»   » ಸ್ಯಾಂಡಲ್ ವುಡ್ ಗೆ ಹೊಸ ವಿಲನ್ ಎಂಟ್ರಿ: ಯಾರದು ಗೊತ್ತೇ.?

ಸ್ಯಾಂಡಲ್ ವುಡ್ ಗೆ ಹೊಸ ವಿಲನ್ ಎಂಟ್ರಿ: ಯಾರದು ಗೊತ್ತೇ.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಗೆ ಸದ್ಯದಲ್ಲಿಯೇ ಹೊಸ ವಿಲನ್ ಒಬ್ಬರು ಎಂಟ್ರಿಕೊಡಲಿದ್ದಾರೆ. ಯಾರದು, ಯಾವ ಸಿನಿಮಾಗೆ ಅಂತ ತಲೆ ಕೆರೆದುಕೊಳ್ಳುವ ಮುನ್ನ ಪೂರ್ತಿ ಮ್ಯಾಟರ್ ಓದಿಬಿಡಿ..

ಸ್ಯಾಂಡಲ್ ವುಡ್ ಗೆ ವಿಲನ್ ಆಗಿ ಎಂಟ್ರಿಕೊಡಲಿರುವವರು ಬೇರೆ ಯಾರೂ ಅಲ್ಲ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ಜಯಶ್ರೀನಿವಾಸನ್.!

ಹೌದು, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗೆ ವಿಲನ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಬೇಕು ಎಂಬ ಬಯಕೆ ಶುರು ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿರುವ ಜಯಶ್ರೀನಿವಾಸನ್, 'ಬಿಗ್ ಬಾಸ್' ಮನೆಯೊಳಗೆ ಭರ್ಜರಿಯಾಗಿ ಮನರಂಜನೆ ನೀಡುತ್ತಿದ್ದಾರೆ.

Bigg Boss Kannada 5: Week 11: Jayasreenivasan wants to become villain in sandalwood

'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ.!

ಪಂಚಿಂಗ್ ಡೈಲಾಗ್ ಗಳಿಂದ ಎಲ್ಲರನ್ನೂ ನಕ್ಕು ನಲಿಸುತ್ತಿರುವ ಜಯಶ್ರೀನಿವಾಸನ್ ಗೆ ವಿಲನ್ ಆಗಬೇಕು ಎಂಬ ಆಸೆ ಹುಟ್ಟಿದೆ. ''ನೋಡೋಕೆ ಸ್ವಲ್ಪ ಕನ್ಫ್ಯೂಶನ್ ಆಗಿ ಕಾಮಿಡಿಯನ್ ತರಹ ಕಾಣಿಸಿಕೊಳ್ಳಬಹುದು. ಇನ್ನೊಂದು ಮುಖ ನೋಡಿದ್ರೆ ಅಷ್ಟೇ.. ಕರ್ನಾಟಕಕ್ಕೆ ಹೊಸ ವಿಲನ್ ಎಂಟ್ರಿ'' ಅಂತೆಲ್ಲ 'ಬಿಗ್ ಬಾಸ್' ಮನೆಯೊಳಗೆ ಡೈಲಾಗ್ ಹೊಡೆಯುತ್ತಿದ್ದಾರೆ ಜಯಶ್ರೀನಿವಾಸನ್.

ಜಯಶ್ರೀನಿವಾಸನ್ ಅವರ ನಟನೆಯ ಪ್ರತಿಭೆ ನೋಡಿ ಯಾರಾದರೂ ನಿರ್ದೇಶಕರು/ನಿರ್ಮಾಪಕರು ಮನಸ್ಸು ಮಾಡಿದರೆ ಜಯಶ್ರೀನಿವಾಸನ್ ಗೆ 'ನಟ' ಎಂಬ ಪಟ್ಟ ಸಿಗುವುದು ಗ್ಯಾರೆಂಟಿ.

English summary
Bigg Boss Kannada 5: Week 11: Jayasreenivasan wants to debut as Villain in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X