ಸೂಕ್ಷ್ಮತೆ ಇಲ್ಲದೆ ನಡೆದುಕೊಂಡ ಕೃಷಿ ತಾಪಂಡಗೆ ಭಾರಿ ಮುಖಭಂಗ.!

By Harshitha

Recommended Video

Sudeep slams Krishi Thapanda | ಕೃಷಿ ತಾಪಂಡರನ್ನ ಬೆಂಡೆತ್ತಿದ ಸುದೀಪ್ | Filmibeat Kannada

ಪ್ಯಾಕೆಟ್ ಗಟ್ಟಲೆ ಹಾಲನ್ನು ಎತ್ತಿಡಲು ಪ್ಲಾನ್ ಮಾಡಿದಾಗ... ಒಂದು ಕಪ್ ಮೊಸರಿನ ಬಗ್ಗೆ ರಂಪ ಮಾಡುವಾಗ... ಪುದಿನ ಸೊಪ್ಪಿನ ಬಗ್ಗೆ ರಾದ್ಧಾಂತ ಶುರು ಮಾಡಿದಾಗ ನಟಿ ಕೃಷಿಗೆ ಇದ್ದ ಜಾಣ್ಮೆ, ಬುದ್ಧಿವಂತಿಕೆ, ಚಾಕಚಕ್ಯತೆ, ಸೂಕ್ಷ್ಮತೆ... ನಟಿ ಸಂಯುಕ್ತ 'ಕಿಕ್ ಔಟ್' ಆದಾಗ ಇರಲಿಲ್ಲವೇನೋ.?

'ಬಿಗ್ ಬಾಸ್' ಮನೆಯ ಮುಖ್ಯ ನಿಯಮ ಮುರಿದು... ಸಮೀರಾಚಾರ್ಯ ಮೇಲೆ ಕೈ ಮಾಡಿ... ವೃತ್ತಿ ಜೀವನಕ್ಕೆ ಮಸಿ ಬಳಿದುಕೊಂಡು ''ಎಷ್ಟೊಂದು ಕಳೆದುಕೊಂಡು ಹೋಗುತ್ತಿದ್ದೇನೆ'' ಅಂತ ಕಣ್ಣೀರು ಸುರಿಸುತ್ತಾ ಸಂಯುಕ್ತ ಹೊರ ಹೋಗುತ್ತಿದ್ದರೆ, ಪಕ್ಕದಲ್ಲಿಯೇ ಇದ್ದ ನಟಿ ಕೃಷಿಗೆ 'ಶೂ' ಚಿಂತೆ.!

ತಮ್ಮ ತಪ್ಪಿನ ಅರಿವಾಗಿ ಸಂಯುಕ್ತ ಪಶ್ಚಾತ್ತಾಪ ಪಡುತ್ತಿದ್ದರೆ, ಅವರನ್ನ ಸಮಾಧಾನ ಮಾಡದ ಕೃಷಿ ''ಶೂ ಕೊಟ್ಟು ಹೋಗಲು'' ಸಂಯುಕ್ತ ಬಳಿ ಕೇಳಿಕೊಂಡರು. ಇದನ್ನ ಗಮನಿಸಿದ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕೃಷಿಗೆ ಬೆಂಡೆತ್ತಿದರು.! ಮುಂದೆ ಓದಿರಿ...

ಸಂಯುಕ್ತ ರನ್ನ ಹೊರ ಹಾಕಿದ 'ಬಿಗ್ ಬಾಸ್'

ಸಂಯುಕ್ತ ರನ್ನ ಹೊರ ಹಾಕಿದ 'ಬಿಗ್ ಬಾಸ್'

'ಬಿಗ್ ಬಾಸ್' ಮನೆಯ ಮೂಲ ನಿಯಮಗಳ ಅನುಸಾರ, ಮನೆಯಲ್ಲಿ ಯಾವುದೇ ಕಾರಣಕ್ಕೂ, ಯಾವುದೇ ಸದಸ್ಯರು ದೈಹಿಕ ಹಲ್ಲೆ ಮಾಡುವಂತಿಲ್ಲ. ಆದ್ರೆ, ಸಂಯುಕ್ತ ಭಾವಾವೇಶಕ್ಕೆ ಒಳಗಾಗಿ ಸಮೀರಾಚಾರ್ಯ ಮೇಲೆ ಕೈ ಮಾಡಿದ್ರಿಂದಾಗಿ, 'ಬಿಗ್ ಬಾಸ್' ಆಕೆಯನ್ನ ಹೊರಹಾಕಿದರು.

ತುಂಬಾ ಕೆಟ್ಟ ನಿರ್ಗಮನ

ತುಂಬಾ ಕೆಟ್ಟ ನಿರ್ಗಮನ

''ಸೋ ಬ್ಯಾಡ್. ಇದು ನನಗೆ ತುಂಬಾ ಕೆಟ್ಟದ್ದು. ನಾನು ಇಲ್ಲಿ ಎಷ್ಟು ಕಳೆದುಕೊಂಡು ಹೋಗುತ್ತಿದ್ದೇನೆ ಗೊತ್ತಾ.?'' ಎನ್ನುತ್ತಲೇ ನಟಿ ಸಂಯುಕ್ತ ಹೊರ ಹೋಗಲು ಸಿದ್ಧತೆ ನಡೆಸಿದರು. ಆಗಲೇ, ತಮಗೆ ಶೂ ಕೊಟ್ಟು ಹೋಗಲು ಸಂಯುಕ್ತ ಬಳಿ ಕೃಷಿ ಕೇಳಿಕೊಂಡರು.

ಸುದೀಪ್ ಹೇಳಿದ್ದೇನು.?

ಸುದೀಪ್ ಹೇಳಿದ್ದೇನು.?

''ತುಂಬಾ ಕಳೆದುಕೊಂಡು ಹೋಗುತ್ತಿದ್ದೇನೆ' ಅಂತ ಸಂಯುಕ್ತ ಹೇಳುತ್ತಿರುವಾಗ, ಶೂ ಕೊಟ್ಟು ಹೋಗು ಅಂತ ಕೇಳ್ತೀರಾ ಕೃಷಿ... how insensitive it is.? ಐ ಆಮ್ ಸಾರಿ. ಇದು ನಿಮಗೆ ಪ್ರಶ್ನೆಯೇ ಅಲ್ಲ'' ಅಂತ ಸುದೀಪ್ ಬೇಸರದಿಂದ ನುಡಿದಾಗ, ''ನನಗೆ ಗೊತ್ತು ಅದು ತುಂಬಾ insensitive ಅಂತ...'' ಎಂದು ಕೃಷಿ ಹೇಳುವಷ್ಟರಲ್ಲಿ, ''ಒಳ್ಳೆಯದ್ದು. ಮ್ಯಾಟರ್ ಅಲ್ಲಿಗೆ ಮುಗಿಯಿತು. ವಿವರಣೆ ಕೊಡಲು ಹೋಗಿ ಮತ್ತೆ ಚಿಕ್ಕವರು ಆಗಬೇಡಿ'' ಎಂದು ಗರಂ ಆದರು ಸುದೀಪ್.

ತಲೆ ತಗ್ಗಿಸಿದ ಕೃಷಿ

ತಲೆ ತಗ್ಗಿಸಿದ ಕೃಷಿ

''ಸಮಯ, ಸಂದರ್ಭ, ಸನ್ನಿವೇಶ ನೋಡಬೇಕು ಅಲ್ಲವೇ... ಸೂತಕದ ಮನೆಗೆ ಹೋಗಿ ಐಸ್ ಕ್ರೀಮ್ ಕೇಳಿದ ಹಾಗೆ ಆಗಲಿಲ್ವಾ.?'' ಎಂದು ಕೃಷಿಗೆ ಸುದೀಪ್ ಕೇಳಿದಾಗ, ಕೃಷಿ ತಲೆ ತಗ್ಗಿಸಿದರು.

More from Filmibeat

English summary
Bigg Boss Kannada 5: Week 10: Kiccha Sudeep slams Krishi Thapanda for her behaviour during Samyuktha's exit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X