ಅಣ್ಣ ತಂಗಿಯರ ಈ ಬಂಧ... ಜನುಮ ಜನುಮಗಳ ಅನುಬಂಧ...
Recommended Video

'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಹ ಸ್ಪರ್ಧಿ ಮೇಲೆ ಕೈ ಮಾಡಿದ ಕುಖ್ಯಾತಿ ಹುಚ್ಚ ವೆಂಕಟ್ ರವರದ್ದು.! ವಾರದ ಕಥೆಯನ್ನಿಟ್ಟುಕೊಂಡು ಸುದೀಪ್ ಪಂಚಾಯತಿ ಮಾಡುತ್ತಿದ್ದ ಸಂದರ್ಭದಲ್ಲಿಯೇ, ಸುದೀಪ್ ಮುಂದೆಯೇ ಸಹ ಸ್ಪರ್ಧಿ ರವಿ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿ 'ಕಿಕ್' ಔಟ್ ಆದರು.
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮನೆಯೊಳಗೆ ಬಂದ ಹುಚ್ಚ ವೆಂಕಟ್, ಪ್ರಥಮ್ ಮೇಲೆ ಕೈ ಮಾಡಿದರು. ಬಳಿಕ ಕ್ಷಮೆ ಕೇಳಿದರು.
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ನಂತರ ಇದೇ ಸೀನ್ ಕ್ರಿಯೇಟ್ ಮಾಡಿರುವುದು 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ. ಹೀಗಾಗಿ, ಈ ಸಂಯುಕ್ತ 'ಹುಚ್ಚ ವೆಂಕಟ್ ತಂಗಿ' ಎಂಬ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿವೆ. ಅಂತಹ ಕೆಲ ಆಯ್ದ ಟ್ರೋಲ್ ಗಳು ಇಲ್ಲಿವೆ ನೋಡಿ....

ನೂತನ ಚಿತ್ರ - ಅಣ್ಣ ತಂಗಿ
ಅಣ್ಣನಾಗಿ ಹುಚ್ಚ ವೆಂಕಟ್, ತಂಗಿಯಾಗಿ ಸಂಯುಕ್ತ ಅಭಿನಯಿಸಲಿರುವ ಹೊಸ ಸಿನಿಮಾ 'ಅಣ್ಣ-ತಂಗಿ' ಸದ್ಯದಲ್ಲಿಯೇ ತೆರೆ ಕಾಣಲಿದೆ.(ಚಿತ್ರ ಕೃಪೆ: ಕಾಗಕ್ಕ ಗುಬ್ಬಕ್ಕ)

ಹುಚ್ಚ ವೆಂಕಟ್ ತಂಗಿಯೇ.!
ದೈಹಿಕ ಹಲ್ಲೆ ಮಾಡಿದ್ಮೇಲೆ, ಸಂಯುಕ್ತ ಹೆಗ್ಡೆ.. ಹುಚ್ಚ ವೆಂಕಟ್ ಸಹೋದರಿ ಅಂತಲೇ ಟ್ರೋಲ್ ಹುಡುಗರು ನಿರ್ಧರಿಸಿಬಿಟ್ಟಿದ್ದಾರೆ.(ಚಿತ್ರ ಕೃಪೆ: ಟ್ರೋಲ್ ಬಿಗ್ ಬಾಸ್ 5)

ಹುಚ್ಚ ವೆಂಕಟ್ ಅನಾಥ ಅಲ್ಲ
'ನಾನ್ ಅನಾಥ ಅಲ್ರೋ, ನನಗೂ ಒಬ್ಳು ತಂಗಿ ಇದಾಳ್ರೋ' ಅಂತ ಹುಚ್ಚ ವೆಂಕಟ್ ಹೇಳ್ತಿದ್ದಾರಂತೆ. ಅದು ದೈಹಿಕ ಹಲ್ಲೆ ನಡೆಸಿ ಸಂಯುಕ್ತ 'ಬಿಗ್ ಬಾಸ್' ಮನೆಯಿಂದ ಕಿಕ್ ಔಟ್ ಆದ್ಮೇಲೆ...(ಚಿತ್ರ ಕೃಪೆ: ಟ್ರೋಲ್ ಪಂಟ್ರು)

ಹೊಸ ಜೋಡಿಯ ಸೆಲ್ಫಿ
ಅತ್ತ ಸಮೀರಾಚಾರ್ಯ ಮೇಲೆ ಸಂಯುಕ್ತ ಕೈ ಮಾಡ್ತಿದ್ರೆ, ಇತ್ತ ಹೊಸ ಜೋಡಿ ವಿರಾಟ್-ಅನುಷ್ಕಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಬಿಜಿಯಿದ್ದಾರೆ.(ಚಿತ್ರ ಕೃಪೆ: ಟ್ರೋಲ್ ಬಿಗ್ ಬಾಸ್ 5)

ದಿವಾಕರ್ ಹೇಳಿದ ಮಾತು ಸತ್ಯ
''ಎಲ್ಲೆಲ್ಲೋ ಮುಟ್ಟಿದರು ಅಂತ ಇವತ್ತು ಅವರ ಮೇಲೆ ಹೇಳುತ್ತಾರೆ, ನಾಳೆ ಇನ್ನೊಬ್ಬರ ಮೇಲೆ ಹೇಳುತ್ತಾರೆ. ಸುಮ್ ಸುಮ್ನೆ ಯಾಕೆ ಬೇಕು.?'' ಅಂತ ದಿವಾಕರ್ ಹೇಳಿದ ಮಾತು ಸತ್ಯ ಎಂಬುದು ಟ್ರೋಲ್ ಹುಡುಗರ ಅಭಿಪ್ರಾಯ.(ಚಿತ್ರ ಕೃಪೆ: ಟ್ರೋಲ್ ಬಿಗ್ ಬಾಸ್ 5)


Click it and Unblock the Notifications











