twitter
    For Quick Alerts
    ALLOW NOTIFICATIONS  
    For Daily Alerts

    'ಡಬಲ್ ಗೇಮ್' ದಿವಾಕರ್: ಹೊರಗೆ ಹೇಳಿದ್ದೊಂದು, ಒಳಗೆ ಬಂದು ಮಾಡಿದ್ದೇ ಮತ್ತೊಂದು.!

    By Harshitha
    |

    Recommended Video

    ಬಿಗ್ ಬಾಸ್ ಕನ್ನಡ ಸೀಸನ್ 5 : ದಿವಾಕರ್ ಡಬಲ್ ಗೇಮ್ ಬಯಲು | Filmibeat Kannada

    ''ಎಲ್ಲರ ಮುಂದೆ ಇರುವಾಗ ಒಂದು ತರಹ, ಯಾರೂ ಇಲ್ಲದೆ ಇರುವಾಗ ಮತ್ತೊಂದು ತರಹ ನಡೆದುಕೊಳ್ಳುತ್ತಾರೆ'' ಎಂಬ ಕಾರಣ ಕೊಟ್ಟು ಮೊನ್ನೆಯಷ್ಟೇ ದಿವಾಕರ್ ರವರನ್ನ ರಿಯಾಝ್ ನಾಮಿನೇಟ್ ಮಾಡಿದರು.

    ''ರಿಯಾಝ್ ಕೊಟ್ಟ ಕಾರಣ ಸರಿಯಿಲ್ಲ, ಡಬ್ಬ'' ಎನ್ನುತ್ತ ದಿವಾಕರ್ ಸಿಡಿದೆದ್ದಿದ್ದರು. ಅಂದು ರಿಯಾಝ್ ಹೇಳಿದ ಮಾತನ್ನ ಯಾರು ನಂಬಿದ್ರೋ ಬಿಟ್ರೋ... ಗೊತ್ತಿಲ್ಲ. ಆದ್ರೆ ಇಂದು ದಿವಾಕರ್ ನಡವಳಿಕೆ ನೋಡಿದ್ಮೇಲೆ, ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಅವರಿಗೆ ದಿವಾಕರ್ ರವರ 'ಡಬಲ್ ಗೇಮ್' ಅರ್ಥ ಆಗಿದೆ.

    ಇಡೀ ತಂಡ ನಿರ್ಧಾರ ಮಾಡುವಾಗ ಒಂದನ್ನು ಹೇಳಿ, ಕನ್ಫೆಶನ್ ರೂಮ್ ಒಳಗೆ ಹೋದ್ಮೇಲೆ ಮತ್ತೊಂದನ್ನು ಮಾಡಿದ ದಿವಾಕರ್ ಇದೀಗ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮುಂದೆ ಓದಿರಿ...

    ಮೊನ್ನೆ ರಿಯಾಝ್ ಹೇಳಿದ್ದೂ ಅದನ್ನೇ.!

    ಮೊನ್ನೆ ರಿಯಾಝ್ ಹೇಳಿದ್ದೂ ಅದನ್ನೇ.!

    ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ರಿಯಾಝ್, ದಿವಾಕರ್ ರವರನ್ನ ನೇರವಾಗಿ ನಾಮಿನೇಟ್ ಮಾಡಿದರು. ದಿವಾಕರ್ ರವರನ್ನ ನಾಮಿನೇಟ್ ಮಾಡುವಾಗ, ''ಕಳೆದ ವಾರ ನನಗೆ ಬೆಸ್ಟ್ ಪರ್ಫಾಮರ್ ಪಟ್ಟ ಕೊಡಲು ಎಲ್ಲರೂ ಒಪ್ಪಿಕೊಂಡರು. ಆದ್ರೆ, ಸಮೀರಾಚಾರ್ಯ ಅವರಿಗೆ ಬೆಸ್ಟ್ ಪರ್ಫಾಮರ್ ಪಟ್ಟ ಕೊಡಬೇಕು ಅಂತ ದಿವಾಕರ್ ಹೇಳಿದರು. ಆಮೇಲೆ ಯಾರೂ ಇಲ್ಲದ ಸಮಯದಲ್ಲಿ ಬಂದು ನನ್ನನ್ನ ತಬ್ಬಿಕೊಂಡು, ಕ್ಷಮಿಸಿ, ಬೇಜಾರು ಮಾಡಿಕೊಳ್ಳಬೇಡಿ, ತಪ್ಪು ತಿಳಿದುಕೊಳ್ಳಬೇಡಿ ಅಂತ ಹೇಳಿದರು. ಅದು ಯಾರಿಗೂ ಗೊತ್ತಾಗಲಿಲ್ಲ. ಇಂತಹ ಆಟ ಬೇಡ. ಏನಿದ್ದರೂ ನೇರವಾಗಿ ಆಡಿ'' ಎಂಬ ಕಾರಣ ಕೊಟ್ಟರು ರಿಯಾಝ್.

    ದಿವಾಕರ್ ಗೆ ಕ್ಲಾಸ್ ಲೆಸ್ ಈಡಿಯೆಟ್ ಎಂದ ರಿಯಾಝ್.! ದಿವಾಕರ್ ಗೆ ಕ್ಲಾಸ್ ಲೆಸ್ ಈಡಿಯೆಟ್ ಎಂದ ರಿಯಾಝ್.!

    ರಿಯಾಝ್ ವಿರುದ್ಧ ಸಿಡಿದೆದ್ದ ದಿವಾಕರ್

    ರಿಯಾಝ್ ವಿರುದ್ಧ ಸಿಡಿದೆದ್ದ ದಿವಾಕರ್

    ''ಏನೇ ಇದ್ದರೂ ಎದುರುಗಡೆ ಮಾತನಾಡುತ್ತೇನೆ. ಹಿಂದೆ ಒಂದು ಮುಂದೆ ಇನ್ನೊಂದು ಮಾತನಾಡುವ ಬುದ್ಧಿ ನಿಮಗೆ ಇದೆ. ನನಗೆ ಇಲ್ಲ. ಕೊಟ್ಟ ಕಾರಣ ಸರಿಯಿಲ್ಲ. ಡಬ್ಬ ತರಹ ಇದೆ. ನಾಮಿನೇಷನ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದ್ರೆ, ಕೆಲಸಕ್ಕೆ ಬಾರದ ಕಾರಣ ಕೊಟ್ಟರು. ಬರೀ ತಲೆಗೆ ಹುಳ ಬಿಡುತ್ತಾರೆ. ಅವರಿವರ ತಲೆ ಕೆಡಿಸುತ್ತಾರೆ. ಬರೀ ಡವ್ ಮಾಡ್ತಾರೆ. ಅವರ ಮಾತನ್ನ ನಂಬಬಾರದು'' ಎನ್ನುತ್ತ ಸಿಡಿದೆದ್ದರು ದಿವಾಕರ್.

    ಮಾಡೋದೆಲ್ಲ ಮಾಡಿ ಈಗ ಕ್ಷಮೆ ಕೇಳಿದ್ರೆ ಸರಿ ಹೋಗುತ್ತಾ.?ಮಾಡೋದೆಲ್ಲ ಮಾಡಿ ಈಗ ಕ್ಷಮೆ ಕೇಳಿದ್ರೆ ಸರಿ ಹೋಗುತ್ತಾ.?

    ಹೊರಗೆ ಒಂದು ಒಳಗೆ ಮತ್ತೊಂದು ಹೇಳಿದ ದಿವಾಕರ್.!

    ಹೊರಗೆ ಒಂದು ಒಳಗೆ ಮತ್ತೊಂದು ಹೇಳಿದ ದಿವಾಕರ್.!

    ರಿಯಾಝ್ ಕೊಟ್ಟ ಹೇಳಿಕೆ ಸರಿಯಿಲ್ಲ ಅಂತ ಕೂಗಾಡಿದ ದಿವಾಕರ್, ಈಗ ಹೊರಗೆ ಒಂದು, ಒಳಗೆ ಇನ್ನೊಂದು ಎಂಬಂತೆ ನಡೆದುಕೊಂಡಿದ್ದಾರೆ.

    <br />'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!
    'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!

    ಆಗಿದ್ದೇನು.?

    ಆಗಿದ್ದೇನು.?

    ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಸುವ ಆಡಳಿತವೇ 'ಪ್ರಜಾಪ್ರಭುತ್ವ'. ಈ ಪ್ರಜಾಪ್ರಭುತ್ವದ ಮಹತ್ವ ತಿಳಿಸುವ ಸಲುವಾಗಿ ಈ ವಾರ 'ಪ್ರಜಾರಾಜ್ಯ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದಾರೆ 'ಬಿಗ್ ಬಾಸ್'. ಈ ಚಟುವಟಿಕೆಯ ಅನುಸಾರ, ಮನೆಯ ಸದಸ್ಯರನ್ನು ಎರಡು ತಂಡ (ರಾಜಕೀಯ ಪಕ್ಷ)ಗಳಾಗಿ ವಿಭಜಿಸಲಾಗಿದೆ. ಒಂದು ತಂಡ (ಪಕ್ಷ)ದಲ್ಲಿ ರಿಯಾಝ್, ಚಂದನ್ ಶೆಟ್ಟಿ, ನಿವೇದಿತಾ, ದಿವಾಕರ್ ಇದ್ದರೆ ಮತ್ತೊಂದು ತಂಡ (ಪಕ್ಷ)ದಲ್ಲಿ ಜೆಕೆ, ಅನುಪಮಾ, ಕೃಷಿ ಹಾಗೂ ಶ್ರುತಿ ಇದ್ದಾರೆ.

    ಮಧ್ಯರಾತ್ರಿ 'ಶಾಕ್' ಕೊಟ್ಟ 'ಬಿಗ್ ಬಾಸ್': ಹಿಂದಿನ ಮರ್ಮ ಏನು.? ಮಧ್ಯರಾತ್ರಿ 'ಶಾಕ್' ಕೊಟ್ಟ 'ಬಿಗ್ ಬಾಸ್': ಹಿಂದಿನ ಮರ್ಮ ಏನು.?

    ಮುಖಂಡರ ಆಯ್ಕೆ

    ಮುಖಂಡರ ಆಯ್ಕೆ

    ತಮ್ಮ ತಮ್ಮ ಪಕ್ಷಗಳ ಮುಖಂಡರ ಆಯ್ಕೆ ಬಗ್ಗೆ ಪಕ್ಷಗಳಲ್ಲಿ ಚರ್ಚೆ ನಡೆಯುತ್ತಿದ್ದಾಗ, ''ನಾನು ಮುಖಂಡ ಆಗುವುದಿಲ್ಲ'' ಎಂದು ರಿಯಾಝ್ ಹೇಳಿದರು. ಆಗ ''ಎಲ್ಲರೂ ಸೇರಿ ನಿವೇದಿತಾ ರನ್ನ ಮಾಡಿಬಿಡೋಣ.?'' ಎಂದು ಐಡಿಯಾ ಕೊಟ್ಟಿದ್ದೇ ದಿವಾಕರ್.

    'ಎಕ್ಸ್ ಟ್ರಾ ಮೆಣಸಿನಕಾಯಿ' ಹಾಕುವ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?'ಎಕ್ಸ್ ಟ್ರಾ ಮೆಣಸಿನಕಾಯಿ' ಹಾಕುವ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?

    ನಾಯಕಿ ಆಗುತ್ತೇನೆ ಎಂದ ನಿವೇದಿತಾ

    ನಾಯಕಿ ಆಗುತ್ತೇನೆ ಎಂದ ನಿವೇದಿತಾ

    ದಿವಾಕರ್ ಮಾತಿಗೆ ಜೈ ಎನ್ನುತ್ತ ''ನಿವೇದಿತಾ ರನ್ನೇ ನಮ್ಮ ಪಕ್ಷದ ಮುಖಂಡರನ್ನಾಗಿ ಮಾಡೋಣ. ಅದಕ್ಕೂ ಮೊದಲು ಅವರ ವಾದ ಏನು ಅಂತ ಆಲಿಸೋಣ'' ಎಂದರು ರಿಯಾಝ್. ಆಗ, ''ಇಡೀ ಪಕ್ಷದ ನಿರ್ಧಾರವನ್ನ ಕೇಳಿಸಿಕೊಂಡು, ಅದು ಸರಿಯೋ ತಪ್ಪೋ ಅಂತ ತೀರ್ಮಾನ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ'' ಅಂತ ನಿವೇದಿತಾ ಹೇಳಿದರು.

    ಮೊನ್ನೆ ಹಾಗೆ, ಇಂದು ಹೀಗೆ: ಅದ್ಭುತ ಅಂದ್ರೆ ಇದು ನೋಡಿ.!ಮೊನ್ನೆ ಹಾಗೆ, ಇಂದು ಹೀಗೆ: ಅದ್ಭುತ ಅಂದ್ರೆ ಇದು ನೋಡಿ.!

    ಉಲ್ಟಾ ಹೊಡೆದ ದಿವಾಕರ್

    ಉಲ್ಟಾ ಹೊಡೆದ ದಿವಾಕರ್

    ಮುಖಂಡರ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ನಿವೇದಿತಾಗೆ ಚಂದನ್ ಶೆಟ್ಟಿ ಹಾಗೂ ರಿಯಾಝ್ ಬೆಂಬಲ ನೀಡಿದರು. ಆದ್ರೆ, ದಿವಾಕರ್ ಮಾತ್ರ 'ರಿಯಾಝ್ ಗೆ ಬೆಂಬಲ ನೀಡುತ್ತೇನೆ' ಎನ್ನುವ ಮೂಲಕ ಉಲ್ಟಾ ಹೊಡೆದರು.

    ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

    ಮುಖಂಡರ ಚುನಾವಣೆ

    ಮುಖಂಡರ ಚುನಾವಣೆ

    ತಮ್ಮ ತಮ್ಮ ಪಕ್ಷಗಳಿಗೆ ಮುಖಂಡರನ್ನು ಆಯ್ಕೆ ಮಾಡಲು, ಎಲ್ಲರೂ ಗುಪ್ತವಾಗಿ ಮತದಾನ ಮಾಡಬೇಕಿತ್ತು. ಮುಖಂಡ ಸ್ಥಾನಕ್ಕೆ ಆಕಾಂಕ್ಷಿ ಆಗಿರುವವರು ತಮ್ಮ ಹೆಸರನ್ನು ತಾವೇ ಸೂಚಿಸಿಕೊಳ್ಳಬಹುದಿತ್ತು. ಹಾಗೇ ಮತ ಚಲಾಯಿಸಬಹುದಿತ್ತು.

    ಹೇಳಿದ್ದು ಒಂದು, ಮಾಡಿದ್ದು ಇನ್ನೊಂದು

    ಹೇಳಿದ್ದು ಒಂದು, ಮಾಡಿದ್ದು ಇನ್ನೊಂದು

    ''ನಿವೇದಿತಾ ಗೌಡ ಮುಖಂಡರಾಗಲಿ'' ಎಂದು ಒಮ್ಮೆ ಹೇಳಿ, ''ರಿಯಾಝ್ ಗೆ ಬೆಂಬಲ ನೀಡುತ್ತೇನೆ'' ಎಂದು ಎಲ್ಲರ ಸಮ್ಮುಖದಲ್ಲಿ ನುಡಿದ ದಿವಾಕರ್, ಕನ್ಫೆಶನ್ ರೂಮ್ ಒಳಗೆ ಹೋದ್ಮೇಲೆ ''ನಾನೇ ಮುಖಂಡ ಆಗಬೇಕು'' ಎನ್ನುತ್ತ ತಮ್ಮ ವೋಟ್ ನ ತಮಗೆ ಹಾಕಿಕೊಂಡರು.

    ರಟ್ಟಾಯ್ತು ಡಬಲ್ ಗೇಮ್

    ರಟ್ಟಾಯ್ತು ಡಬಲ್ ಗೇಮ್

    ಒಳಗೆ ಬಂದು ತಮ್ಮ ಪರ ತಾವೇ ಮತ ಚಲಾಯಿಸಿಕೊಂಡ್ಮೇಲೆ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯಗೆ ದಿವಾಕರ್ 'ಡಬಲ್ ಗೇಮ್' ಅರ್ಥ ಆಯ್ತು. ''ಅಲ್ಲಿ ಹೇಳಿದ್ದೇ ಒಂದು, ಇಲ್ಲಿ ಬಂದು ಮಾಡಿದ್ದೇ ಇನ್ನೊಂದು. ಒಳಗೆ ಒಂದು ಹೊರಗೆ ಇನ್ನೊಂದು ಪ್ಲಾನ್ ಮಾಡಿದ್ರಿಂದ ದಿವಾಕರ್ ರನ್ನೇ ಮುಖಂಡರನ್ನಾಗಿ ಮಾಡಿ ಮಜಾ ತೆಗೆದುಕೊಳ್ಳಬೇಕು'' ಎಂದು ಸೀಕ್ರೆಟ್ ರೂಮ್ ನಲ್ಲಿ ಇದ್ದ ಇಬ್ಬರೂ ನಿರ್ಧಾರ ಮಾಡಿದರು.

    ಮೂವರಿಗೆ ಶಾಕ್.!

    ಮೂವರಿಗೆ ಶಾಕ್.!

    ''ಪಕ್ಷದ ಮುಖಂಡ ದಿವಾಕರ್'' ಎಂದು 'ಬಿಗ್ ಬಾಸ್' ಘೋಷಿಸುತ್ತಿದ್ದಂತೆಯೇ, ರಿಯಾಝ್, ಚಂದನ್ ಹಾಗೂ ನಿವೇದಿತಾ ಶಾಕ್ ಆದರು. ''ಇದು ಹೇಗೆ ಸಾಧ್ಯ'' ಎಂದು ಆಲೋಚಿಸತೊಡಗಿದರು. ಆದ್ರೆ, ದಿವಾಕರ್ ಉಲ್ಟಾ ಹೊಡೆದ ಪರಿಣಾಮ ಹೀಗಾಯ್ತು ಅನ್ನೋದು ಪಾಪ.. ಅವರಿಗೆ ಗೊತ್ತಿಲ್ಲ.

    ಚಳ್ಳೆಹಣ್ಣು ತಿನಿಸುತ್ತಿರುವುದು ದಿವಾಕರ್.!

    ಚಳ್ಳೆಹಣ್ಣು ತಿನಿಸುತ್ತಿರುವುದು ದಿವಾಕರ್.!

    ದಿವಾಕರ್ ರವರ ಈ ಆಟ ನೋಡಿದ್ಮೇಲೆ, ''ಚಳ್ಳೆಹಣ್ಣು ತಿನಿಸುತ್ತಿರುವುದು ದಿವಾಕರ್. ನಿವೇದಿತಾ ಅಲ್ಲ'' ಎಂಬ ತೀರ್ಮಾನಕ್ಕೆ ಬಂದರು ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ.

    English summary
    Bigg Boss Kannada 5: Week 11: Diwakar's double game revealed.
    Thursday, December 28, 2017, 11:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X