ಈ ವಾರ 'ಬಿಗ್ ಬಾಸ್' ಮನೆಯಿಂದ ಮನೆ ಕಡೆ ಹೆಜ್ಜೆ ಹಾಕುವವರು ಯಾರು.?

By Harshitha

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಒಂಬತ್ತು ವಾರಗಳು ಕಳೆದು ಹೋಗಿವೆ. ಈ ಒಂಬತ್ತು ವಾರಗಳಲ್ಲಿ ದಯಾಳ್ ಪದ್ಮನಾಭನ್, ಸಿಹಿ ಕಹಿ ಚಂದ್ರು, ಜಗನ್ನಾಥ್ ಸೇರಿದಂತೆ ಪ್ರಬಲ ಸ್ಪರ್ಧಿಗಳೇ ವೀಕ್ಷಕರ ಬೆಂಬಲ ಇಲ್ಲದೆ ಹೊರಬಿದ್ದಿದ್ದಾರೆ.

ವಾರದಿಂದ ವಾರಕ್ಕೆ ಸ್ಪರ್ಧೆ ಕಠಿಣ ಆಗುತ್ತಿದ್ದಂತೆಯೇ, ಹತ್ತನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ 'ಬಿಗ್ ಬಾಸ್' ಹೊಸ ಟ್ವಿಸ್ಟ್ ಕೊಟ್ಟರು.

ಮಹಿಳಾ ಸ್ಪರ್ಧಿಗಳು ಇಬ್ಬರು ಪುರುಷ ಸದಸ್ಯರನ್ನ ನಾಮಿನೇಟ್ ಮಾಡಬೇಕಾಗಿದ್ದರೆ, ಪುರುಷ ಸದಸ್ಯರು ಇಬ್ಬರು ಮಹಿಳಾ ಸದಸ್ಯರನ್ನು ನಾಮಿನೇಟ್ ಮಾಡಬೇಕಾಗಿತ್ತು.

ಹಾಗಾದ್ರೆ, ಈ ವಾರ ಯಾರ್ಯಾರು ಡೇಂಜರ್ ಝೋನ್ ನಲ್ಲಿ ಇದ್ದಾರೆ.? ನೋಡೋಣ ಬನ್ನಿ....

ಈ ವಾರ ಕ್ಯಾಪ್ಟನ್ ಇಲ್ಲ.!

ಈ ವಾರ ಕ್ಯಾಪ್ಟನ್ ಇಲ್ಲ.!

ಸಾಮಾನ್ಯವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಯುವ ಮುನ್ನ ಕ್ಯಾಪ್ಟನ್ ಆಯ್ಕೆ ಆಗಬೇಕು. ಆದ್ರೆ, ಈ ವಾರ ಹಾಗೆ ಆಗಲಿಲ್ಲ. ''ಈ ವಾರ ಕ್ಯಾಪ್ಟನ್ ಇಲ್ಲ. ಮನೆಯ ಜವಾಬ್ದಾರಿಗಳನ್ನು ಸದಸ್ಯರನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳಬೇಕು'' ಎಂದು 'ಬಿಗ್ ಬಾಸ್' ಘೋಷಿಸಿದರು. ಕ್ಯಾಪ್ಟನ್ ಆಯ್ಕೆ ಆಗದ ಕಾರಣ ಯಾರಿಗೂ ಇಮ್ಯೂನಿಟಿ ಲಭಿಸಲಿಲ್ಲ. ಹೀಗಾಗಿ ಯಾರೂ ಸೇಫ್ ಆಗಲಿಲ್ಲ.

ಸಮೀರಾಚಾರ್ಯಗೆ ಅತಿ ಹೆಚ್ಚು ವೋಟ್ಸ್

ಸಮೀರಾಚಾರ್ಯಗೆ ಅತಿ ಹೆಚ್ಚು ವೋಟ್ಸ್

ನಿವೇದಿತಾ ಗೌಡ, ಲಾಸ್ಯ, ಅನುಪಮಾ ಗೌಡ, ಶ್ರುತಿ ಹಾಗೂ ಕೃಷಿ... ಸಮೀರಾಚಾರ್ಯ ವಿರುದ್ಧ ಮತ ಚಲಾಯಿಸಿದರು. ಹೀಗಾಗಿ ಸಮೀರಾಚಾರ್ಯ ನಾಮಿನೇಟ್ ಆದರು.

ಡೇಂಜರ್ ಝೋನ್ ನಲ್ಲಿ ನಿವೇದಿತಾ

ಡೇಂಜರ್ ಝೋನ್ ನಲ್ಲಿ ನಿವೇದಿತಾ

ರಿಯಾಝ್, ಜಯಶ್ರೀನಿವಾಸನ್, ದಿವಾಕರ್ ಮತ್ತು ಜೆಕೆ ವೋಟ್ ಮಾಡಿದ್ರಿಂದಾಗಿ ನಿವೇದಿತಾ ಗೌಡ ನಾಮಿನೇಟ್ ಆದರು.

ಜಯಶ್ರೀನಿವಾಸನ್ ಗೆ ತಲೆ ಬಿಸಿ

ಜಯಶ್ರೀನಿವಾಸನ್ ಗೆ ತಲೆ ಬಿಸಿ

ನಿವೇದಿತಾ ಮತ್ತು ಲಾಸ್ಯ 'ಕೃಪೆ'ಯಿಂದ ಜಯಶ್ರೀನಿವಾಸನ್ ಗೆ ಈ ವಾರ ಕೂಡ ಎಲಿಮಿನೇಷನ್ ತಲೆ ಬಿಸಿ ಇದೆ.

ನಾಮಿನೇಟ್ ಆದ ಅನುಪಮಾ

ನಾಮಿನೇಟ್ ಆದ ಅನುಪಮಾ

ದಿವಾಕರ್ ಮತ್ತು ಸಮೀರಾಚಾರ್ಯ, ಅನುಪಮಾ ರನ್ನ 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ಇಚ್ಛಿಸಿದರು.

ದಿವಾಕರ್ ಗೆ ಅಗ್ನಿಪರೀಕ್ಷೆ

ದಿವಾಕರ್ ಗೆ ಅಗ್ನಿಪರೀಕ್ಷೆ

ಶ್ರುತಿ ಪ್ರಕಾಶ್ ಮತ್ತು ಅನುಪಮಾ ವೋಟ್ ಹಾಕಿದ್ರಿಂದಾಗಿ, ದಿವಾಕರ್ ನಾಮಿನೇಟ್ ಆಗಿದ್ದಾರೆ.

ಸಂಯುಕ್ತ ವಿರುದ್ಧ ಮೂರು ಮತಗಳು

ಸಂಯುಕ್ತ ವಿರುದ್ಧ ಮೂರು ಮತಗಳು

ಸಂಯುಕ್ತ ಹೆಗ್ಡೆ ಸ್ಪರ್ಧಿ ಅಲ್ಲ ಎಂಬ ಗುಟ್ಟು ಇನ್ನೂ ರಟ್ಟಾಗದ ಕಾರಣ ಚಂದನ್ ಶೆಟ್ಟಿ, ಸಮೀರಾಚಾರ್ಯ ಮತ್ತು ಜೆಕೆ ಸಂಯುಕ್ತ ವಿರುದ್ಧ ವೋಟ್ ಮಾಡಿದರು. ಆದ್ರೆ, ಆಕೆ ಸ್ಪರ್ಧಿ ಅಲ್ಲದ ಕಾರಣ ನಾಮಿನೇಟ್ ಆದರೂ ಒಂದೇ ಬಿಟ್ಟರೂ ಒಂದೇ.!

ನೇರವಾಗಿ ನಾಮಿನೇಟ್ ಆದ ಲಾಸ್ಯ

ನೇರವಾಗಿ ನಾಮಿನೇಟ್ ಆದ ಲಾಸ್ಯ

ಕಳೆದ ವಾರ ಹೊರ ಬಂದ ಜಗನ್ ರಿಂದ ಜೆಕೆ ಸೂಪರ್ ಅಧಿಕಾರ ಪಡೆದುಕೊಂಡಿದ್ದರು. ಅದರ ಅನುಸಾರ, ಯಾರಾದರೂ ಒಬ್ಬ ಸದಸ್ಯರನ್ನ ಜೆಕೆ ನೇರವಾಗಿ ನಾಮಿನೇಟ್ ಮಾಡಬಹುದಿತ್ತು. ಸೂಪರ್ ಅಧಿಕಾರವನ್ನು ಬಳಸಿಕೊಂಡ ಜೆಕೆ, ಲಾಸ್ಯ ರನ್ನ ನೇರವಾಗಿ ನಾಮಿನೇಟ್ ಮಾಡಿದರು.

ಒಂದು ವೋಟ್ ನಲ್ಲಿ ಮಿಸ್ ಆದವರು.!

ಒಂದು ವೋಟ್ ನಲ್ಲಿ ಮಿಸ್ ಆದವರು.!

ನಟಿ ಶ್ರುತಿ ಪ್ರಕಾಶ್ ಹಾಗೂ ಕೃಷಿ ತಾಪಂಡ ವಿರುದ್ಧ ಒಂದು ವೋಟ್ ಬಿದ್ದ ಕಾರಣ ನಾಮಿನೇಷನ್ ನಿಂದ ಬಚಾವ್ ಆದರು

ಆರು ಮಂದಿ ಪೈಕಿ ಯಾರಿಗೆ ನಿಮ್ಮ ಬೆಂಬಲ.?

ಆರು ಮಂದಿ ಪೈಕಿ ಯಾರಿಗೆ ನಿಮ್ಮ ಬೆಂಬಲ.?

ಸಮೀರಾಚಾರ್ಯ, ನಿವೇದಿತಾ, ದಿವಾಕರ್, ಜಯಶ್ರೀನಿವಾಸನ್, ಅನುಪಮಾ ಮತ್ತು ಲಾಸ್ಯ.... ಈ ಆರು ಮಂದಿ ಪೈಕಿ ನಿಮ್ಮ ಬೆಂಬಲ ಯಾರಿಗೆ.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ... ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

More from Filmibeat

English summary
Bigg Boss Kannada 5: Week 10: Diwakar, Sameeracharya, Jayasreenivasan, Anupama Gowda, Niveditha Gowda and Lasya are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X