಲೂ ಕೂಡ ಕೋಪ ತೋರಿಸಿದ ಜೆಕೆ (ಕಾರ್ತಿಕ್ ಜಯರಾಂ) 'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ ಸಿಕ್ಕಾಪಟ್ಟೆ ಗರಂ ಆಗಿಬಿಟ್ಟರು. ಇದರಿಂದ ಜೆಕೆ ಹಾಗೂ ಆಶಿತಾ ನಡುವೆ ಮಾತಿನ ಚಕಮಕಿ ನಡೆಯಿತು. ಮುಂದೆ ಓದಿರಿ....

ಕಬ್ಬಿನ ಜ್ಯೂಸ್ ಅಲ್ಲವೇ ಅಲ್ಲ.!

ಎಲ್ಲ ಲೋಟಗಳನ್ನು ಎದುರಾಳಿ ತಂಡದ ಕ್ಯಾಪ್ಟನ್ ಜಗನ್ ಡಿಸ್ ಅಪ್ರೂವ್ ಮಾಡಿದ್ಮೇಲೆ, ''ಎದುರಾಳಿ ತಂಡ ಮಾಡಿದ್ದು ಕಬ್ಬಿನ ಜ್ಯೂಸ್ ಅಲ್ಲವೇ ಅಲ್ಲ'' ಅಂತ ಜೆಕೆ ಹೇಳಿದರು. ಜೆಕೆ ಹೇಳಿದ ಈ ಮಾತು ಎದುರಾಳಿ ತಂಡದ ಆಶಿತಾ ರನ್ನ ಕೆರಳಿಸಿತು.

ಕೆರಳಿದ ಆಶಿತಾ

''ನಾನು ಇಲ್ಲೇ ಇದ್ದೇನೆ. ನಿಜ ಹೇಳ್ತೀನಿ. ಅದಕ್ಕೆ ಸಕ್ಕರೆ, ನೀರು ಹಾಕಿಲ್ಲ ಜೆಕೆ... ಬೇಡ...! ಮೋಸಕ್ಕೆ ಮೋಸ ಬೇಡ'' ಅಂತ ಏರುದನಿಯಲ್ಲಿ ಆಶಿತಾ ನುಡಿದರು.

ಚೀಟಿಂಗ್ ಮಾಡಿದ್ರಂತೆ ಜೆಕೆ

''ನಾನು ಹೇಳುತ್ತಿರುವುದು ಮೋಸ ಅಲ್ಲ. ನನ್ನ ಪ್ರಕಾರ ಅದು ಕಬ್ಬಿನ ಜ್ಯೂಸ್ ಅಲ್ಲವೇ ಅಲ್ಲ'' ಅಂತ ಜೆಕೆ ಹೇಳಿದಕ್ಕೆ, ''ಅದನ್ನ ಕಬ್ಬು ಬಳಸಿ ಮಾಡಿರುವುದು. ಕಬ್ಬಿನ ಜ್ಯೂಸ್ ಅಲ್ಲವೇ ಅಲ್ಲ ಅಂತ ಹೇಳಬೇಡ. ಅದು ಕಬ್ಬಿನ ಜ್ಯೂಸ್ ಅಲ್ಲ ಅಂತ ಹೇಳುವ ಮೂಲಕ ನೀನು ಚೀಟಿಂಗ್ ಮಾಡ್ತಿದ್ಯಾ'' ಅಂತ ಆಶಿತಾ ಬೆಟ್ಟು ಮಾಡಿ ತೋರಿಸಿದರು.

ಬೆರಳು ತೋರಿಸಿ ಮಾತನಾಡಬೇಡ

''ಬೆರಳು ತೋರಿಸಿ ನನ್ನ ಹತ್ತಿರ ಮಾತನಾಡಬೇಡ'' ಅಂತ ಹೇಳುವ ಮೂಲಕ ಜೆಕೆ ಮತ್ತಷ್ಟು ಗರಂ ಆದರು.

English summary
Bigg Boss Kannada 5: Week 4: Verbal fight between Ashita and JK.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada