ಅನುಪಮಾ ಫ್ರೆಂಡ್ ಆಗಿದ್ದಕ್ಕೆ ಮನಸ್ಸು ಬದಲಾಯಿಸಿದ್ರಂತೆ ಶ್ರುತಿ ಪ್ರಕಾಶ್.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಇನ್ನೇನು ಮುಗಿಯುವ ಹಂತಕ್ಕೆ ಬಂತು. ಹದಿನಾಲ್ಕು ವಾರಗಳ ಈ ಜರ್ನಿಯಲ್ಲಿ ಕಾಮನ್ ಮ್ಯಾನ್ ದಿವಾಕರ್ ಕ್ಯಾಪ್ಟನ್ ಆಗಿಲ್ಲ.
ಕಳೆದ ವಾರ ದಿವಾಕರ್ ಕ್ಯಾಪ್ಟನ್ ಆಗುವ ಸಾಧ್ಯತೆ ಇತ್ತು. ಆದ್ರೆ, ಅದಕ್ಕೆ ನಟಿ ಅನುಪಮಾ ಅಡ್ಡಿ ಪಡಿಸಿದರು. ದಿವಾಕರ್ ಅವರನ್ನ ಕ್ಯಾಪ್ಟನ್ ಮಾಡಲು ಚಂದನ್ ಶೆಟ್ಟಿ ಹಾಗೂ ಶ್ರುತಿ ಪ್ರಕಾಶ್ ಮನಸ್ಸು ಮಾಡಿದ್ದರು. ಆದ್ರೆ, ಅಷ್ಟರಲ್ಲಿ ಅನುಪಮಾ ಮೂಗು ತೂರಿಸಿದರು. ಶ್ರುತಿ ಪ್ರಕಾಶ್ ಮನಸ್ಸು ಬದಲಾಯಿಸಿದರು. ಎರಡನೇ ಬಾರಿಗೆ ಅನುಪಮಾ ಕ್ಯಾಪ್ಟನ್ ಆದರು. ದಿವಾಕರ್ ಅವಕಾಶ ವಂಚಿತರಾದರು.
ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ವೀಕ್ಷಕರೊಬ್ಬರು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಶ್ರುತಿ ಪ್ರಕಾಶ್ ಅವರಿಗೆ ಪ್ರಶ್ನಿಸಿದರು. ಮುಂದೆ ಓದಿರಿ...

ಕಾಲರ್ ಆಫ್ ದಿ ವೀಕ್ ಕೇಳಿದ ಪ್ರಶ್ನೆ ಏನು.?
''ಇಷ್ಟು ದಿನ ದಿವಾಕರ್ ಕ್ಯಾಪ್ಟನ್ ಆಗಿರಲಿಲ್ಲ. ನೀವು ಚೀಟಿ ಕೊಟ್ಟಿದ್ದರೆ, ಅವರು ಈ ವಾರ ಕ್ಯಾಪ್ಟನ್ ಆಗುತ್ತಿದ್ದರು. ಚೀಟಿ ಕೊಡುವುದಕ್ಕೆ ನೀವು ಮೊದಲು ಒಪ್ಪಿಕೊಳ್ತೀರಾ. ಆಮೇಲೆ, ಅನುಪಮಾ ಬೇಡ ಅಂದ್ಮೇಲೆ ಅನುಪಮಾಗೆ ಚೀಟಿ ಕೊಡ್ತೀರಾ. ಅನುಪಮಾ ನಿಮ್ಮ ಫ್ರೆಂಡ್ ಅಂತ ಮಾತ್ರಕ್ಕೆ ನಿಮ್ಮ ಡಿಸಿಷನ್ ಚೇಂಜ್ ಮಾಡಿದ್ರಾ.? ಅಥವಾ ದಿವಾಕರ್ ಒಳ್ಳೆಯ ಕ್ಯಾಪ್ಟನ್ ಆಗಲ್ಲ ಅಂತ ನಿಮಗೆ ಅನ್ಸುತ್ತಾ.?'' ಎಂದು ಬೆಂಗಳೂರಿನ ಶ್ವೇತ ಎಂಬುವರು ಶ್ರುತಿ ಪ್ರಕಾಶ್ ಗೆ ಪ್ರಶ್ನೆ ಕೇಳಿದರು.

ಶ್ರುತಿ ಕೊಟ್ಟ ಉತ್ತರ ಏನು.?
''ದಿವಾಕರ್ ಒಳ್ಳೆಯ ಕ್ಯಾಪ್ಟನ್ ಆಗಲ್ಲ ಅಂತ ನನಗೆ ಅನಿಸಲಿಲ್ಲ. ಅನುಪಮಾ ನನ್ನ ಫ್ರೆಂಡ್ ನಿಜ. ಅನುಪಮಾಗೆ ಚೀಟಿ ಕೊಟ್ಮೇಲೆ, ಆಕೆಗೂ ನಾನು ಹೇಳಿದೆ ದಿವಾಕರ್ ಗೆ ಚಾನ್ಸ್ ಕೊಡೋಣ ಅಂತ. ಆದ್ರೆ, ಹಾಗೆ ಆಗಲಿಲ್ಲ'' ಎಂದಷ್ಟೇ ಶ್ರುತಿ ಪ್ರಕಾಶ್ ಉತ್ತರಿಸಿದರು.

ಕ್ಯಾಪ್ಟನ್ ಆದ್ರೆ...
ಕ್ಯಾಪ್ಟನ್ ಆದ್ರೆ ನಾಮಿನೇಷನ್ ನಿಂದ ಇಮ್ಯೂನಿಟಿ ಸಿಗುತ್ತೆ. ಹೀಗಾಗಿ ಎಲಿಮಿನೇಷನ್ ನಿಂದ ಬಚಾವ್ ಆಗಲು ಅನುಪಮಾ ಗೌಡ ಕ್ಯಾಪ್ಟನ್ ಆಗಲು ಪಟ್ಟು ಹಿಡಿದರು.

ದಿವಾಕರ್ ಗೆ ಅವಕಾಶವೇ ಸಿಗಲಿಲ್ಲ.!
ಇನ್ನೂ ಈ ವಾರ ಯಾರಿಗೂ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿಲ್ಲ. ಎಲ್ಲರೂ ನೇರವಾಗಿ ನಾಮಿನೇಟ್ ಆಗಿದ್ದಾರೆ. ಮುಂದಿನ ವಾರ ಫಿನಾಲೆ ನಡೆಯಲಿದೆ. ಅಲ್ಲಿಗೆ, ದಿವಾಕರ್ ಕ್ಯಾಪ್ಟನ್ ಆಗುವ ಕನಸು ಕನಸಾಗಿಯೇ ಉಳಿಯಲಿದೆ.


Click it and Unblock the Notifications











