ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹನ್ನೊಂದನೇ ವಾರ ಅಚ್ಚರಿಯ ಬೆಳವಣಿಗೆ ನಡೆಯಿತು. 'ಬಿಗ್ ಬಾಸ್' ಮನೆಯಿಂದ ದಿಢೀರ್ ಅಂತ ನಾಪತ್ತೆ ಆಗಿದ್ದ ಜಯಶ್ರೀನಿವಾಸನ್ ಎಲಿಮಿನೇಟ್ ಆದರು. ಇನ್ನೂ ನಾಮಕಾವಸ್ತೆಗೆ 'ಬಿಗ್ ಬಾಸ್' ಮನೆಯಿಂದ ಹೊರಬಂದಿರುವ ದಿವಾಕರ್ ಸೀಕ್ರೆಟ್ ರೂಮ್ ಗೆ ತೆರಳಿದರು.
'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ಮನೆಯ ಸದಸ್ಯರು ಹಾಗೂ ಸೀಕ್ರೆಟ್ ರೂಮ್ ನಲ್ಲಿದ್ದ ಸದಸ್ಯರ ಜೊತೆ ಪ್ರತ್ಯೇಕವಾಗಿ ಪಂಚಾಯತಿ ನಡೆಸಿದರು ಕಿಚ್ಚ ಸುದೀಪ್.

ವಾರದ ಇಡೀ ಕಥೆಯನ್ನ ಇಟ್ಟುಕೊಂಡು ಕಿಚ್ಚ ಸುದೀಪ್ ಪಂಚಾಯತಿ ನಡೆಸಿದ ಬಳಿಕ, ಜಯಶ್ರೀನಿವಾಸನ್ ಅವರನ್ನ ಸೀಕ್ರೆಟ್ ರೂಮ್ ನಿಂದ ಹೊರಗೆ ಕರೆದರು. ಅಲ್ಲದೇ, ಸೀಕ್ರೆಟ್ ರೂಮ್ ನಲ್ಲಿ ಜಯಶ್ರೀನಿವಾಸನ್ ಜೊತೆಗೆ ಇದ್ದ ಸಮೀರಾಚಾರ್ಯ ಅವರನ್ನ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸಿದರು.
ಇತ್ತ 'ಬಿಗ್ ಬಾಸ್' ಮನೆಯೊಳಗೆ ಎಲಿಮಿನೇಷನ್ ನಡೆಯಬೇಕಾದ ಕಾರಣ ದಿವಾಕರ್ ರವರನ್ನ ಔಟ್ ಮಾಡಿದಂತೆ ಮಾಡಿ ಸೀಕ್ರೆಟ್ ರೂಮ್ ಒಳಗೆ ಕಳುಹಿಸಿಕೊಡಲಾಗಿದೆ.
ಇಷ್ಟೆಲ್ಲ ಟ್ವಿಸ್ಟ್ ಕೊಟ್ಟಿರುವ ಕಾರಣ, ಏನು ನಡೆಯುತ್ತಿದೆ ಎಂಬ ಗೊಂದಲದಲ್ಲಿ ಸದ್ಯ 'ಬಿಗ್ ಬಾಸ್' ಸ್ಪರ್ಧಿಗಳಿದ್ದಾರೆ.


Click it and Unblock the Notifications











