ನಟಿ ಸಂಯುಕ್ತ ಹೆಗ್ಡೆ ಮಾಡಿದ್ದು ತಪ್ಪು: ಇದು ಕಿಚ್ಚ ಸುದೀಪ್ ಕೊಟ್ಟ ತೀರ್ಪು.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ನಟಿ ಸಂಯುಕ್ತ ಹೆಗ್ಡೆ, ಅದೇ ಗೌರವದಿಂದ ಹೊರಗೆ ಹೋಗುವ ಬದಲು... 'ಬಿಗ್ ಬಾಸ್' ಮನೆಯ ಮೂಲ ನಿಯಮ ಉಲ್ಲಂಘಿಸಿ, ಸಮೀರಾಚಾರ್ಯ ಮೇಲೆ ದೈಹಿಕ ಹಲ್ಲೆ ನಡೆಸಿ, 'ಬಿಗ್ ಬಾಸ್'ರಿಂದ ಹೊರದಬ್ಬಿಸಿಕೊಂಡರು.
ಆಟ ಚಾಲ್ತಿಯಲ್ಲಿ ಇದ್ದ ಸಂದರ್ಭದಲ್ಲಿ ಚಂದನ್ ಶೆಟ್ಟಿ ಮೇಲೆ ಕೂತ ಸಂಯುಕ್ತ, ಚಂದನ್ ಶೆಟ್ಟಿಯನ್ನ ಬಿಡಿಸಲು ಬಂದ ಸಮೀರಾಚಾರ್ಯ ಮೇಲೆ 'ಗಂಭೀರ ಆರೋಪ' ಮಾಡಿ, ಅವರಿಗೆ ಹೊಡೆದರು. 'ಬಿಗ್ ಬಾಸ್' ಮನೆಯೊಳಗೆ ಯಾರು ಯಾರ ಮೇಲೂ ಹಲ್ಲೆ ಮಾಡುವಂತಿಲ್ಲ. ಈ ನಿಯಮ ಮುರಿದ ಸಂಯುಕ್ತಗೆ 'ಬಿಗ್ ಬಾಸ್' ಗೇಟ್ ಪಾಸ್ ನೀಡಿದರು.
ಈ ಇಡೀ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸಿ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಪಂಚಾಯತಿ ನಡೆಸಿದರು. ಆಗ ಸುದೀಪ್ ಹೇಳಿದಿಷ್ಟು...

ನಡೆಯಬಾರದ ಘಟನೆ, ನಡೆದು ಹೋಯ್ತು.!
''ಎಲ್ಲ ವಿಚಾರಗಳಿಗೂ ದೃಷ್ಟಿ ಬೊಟ್ಟು ಇಡುವ ತರಹ ಒಂದು ಘಟನೆ ಮನೆಯಲ್ಲಿ ನಡೆಯುತ್ತೆ. ಆ ಘಟನೆ ನಡೆಯಬಾರದಿತ್ತು. ನಡೆದು ಹೋಯ್ತು'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ಆರಂಭದಲ್ಲಿಯೇ ಸುದೀಪ್ ನುಡಿದರು.

ಸಂಯುಕ್ತ ಮಾಡಿದ್ದು ತಪ್ಪು.!
''ಅತಿಥಿಯಾಗಿ ಬಂದ ಸಂಯುಕ್ತ, ಸಮೀರಾಚಾರ್ಯ ಮೇಲೆ ಕೈ ಮಾಡಿದ್ದು ತಪ್ಪು. ಹಾಗೇ ಅದು ನೋವಿನ ವಿಚಾರ. ಹೊಡೆದಿದ್ದಕ್ಕೆ ಅವರು ಕೊಟ್ಟ ಕಾರಣ, ವಿವರಣೆಗಳು ಯಾವುದೂ ಒಪ್ಪುವ ಹಾಗೆ ಇರಲಿಲ್ಲ'' ಎಂದರು ಸುದೀಪ್

ಇದು ಸರಿಯಿಲ್ಲ
''ಈ ಬೇಜವಾಬ್ದಾರಿ ವರ್ತನೆಗೆ ಸಂಯುಕ್ತ ಅವರು ಮನೆಯಿಂದ ಹೊರಗೆ ಹೋದರು. ಸಂಯುಕ್ತ ಅವರೇ.... not right'' - ಸುದೀಪ್

ಅವಮಾನ, ನೋವು ಅರ್ಥ ಆಗಿದೆ
''ಸಮೀರಾಚಾರ್ಯ ಅವರೇ... ಆ ಸಮಯದಲ್ಲಿ ನಿಮಗೆ ಆದ ಅವಮಾನ, ನೋವು ನಮಗೆ ಅರ್ಥ ಆಗುತ್ತೆ'' ಎಂದು ಸಮೀರಾಚಾರ್ಯಗೆ ಸಮಾಧಾನ ಪಡಿಸಿದರು ಸುದೀಪ್.


Click it and Unblock the Notifications











