ಎರಡು ವಾರಗಳ ಹಿಂದೆ ಮನೆಯೊಳಗೆ ಬಂದಿದ್ದ ಲಾಸ್ಯ ಈಗ ಹೊರಗೆ.!

By Harshitha

'ಜೊತೆ ಜೊತೆಯಲಿ' ಚಟುವಟಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ... ಅಂದ್ರೆ ಎರಡು ವಾರಗಳ ಹಿಂದೆಯಷ್ಟೇ 'ಕಿರಿಕ್' ಹುಡುಗಿ ಸಂಯುಕ್ತ ಜೊತೆಯಾಗಿ 'ಬಿಗ್ ಬಾಸ್' ಮನೆಯೊಳಗೆ 'ವೈಲ್ಡ್ ಕಾರ್ಡ್ ಎಂಟ್ರಿ' ಪಡೆದಿದ್ದ ನಟಿ ಲಾಸ್ಯ ಈ ವಾರ ಎಲಿಮಿನೇಟ್ ಆಗಿದ್ದಾರೆ.

ಮೊದಲ ವಾರ ಸಂಯುಕ್ತ ಅವರ 'ಕಿರಿಕ್'ಗಳ ನಡುವೆ ಅಷ್ಟೇನು ಗುರುತಿಸಿಕೊಳ್ಳದ ಲಾಸ್ಯ, ಎರಡನೇ ವಾರ ಸ್ವಲ್ಪ ಸೈಲೆಂಟ್ ಆಗಿಯೇ ಇದ್ದರು. ಸಮೀರಾಚಾರ್ಯ ಮೇಲೆ ಸಂಯುಕ್ತ ಕೈ ಮಾಡಿದಾಗ, ಸಂಯುಕ್ತ ಪರವಾಗಿಯೇ ಇದ್ದ ಲಾಸ್ಯ ವೀಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿ ಮನೆ ಕಡೆ ಹೆಜ್ಜೆ ಹಾಕಿದ್ದಾರೆ. ಮುಂದೆ ಓದಿರಿ...

ವೀಕ್ಷಕರ ಬೆಂಬಲ ಇಲ್ಲ

ವೀಕ್ಷಕರ ಬೆಂಬಲ ಇಲ್ಲ

ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಲಾಸ್ಯ ಅವರಿಗೆ ಕಮ್ಮಿ ವೋಟ್ ಗಳು ಬಿದ್ದಿದ್ವು. ಹೀಗಾಗಿ, ಅವರು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆದರು.

ಅರು ಮಂದಿ ನಾಮಿನೇಟ್ ಆಗಿದ್ದರು

ಅರು ಮಂದಿ ನಾಮಿನೇಟ್ ಆಗಿದ್ದರು

ಸಮೀರಾಚಾರ್ಯ, ನಿವೇದಿತಾ, ದಿವಾಕರ್, ಜಯಶ್ರೀನಿವಾಸನ್, ಅನುಪಮಾ ಮತ್ತು ಲಾಸ್ಯ... ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆರು ಮಂದಿ ಪೈಕಿ ಲಾಸ್ಯ ಔಟ್ ಆದರು.

ನೇರವಾಗಿ ನಾಮಿನೇಟ್ ಆಗಿದ್ದ ಲಾಸ್ಯ

ನೇರವಾಗಿ ನಾಮಿನೇಟ್ ಆಗಿದ್ದ ಲಾಸ್ಯ

ಜೆಕೆ ಪಡೆದುಕೊಂಡಿದ್ದ ಸೂಪರ್ ಅಧಿಕಾರದ ಅನುಸಾರ, ಯಾರಾದರೂ ಒಬ್ಬ ಸದಸ್ಯರನ್ನ ಅವರು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ಸೂಪರ್ ಅಧಿಕಾರವನ್ನು ಬಳಸಿಕೊಂಡ ಜೆಕೆ, ಲಾಸ್ಯ ರನ್ನ ನೇರವಾಗಿ ನಾಮಿನೇಟ್ ಮಾಡಿದರು.

ಒಂಧೇ ವಾರ ಇಬ್ಬರೂ ಹೊರಗೆ

ಒಂಧೇ ವಾರ ಇಬ್ಬರೂ ಹೊರಗೆ

'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಬಂದಿದ್ದ ಸಂಯುಕ್ತ ಕೂಡ ಇದೇ ವಾರ 'ದೈಹಿಕ ಹಲ್ಲೆ' ನಡೆಸಿ ಹೊರಬಿದ್ದರು. ಲಾಸ್ಯ ಕೂಡ ವೀಕ್ಷಕರ ಬೆಂಬಲ ಇಲ್ಲದೆ ಎಲಿಮಿನೇಟ್ ಆಗಿದ್ದಾರೆ. 'ವೈಲ್ಡ್ ಕಾರ್ಡ್ ಎಂಟ್ರಿ' ಕೊಡುವ ಮುನ್ನ ಭಾರಿ ಕುತೂಹಲ ಮೂಡಿಸಿದ್ದ ಇವರಿಬ್ಬರೂ 'ಬಿಗ್ ಬಾಸ್' ಮನೆಯೊಳಗೆ ಹೆಚ್ಚು ದಿನ ಇರಲು ಸಾಧ್ಯವೇ ಆಗಲಿಲ್ಲ.

More from Filmibeat

English summary
Bigg Boss Kannada 5: Week 10: Kannada Actress Lasya eliminated from BBK5 house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X