»   » 'ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!'

'ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!'

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಪ್ರಥಮ್ ಬರಬೇಕೆಂದು ವೀಕ್ಷಕರ ಒತ್ತಾಯ | filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಮುಗಿದು ತಿಂಗಳುಗಳೇ ಉರುಳಿವೆ. 'ಬಿಗ್ ಬಾಸ್ ಕನ್ನಡ-5' ಶೋ ಈಗ ಶುರು ಆಗಿದೆ. ಹೀಗಿದ್ದರೂ, ಕಳೆದ ಆವೃತ್ತಿಯ 'ಬಿಗ್ ಬಾಸ್' ವಿನ್ನರ್ ಪ್ರಥಮ್ ನ ಮಾತ್ರ ಜನರು ಮರೆತಿಲ್ಲ..!

''ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಪ್ರಥಮ್ ಇರಬೇಕಿತ್ತು. ಪ್ರಥಮ್ ಇದ್ದಿದ್ರೆ, ಎಲ್ಲರಿಗೂ ಚೆನ್ನಾಗಿ ಬಿಸಿ ಮುಟ್ಟಿಸುತ್ತಿದ್ದ'' ಎಂದು ವೀಕ್ಷಕರೇ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಈ ವಾರ 'ಬಿಗ್ ಬಾಸ್' ಮನೆಯ ಅರ್ಧದಷ್ಟು ಸದಸ್ಯರು ನಾಮಿನೇಟ್.!

ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಜನಸಾಮಾನ್ಯರನ್ನ ಸೆಲೆಬ್ರಿಟಿ ಸ್ಪರ್ಧಿಗಳು ತಿರಸ್ಕಾರ ಭಾವನೆಯಿಂದ ನೋಡುತ್ತಿರುವ ಬಗ್ಗೆ ವೀಕ್ಷಕರಲ್ಲಿ ಬೇಸರ ಮೂಡಿದೆ. ಹೀಗಾಗಿ, ''ಸೇಲ್ಸ್ ಮ್ಯಾನ್' ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!'' ಎಂಬ ಟ್ರೋಲ್ ಗಳೇ ಹೆಚ್ಚಾಗಿವೆ. ಮುಂದೆ ಓದಿರಿ....

ಸೆಲೆಬ್ರಿಟಿ ಸ್ಪರ್ಧಿಗಳ ವರ್ತನೆ ಬಗ್ಗೆ ವೀಕ್ಷಕರು ಬೇಸರ

ಜನಸಾಮಾನ್ಯರು ತಪ್ಪು ಮಾಡದೇ ಇದ್ದರೂ, ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುವ ಸೆಲೆಬ್ರಿಟಿ ಸ್ಪರ್ಧಿಗಳ ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ಮೂಡಿದೆ. ಅದಕ್ಕೆ ಸಾಕ್ಷಿ ಈ ಕಾಮೆಂಟ್.!

ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

ಪ್ರಥಮ್ ಜಪ ಮಾಡುತ್ತಿರುವ ವೀಕ್ಷಕರು

ಸೆಲೆಬ್ರಿಟಿಗಳ ಅಟ್ಟಹಾಸ ಮಿತಿ ಮೀರಿದ ಸಂದರ್ಭದಲ್ಲಿ, ಸೆಲೆಬ್ರಿಟಿಗಳ ಸದ್ದಡಗಿಸಿದ ಪ್ರಥಮ್ ಜಪ ಮಾಡುತ್ತಿದ್ದಾರೆ ಸದ್ಯದ 'ಬಿಗ್ ಬಾಸ್' ವೀಕ್ಷಕರು.

'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

ಒಂದು ವಾರ 'ದೊಡ್ಮನೆ'ಯೊಳಗೆ ಹೋಗಲಿ ಪ್ರಥಮ್

ದಯವಿಟ್ಟು ಒಂದು ವಾರ ಪ್ರಥಮ್ ನ ಒಳಗೆ ಕಳುಹಿಸಿ, ಎಲ್ಲ ಸೆಲೆಬ್ರಿಟಿಗಳಿಗೂ ಗ್ರಹಚಾರ ಬಿಡಿಸಿ ಬರುತ್ತಾನೆ ಎಂದು ವೀಕ್ಷಕರು 'ಬಿಗ್ ಬಾಸ್' ಬಳಿ ಮನವಿ ಮಾಡಿದ್ದಾರೆ.

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ದಿವಾಕರ್ ಜಾಗದಲ್ಲಿ ಪ್ರಥಮ್ ಇರ್ಬೇಕಿತ್ತು.!

ಸದ್ಯ 'ಬಿಗ್ ಬಾಸ್' ಮನೆಯಲ್ಲಿ 'ಬಲಿ ಕಾ ಬಕ್ರಾ' ಆಗಿರುವ ದಿವಕಾರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಕಥೆಯೇ ಬೇರೆ ಆಗ್ತಿತ್ತು ಅನ್ನೋದು ವೀಕ್ಷಕರ ಅಭಿಪ್ರಾಯ.

English summary
Bigg Boss Kannada 5: Week 2: Viewers are missing Pratham, Winner of Bigg Boss Kannada 4.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X