»   » ಆಪ್ತಮಿತ್ರ ದಿವಾಕರ್ ನ ನೆನೆದು ಕಣ್ಣೀರಿಟ್ಟ ಚಂದನ್ ಶೆಟ್ಟಿ

ಆಪ್ತಮಿತ್ರ ದಿವಾಕರ್ ನ ನೆನೆದು ಕಣ್ಣೀರಿಟ್ಟ ಚಂದನ್ ಶೆಟ್ಟಿ

Posted By:
Subscribe to Filmibeat Kannada
ಆಪ್ತ ಮಿತ್ರನನ್ನ ನೆನೆದು ಕಣ್ಣೀರಿಟ್ಟ ಚಂದನ್ ಶೆಟ್ಟಿ | Filmibeat Kannada

'ಬಿಗ್ ಬಾಸ್' ಮನೆಯೊಳಗೆ ಕುಚ್ಚಿಕ್ಕು ಗೆಳೆಯರಂತೆ ಇದ್ದವರು ಚಂದನ್ ಶೆಟ್ಟಿ ಹಾಗೂ ದಿವಾಕರ್. ಜಗಳ ಆಡಿದರೂ, ಮರುಕ್ಷಣವೇ ಎಲ್ಲವನ್ನೂ ಮರೆತು ಒಂದಾಗಿರುತ್ತಿದ್ದ 'ಆಪ್ತಮಿತ್ರರು' ಈ ಚಂದನ್ ಶೆಟ್ಟಿ ಮತ್ತು ದಿವಾಕರ್.

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ದಿವಾಕರ್ ವಿಜೇತರಾಗಬೇಕು ಎಂಬುದು ಚಂದನ್ ಶೆಟ್ಟಿ ಬಯಕೆ ಆಗಿತ್ತು. ಆದ್ರೆ, ಅದು ಈಡೇರುವ ಮುನ್ನವೇ 'ಬಿಗ್ ಬಾಸ್' ಮನೆಯಿಂದ ದಿವಾಕರ್ ಆಚೆ ಕಾಲಿಟ್ಟಿದ್ದು ಚಂದನ್ ಶೆಟ್ಟಿಗೆ ಬೇಸರ ತಂದಿದೆ.

'ದಿವಾಕರ್ ಎಲಿಮಿನೇಟೆಡ್' ಎಂದು ಲಿವಿಂಗ್ ಏರಿಯಾದಲ್ಲಿ ಇರುವ ಟಿವಿಯಲ್ಲಿ ಡಿಸ್ಪ್ಲೇ ಆದ್ಮೇಲೆ ಚಂದನ್ ಶೆಟ್ಟಿ ಭಾವುಕರಾಗಿ ಕಣ್ಣೀರು ಸುರಿಸಿದರು.

Bigg Boss Kannada 5: Week 12: Chandan Shetty becomes emotional

ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು.!

''ದಿವಾಕರ್ ಔಟ್ ಆಗಿಲ್ಲ. ಜಯಶ್ರೀನಿವಾಸನ್ ಜೊತೆ ಸೀಕ್ರೆಟ್ ರೂಮ್ ನಲ್ಲಿ ಇದ್ದಾರೆ'' ಎನ್ನುತ್ತಲೇ ಇಷ್ಟು ದಿನ ಚಂದನ್ ಶೆಟ್ಟಿ ಭಾವಿಸಿದ್ದರು. ಆದ್ರೆ, ಲಿವಿಂಗ್ ಏರಿಯಾದಲ್ಲಿ ಇರುವ ಟಿವಿಗಳಲ್ಲಿ 'ದಿವಾಕರ್ ಎಲಿಮಿನೇಟೆಡ್', 'ಜಯಶ್ರೀನಿವಾಸನ್ ಎಲಿಮಿನೇಟೆಡ್' ಎಂದು ಡಿಸ್ಪ್ಲೇ ಆದ್ಮೇಲೆ ಚಂದನ್ ಶೆಟ್ಟಿ ದಿಗ್ಭ್ರಾಂತರಾದರು.

ಚಂದನ್ ಶೆಟ್ಟಿ ತಾಳ್ಮೆಗೆ ಹ್ಯಾಟ್ಸ್ ಆಫ್ ಎಂದ ಸುದೀಪ್.!

Bigg Boss Kannada 5: Week 12: Chandan Shetty becomes emotional

ದಿವಾಕರ್ ಎಲಿಮಿನೇಟ್ ಆಗಿದ್ದಕ್ಕೆ ಚಂದನ್ ಶೆಟ್ಟಿ ಕಣ್ಣೀರಿಟ್ಟರು. ಆದ್ರೆ, ಅದು 'ಬಿಗ್ ಬಾಸ್' ಕೊಟ್ಟ ಚಮಕ್ ಎಂಬ ಸತ್ಯ ಚಂದನ್ ಶೆಟ್ಟಿಗೆ ಇನ್ನೂ ಗೊತ್ತಿಲ್ಲ. 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋದ ದಿವಾಕರ್ ಸದ್ಯ ಸೀಕ್ರೆಟ್ ರೂಮ್ ನಲ್ಲಿ ಇದ್ದಾರೆ ಎಂಬ ಗುಟ್ಟು ರಟ್ಟಾಗಿಲ್ಲ. 'ದೊಡ್ಮನೆ'ಯಿಂದ ಸದ್ಯ ಔಟ್ ಆಗಿರುವುದು ಜಯಶ್ರೀನಿವಾಸನ್ ಮಾತ್ರ ಎಂಬ ಸಂಗತಿ ಇನ್ನೂ ಯಾರ ಅರಿವಿಗೂ ಬಂದಿಲ್ಲ.

English summary
Bigg Boss Kannada 5: Week 12: Chandan Shetty becomes emotional after Diwakar's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X