'ಸರಿಯಾಗಿ ವಾಂಚುತ್ತೇನೆ' ಎಂದು ಮೊದಲೇ ವಾರ್ನಿಂಗ್ ಕೊಟ್ಟಿದ್ದ ಸಂಯುಕ್ತ.!
Recommended Video

'ಕಿರಿಕ್ ಪಾರ್ಟಿ' ಸಿನಿಮಾ ಇಂದ ಮಾತ್ರ ಅಲ್ಲ, ನಿಜ ಜೀವನದಲ್ಲಿಯೂ ಸಂಯುಕ್ತ ಹೆಗ್ಡೆ 'ಕಿರಿಕ್ ಪಾರ್ಟಿ' ಎಂಬ ಸಂಗತಿ ಮತ್ತೆ ಸಾಬೀತಾಗಿದೆ. ಅದು ಕನ್ನಡ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ-5'ನಲ್ಲಿ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ನಟಿ ಸಂಯುಕ್ತ ಹೆಗ್ಡೆ, ಇದೇ ಶೋನಲ್ಲಿ ಸ್ಪರ್ಧಿ ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿ 'ಕಿಕ್ ಔಟ್' ಆಗಿದ್ದಾರೆ.
ಟಾಸ್ಕ್ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಯುಕ್ತ ರನ್ನ ಸಮೀರಾಚಾರ್ಯ ಮುಟ್ಟಿದರಂತೆ. ಇದರಿಂದ ''ರೊಚ್ಚಿಗೆದ್ದು, ನಾನು ಕೈ ಮಾಡಿದೆ'' ಎನ್ನುವುದು ಸಂಯುಕ್ತ ವಾದ.
ಆದ್ರೆ, ಇಷ್ಟೆಲ್ಲ ರಾದ್ಧಾಂತ ನಡೆಯುವ ಮುನ್ನವೇ... ''ನಿಮ್ಮ ಮುಖಕ್ಕೆ ಸರಿಯಾಗಿ ವಾಂಚುತ್ತೇನೆ'' ಎಂದು ಸಮೀರಾಚಾರ್ಯಗೆ ಸಂಯುಕ್ತ 'ವಾರ್ನಿಂಗ್' ಕೊಟ್ಟಿದ್ದರು. ಇದನ್ನ ತಲೆಯಲ್ಲಿ ಇಟ್ಟುಕೊಂಡೇ ಸಮೀರಾಚಾರ್ಯ ಮೇಲೆ ಸಂಯುಕ್ತ ಕೈ ಮಾಡಿದ್ರಾ.? ಅಷ್ಟಕ್ಕೂ, ಸಂಯುಕ್ತ ವಾರ್ನಿಂಗ್ ಕೊಟ್ಟಿದ್ಯಾಕೆ.? ಸಂಪೂರ್ಣ ವಿವರ ಇಲ್ಲಿದೆ. ಓದಿರಿ....

ತಮಾಷೆ ಮಾಡುತ್ತಿದ್ದರು
ಬೆಡ್ ರೂಮ್ ಏರಿಯಾದಲ್ಲಿ ಜೆಕೆ ಮತ್ತು ಶ್ರುತಿ ಪ್ರಕಾಶ್ ಹೊಡೆದಾಡುತ್ತಾ ತಮಾಷೆ ಮಾಡುತ್ತಿದ್ದರು. ಆಗ, ಸಮೀರಾಚಾರ್ಯ ಕೂಡ ತಮಾಷೆಯಿಂದ ಶ್ರುತಿ ಪ್ರಕಾಶ್ ಬೆನ್ನಿಗೆ ಏಟು ಕೊಟ್ಟರು.

ಸಂಯುಕ್ತಗೆ ಸ್ವಲ್ಪ ಸಿಟ್ಟು
''ಯಾಕೆ ಹೊಡೆದ್ರಿ'' ಎನ್ನುತ್ತಾ ಸಂಯುಕ್ತ ಕೂಡ ತಮಾಷೆಯಿಂದ ಸಮೀರಾಚಾರ್ಯ ರನ್ನ ಹೊಡೆಯಲು ಆರಂಭಿಸಿದರು.

ಕ್ಷಮೆ ಕೇಳಿ ಎಂದ ಸಂಯುಕ್ತ
''ಸಾರಿ ಕೇಳಿ ಇಲ್ಲ ಅಂದ್ರೆ ಏಟು ಬೀಳುತ್ತೆ'' ಅಂತ ಸಮೀರಾಚಾರ್ಯ ಗೆ ಸಂಯುಕ್ತ ಹೊಡೆಯುತ್ತಲೇ ಇದ್ದರು.

ಮುಖಕ್ಕೆ ಹೊಡೆಯುತ್ತೇನೆ
''ಕಾಲಿಗೆ ಬಿದ್ದರೆ ಮುಖಕ್ಕೆ ಹೊಡೆಯುತ್ತೇನೆ. ಚಾಲೆಂಜ್ ಮಾಡಬೇಡಿ ನನಗೆ. ಈಗ ಅಲ್ಲದೇ ಹೋದರೂ, ಬರುವ ಟಾಸ್ಕ್ ನಲ್ಲಿ ಮುಖಕ್ಕೆ ಸರಿಯಾಗಿ ವಾಂಚುತ್ತೇನೆ'' ಎಂದು ಸಮೀರಾಚಾರ್ಯಗೆ ಸಂಯುಕ್ತ ಹೇಳಿದ್ದರು.

ಈಗಲೇ ಹೇಳುತ್ತಿದ್ದೇನೆ...
''ನಾಲ್ಕು ಜನ ಹುಡುಗಿಯರು ನಿಮ್ಮ ತಲೆ ಮೇಲೆ ಕೂತರೇ ನೀವೇನೂ ಮಾಡಲು ಸಾಧ್ಯ ಇಲ್ಲ. ಇವತ್ತು ಟಾಸ್ಕ್ ಬರಬೇಕು... ಹೇಳ್ತಿದ್ದೀನಿ ಈಗಲೇ, ನಾನು ಗ್ಯಾರೆಂಟಿ ಮೊಣಕೈಯಿಂದಲೇ ಹೊಡೆಯುತ್ತೇನೆ'' - ಸಂಯುಕ್ತ ಹೆಗ್ಡೆ

ವಾರ್ನಿಂಗ್ ಕೊಟ್ಟ ಸಂಯುಕ್ತ
''ನೀವು ಬನ್ನಿ ಇವತ್ತು ಹೊಡೆಯಬಾರದ ಜಾಗದಲ್ಲಿ ಹೊಡೆಯುತ್ತೇನೆ. ಸುರಕ್ಷತೆ ಕೂಡ ಇರಲ್ಲ ನಿಮಗೆ ಇವತ್ತು. ಇವತ್ತಿನ ಟಾಸ್ಕ್ ನಲ್ಲಿ ಏನಾದರೂ ಓಡುವುದು, ಹಿಡಿಯುವುದು ಇದ್ದರೆ, ಏನಾದರೂ ನೀವು ನನ್ನನ್ನ ಹಿಡಿದುಕೊಳ್ಳಬೇಕು. ಆಗ ಹೇಗೇಗೆಲ್ಲ ಹಿಡಿದುಕೊಂಡು ತಿರುಚಿ ಹಾಕುತ್ತೇನೆ ಅಂದ್ರೆ ನೋಡಿ.. ಇದು ವಾರ್ನಿಂಗ್ ನಿಮಗೆ...'' ಎಂದಿದ್ದರು ಸಂಯುಕ್ತ ಹೆಗ್ಡೆ. ಆಗ, ''ದಿ ಗೇಮ್ ಈಸ್ ಆನ್'' ಎಂದುಕೊಂಡು ಸಮೀರಾಚಾರ್ಯ ಎದ್ದು ಹೋದರು.

ಬೇಕು ಅಂತ ಹೊಡೆದ್ರಾ ಸಂಯುಕ್ತ.?
''ಟಾಸ್ಕ್ ಬಂದಾಗ ಹೊಡೆಯುತ್ತೇನೆ'' ಅಂತ ಸಂಯುಕ್ತ ತಮಾಷೆಗೆ ಹೇಳಿರಬಹುದು. ಆದ್ರೆ, ಸಂಯುಕ್ತ ಹೇಳಿದ ಹಾಗೆ, ಟಾಸ್ಕ್ ಸಂದರ್ಭದಲ್ಲಿ ಸಮೀರಾಚಾರ್ಯ ಹಾಗೂ ಸಂಯುಕ್ತ ನಡುವೆ ರಾದ್ಧಾಂತ ನಡೆದು ಹೋಯ್ತು. ಸಮೀರಾಚಾರ್ಯ ಮೇಲೆ ಸಂಯುಕ್ತ ಕೈ ಮಾಡಿದರು. ಭಾವಾವೇಶಕ್ಕೆ ಒಳಗಾಗಿ ಸಂಯುಕ್ತ ಏಟು ಕೊಟ್ಟಿರಬಹುದು. ಆದ್ರೆ, ವಾರ್ನಿಂಗ್ ಮಾತುಗಳನ್ನ ಕೇಳಿದ್ಮೇಲೆ, ಬೇಕು ಅಂತಲೇ ಹೊಡೆದ್ರಾ ಎಂಬ ಅನುಮಾನ ಮೂಡದೇ ಇರುವುದಿಲ್ಲ.


Click it and Unblock the Notifications











