'ಬಿಗ್ ಬಾಸ್' ಕಣ್ತಪ್ಪಿಸಿ ಮೊಬೈಲ್ ಫೋನ್ ಬಳಸುತ್ತಿದ್ದರಂತೆ ರಿಯಾಝ್.!

By Harshitha

ಮನುಷ್ಯರ ಕಣ್ತಪ್ಪಿಸಬಹುದು. ಜೊತೆಗೆ ಇರುವವರನ್ನೂ ಹೇಗೋ ಯಾಮಾರಿಸಬಹುದು. ಆದ್ರೆ, ಸದಾ ಎಲ್ಲರ ಚಲನವಲನಗಳನ್ನು ಸೆರೆ ಹಿಡಿಯುತ್ತಿರುವ ಕ್ಯಾಮರಾಗಳಿಂದ ಕಣ್ತಪ್ಪಿಸಿಕೊಳ್ಳಲು ಸಾಧ್ಯ ಇದ್ಯಾ.? ಅದು 'ಬಿಗ್ ಬಾಸ್' ಮನೆಯಲ್ಲಿ.?

ಇದೆಲ್ಲ ಅಸಾಧ್ಯ ಅಂತ ಗೊತ್ತಿದ್ದರೂ, ಸಮೀರಾಚಾರ್ಯ ತಲೆಯಲ್ಲಿ ಒಂದು ಅನುಮಾನ ಮೂಡಿದೆ. 'ಬಿಗ್ ಬಾಸ್' ಕಣ್ತಪ್ಪಿಸಿ, 64 ದಿನಗಳ ಕಾಲ ರಿಯಾಝ್ ಮೊಬೈಲ್ ಫೋನ್ ಬಳಸಿದ್ದರಂತೆ.

ಯಾರಿಗೂ ಗೊತ್ತಾಗದ ಹಾಗೆ ಮೊಬೈಲ್ ಫೋನ್ ಮೂಲಕ ತಮ್ಮ ಪತ್ನಿ ಜೊತೆ ಮಾತನಾಡುತ್ತಿದ್ದರಂತೆ ರಿಯಾಝ್. ಸಾಲದಕ್ಕೆ, ಅದೇ ಮೊಬೈಲ್ ಮೂಲಕ ತಮಗೆ ತಾವೇ ವೋಟ್ ಮಾಡಿಕೊಳ್ಳುತ್ತಿದ್ದರಂತೆ. ಹಾಗಂತ ಸಮೀರಾಚಾರ್ಯ ತಲೆಯಲ್ಲಿ ಹೆಬ್ಬಾವು ಹರಿದಾಡಿದೆ. ಮುಂದೆ ಓದಿರಿ...

ಮೊಬೈಲ್ ಫೋನ್ ಬಂದಿದ್ದು ಎಲ್ಲಿಂದ.?

ಮೊಬೈಲ್ ಫೋನ್ ಬಂದಿದ್ದು ಎಲ್ಲಿಂದ.?

ರಿಯಾಝ್ ಜೊತೆಗೆ ಮೊಬೈಲ್ ಫೋನ್ ಇದ್ದದ್ದು ಸತ್ಯ. ಆದ್ರೆ, ಅದು ಅವರದ್ದಲ್ಲ. ಅವರ ಮನೆಯಿಂದ ತಂದಿದ್ದಲ್ಲ. ಬದಲಾಗಿ, ವಿಶೇಷ ದೂರವಾಣಿಯನ್ನ ರಿಯಾಝ್ ಗೆ ನೀಡಿದವರು ಸ್ವತಃ 'ಬಿಗ್ ಬಾಸ್'.!

ವಿಶೇಷ ಚಟುವಟಿಕೆಗಾಗಿ ನೀಡಿದ್ದು.!

ವಿಶೇಷ ಚಟುವಟಿಕೆಗಾಗಿ ನೀಡಿದ್ದು.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಈ ವಾರ 'ಕೊಲೆ' ಮಾಡುವ ಚಟುವಟಿಕೆ ನೀಡಲಾಗಿತ್ತು. ಇದರ ಅನುಸಾರ 'ಕೊಲೆಗಾರ'ರ ಪಾತ್ರಧಾರಿಗಳಾದ ರಿಯಾಝ್ ಮತ್ತು ಅನುಪಮಾ ಮನೆಯ ಸದಸ್ಯರನ್ನ ಕೊಲೆ ಮಾಡಬೇಕಿತ್ತು. ಕಾಲ ಕಾಲಕ್ಕೆ ಯಾವ ಸದಸ್ಯರನ್ನು ಹೇಗೆ ಕೊಲೆ ಮಾಡಬೇಕು ಎಂಬ ಆದೇಶವನ್ನು 'ಬಿಗ್ ಬಾಸ್' ರಿಂದ ಸ್ವೀಕರಿಸಲು ವಿಶೇಷ ದೂರವಾಣಿಯನ್ನ ರಿಯಾಝ್ ಗೆ ನೀಡಲಾಗಿತ್ತು.

ಬೇರೆ ಯಾವುದೇ ಕರೆ ಬರಲ್ಲ, ಹೋಗಲ್ಲ.!

ಬೇರೆ ಯಾವುದೇ ಕರೆ ಬರಲ್ಲ, ಹೋಗಲ್ಲ.!

'ಬಿಗ್ ಬಾಸ್' ನೀಡಿದ್ದ ವಿಶೇಷ ದೂರವಾಣಿಯಲ್ಲಿ ಕರೆ ಮಾಡಲು 'ಬಿಗ್ ಬಾಸ್' ಗೆ ಮಾತ್ರ ಸಾಧ್ಯ ಇತ್ತು. ಬೇರೆ ಯಾವ ಒಳ ಬರುವ ಹೊರ ಹೋಗುವ ಕರೆಗಳಿಗೆ ಅವಕಾಶ ಇರಲಿಲ್ಲ.

ಸೀಕ್ರೆಟ್ ಆಗಿ ಇಟ್ಟುಕೊಳ್ಳಬೇಕಿತ್ತು.!

ಸೀಕ್ರೆಟ್ ಆಗಿ ಇಟ್ಟುಕೊಳ್ಳಬೇಕಿತ್ತು.!

ದೂರವಾಣಿಯನ್ನು ಯಾರಿಗೂ ಕಾಣದಂತೆ ಕಾಪಾಡಿಕೊಳ್ಳುವುದು, ಯಾರಿಗೂ ಗೊತ್ತಾಗದಂತೆ ಕರೆ ಸ್ವೀಕರಿಸುವುದು ರಿಯಾಝ್ ಜಾಣ್ಮೆಗೆ ಬಿಟ್ಟಿತ್ತು.

ಪತ್ತೆ ಹಚ್ಚಿದ ಸಮೀರಾಚಾರ್ಯ

ಪತ್ತೆ ಹಚ್ಚಿದ ಸಮೀರಾಚಾರ್ಯ

ದೂರವಾಣಿಯನ್ನು ರಿಯಾಝ್ ದಿಂಬಿನ ಕೆಳಗೆ ಇಟ್ಟಿದ್ದಾಗ, ಅದನ್ನ ಸಮೀರಾಚಾರ್ಯ ಪತ್ತೆ ಮಾಡಿದರು. ಆಗಲೇ ಅವರಿಗೆ ಅನುಮಾನ ಮೂಡಲು ಆರಂಭವಾಗಿದ್ದು.

ಸಮೀರಾಚಾರ್ಯಗೆ ಮೂಡಿದ್ದ ಅನುಮಾನ ಏನು.?

ಸಮೀರಾಚಾರ್ಯಗೆ ಮೂಡಿದ್ದ ಅನುಮಾನ ಏನು.?

''ಸಮೀರಾಚಾರ್ಯ ತಿಳಿದುಕೊಂಡಿರುವ ಪ್ರಕಾರ, ನಾನು ಬಿಗ್ ಬಾಸ್ ಕಣ್ತಪ್ಪಿಸಿ ಮೊದಲನೇ ದಿನದಿಂದ 64 ದಿನಗಳ ವರೆಗೂ ಫೋನ್ ಇಟ್ಟುಕೊಂಡು, ನನಗೆ ನಾನೇ ವೋಟ್ ಮಾಡಿಕೊಳ್ಳುತ್ತಿದ್ದೇನೆ. ಪತ್ನಿ ಜೊತೆ ಮಾತನಾಡುತ್ತಿದ್ದೇನೆ'' ಎಂದು ಸಮೀರಾಚಾರ್ಯ ಲೆಕ್ಕಾಚಾರವನ್ನು 'ಬಿಗ್ ಬಾಸ್' ಬಾಯ್ಬಿಟ್ಟರು. ಜೊತೆಗೆ ''ಇಷ್ಟೂ ಜನರ ಕಣ್ತಪ್ಪಿಸಿ, ಇಷ್ಟೂ ಕ್ಯಾಮರಾ ಕಣ್ತಪ್ಪಿಸಿ, ನನಗೆ ನಾನೇ ವೋಟ್ ಮಾಡಿಕೊಳ್ಳಲು ಸಾಧ್ಯವೇ.?'' ಎಂದು ರಿಯಾಝ್ ಪ್ರಶ್ನಿಸಿದರು.

More from Filmibeat

English summary
Bigg Boss Kannada 5: Week 10: Sameeracharya suspects Riyaz for using Mobile phone in BBK5 House.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X