»   » ಚಂದನ್ ಶೆಟ್ಟಿಗೆ ಪರ್ಫೆಕ್ಟ್ ಹುಡುಗಿ ಯಾರು ಗೊತ್ತಾ.?

ಚಂದನ್ ಶೆಟ್ಟಿಗೆ ಪರ್ಫೆಕ್ಟ್ ಹುಡುಗಿ ಯಾರು ಗೊತ್ತಾ.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಮಾಲ್ ಮಾಡುತ್ತಾ, ದಿನದಿಂದ ದಿನಕ್ಕೆ ಹೆಚ್ಚು ಅಭಿಮಾನಿಗಳನ್ನು ಪಡೆಯುತ್ತಿರುವ ಪ್ರತಿಭಾವಂತ ಗಾಯಕ ಚಂದನ್ ಶೆಟ್ಟಿ.

ಇದೇ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿಗೆ ಶ್ರುತಿ ಪ್ರಕಾಶ್ ಮೇಲೆ ಕ್ರಶ್ ಆಗಿತ್ತು. ಶ್ರುತಿಗಾಗಿ 'ಮುಚ್ಚಿಡಲಾರೆ...' ಹಾಡನ್ನೂ ರಚಿಸಿ, ಹಾಡಿದ್ದರು ಚಂದನ್ ಶೆಟ್ಟಿ.

ಆದ್ರೀಗ, ''ಶ್ರುತಿ ಜೊತೆ ಮಾಡಿದ್ದೆಲ್ಲ ಬರೀ ಡವ್'' ಎನ್ನುತ್ತಿರುವ ಚಂದನ್ ಶೆಟ್ಟಿಗೆ ಪರ್ಫೆಕ್ಟ್ ಹುಡುಗಿ ಯಾರು ಗೊತ್ತಾ.? ಅದನ್ನ ತಿಳಿಯಲು ಕೆಳಗಿರುವ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ಈಕೆಯೇ ಪರ್ಫೆಕ್ಟ್ ಹುಡುಗಿ

ಚಂದನ್ ಶೆಟ್ಟಿಗೆ ಆಶಿತಾ ಚಂದ್ರಪ್ಪ ಪರ್ಫೆಕ್ಟ್ ಹುಡುಗಿ.! ಹಾಗಂತ ನಾವು ಹೇಳ್ತಿಲ್ಲ, ಬದಲಾಗಿ 'ಬಿಗ್ ಬಾಸ್' ಸ್ಪರ್ಧಿ ರಿಯಾಝ್ ಉದ್ಗಾರ ಮಾಡಿದ್ದಾರೆ.

ಚಂದನ್ ಶೆಟ್ಟಿ ಹಣೆ ಚಚ್ಚಿಕೊಂಡರು: 'ಕೊಬ್ಬಿನ' ಬಗ್ಗೆ ಆಶಿತಾ ಕೂಗಾಡಿದರು.!

ರಿಯಾಝ್ ಹೇಳಿದ್ದೇನು.?

''ನಿನಗೆ ತಕ್ಕ ಹುಡುಗಿ... ಪರ್ಫೆಕ್ಟ್ ಹುಡುಗಿ ಯಾರು ಗೊತ್ತಾ.? ಆಶಿತಾ... ಪರ್ಫೆಕ್ಟ್ ಮ್ಯಾಚ್'' ಎಂದು ಚಂದನ್ ಶೆಟ್ಟಿಗೆ ರಿಯಾಝ್ ಹೇಳಿದ್ದಾರೆ.

ಶ್ರುತಿ ಪ್ರಕಾಶ್ ಗೆ ಲವ್ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ.!

ಆಶಿತಾ ಯಾಕೆ ಅಂದ್ರೆ...

''ಆಶಿತಾ... ಒಳ್ಳೆಯ ಹುಡುಗಿ, ನೋಡೋಕೆ ಲಕ್ಷಣವಾದ ಹುಡುಗಿ... ಅವಳ ನಗು, ಅವಳ ನಡವಳಿಕೆ, ಅವಳು ತೋರಿಸುವ ಕಾಳಜಿ, ಅತಿಥಿ ಸತ್ಕಾರ ಎಲ್ಲವೂ ಪರ್ಫೆಕ್ಟ್'' ಎಂದಿದ್ದಾರೆ ರಿಯಾಝ್ ಬಾಷಾ

ಚಂದನ್ ಗೆ ಹೋಮ್ ಮೇಕರ್ ಬೇಕಂತೆ.!

''ಆಶಿತಾ ಅವರಿಗೆ ಸಿನಿಮಾ ಮಾಡಬೇಕು ಅಂತ ಆಸೆ ಇರುತ್ತೆ. ಆದ್ರೆ, ನನಗೆ ಹೋಮ್ ಮೇಕರ್ ಬೇಕು. ನಮ್ಮ ಊರು ಕಡೆ ಇರುವ ಹುಡುಗಿ ಬೇಕು'' ಎಂದಿದ್ದಾರೆ ಚಂದನ್ ಶೆಟ್ಟಿ.

ಶ್ರುತಿ ಜೊತೆ ಡವ್.!

'ಬಿಗ್ ಬಾಸ್' ಮನೆಯೊಳಗೆ ಶ್ರುತಿ ಜೊತೆ ಚಂದನ್ ಶೆಟ್ಟಿ ಮಾಡುತ್ತಿರುವುದೆಲ್ಲ ಬರೀ ಡವ್ ಅಂತೆ. ಹಾಗಂತ ಸ್ವತಃ ಚಂದನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

English summary
Bigg Boss Kannada 5: Week 12: Ashita is the perfect match for Chandan Shetty says Riyaz Basha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X