ಈ ವಾರ ಡೇಂಜರ್ ಝೋನ್ ನಲ್ಲಿ ಇರುವವರಿವರು: ಯಾರನ್ನ ಹೊರಗೆ ಹಾಕ್ತೀರಿ.?
Recommended Video

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅದಾಗಲೇ ಹನ್ನೆರಡು ವಾರಗಳು ಕಳೆದೇ ಹೋಗಿವೆ. ಹದಿಮೂರನೇ ವಾರಕ್ಕೆ ಸ್ಪರ್ಧಿಗಳೆಲ್ಲ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಯಾವುದೇ ಟ್ವಿಸ್ಟ್ ಕೊಡದ 'ಬಿಗ್ ಬಾಸ್', ಎಂದಿನಂತೆ ಸೀದಾ ಸಾದಾ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದಾರೆ.
ಕನ್ಫೆಶನ್ ರೂಮ್ ಒಳಗೆ ತೆರಳಿದ ಸ್ಪರ್ಧಿಗಳು, ತಮಗೆ ಇಷ್ಟವಾಗದ ಇಬ್ಬರು ಸ್ಪರ್ಧಿಗಳನ್ನ ನಾಮಿನೇಟ್ ಮಾಡಿದ್ದಾರೆ. ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ಕ್ಯಾಪ್ಟನ್ ಆದ ಅನುಪಮಾ ಹಾಗೂ ಸೀಕ್ರೆಟ್ ರೂಮ್ ನಿಂದ ವಾಪಸ್ ಬಂದ ದಿವಾಕರ್ ಜಸ್ಟ್ ಮಿಸ್ ಆದರು.
ಹಾಗಾದ್ರೆ, ಹದಿಮೂರನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಯಾರೆಲ್ಲ ನಾಮಿನೇಟ್ ಆಗಿದ್ದಾರೆ.? ಪೂರ್ತಿ ವಿವರ ಇಲ್ಲಿದೆ, ಓದಿರಿ...

ಕ್ಯಾಪ್ಟನ್ ಅನುಪಮಾ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹದಿಮೂರನೇ ವಾರದ ಕ್ಯಾಪ್ಟನ್ ಆಗಿ ಅನುಪಮಾ ಗೌಡ ಆಯ್ಕೆ ಆದರು. ಹೀಗಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಅನುಪಮಾ ಸೇಫ್ ಆದರು.

ಟಾರ್ಗೆಟ್ ರಿಯಾಝ್
ನಿವೇದಿತಾ ಗೌಡ, ಚಂದನ್ ಶೆಟ್ಟಿ ಹಾಗೂ ದಿವಾಕರ್.. ರಿಯಾಝ್ ರನ್ನ ಟಾರ್ಗೆಟ್ ಮಾಡಿದರು. ಹೀಗಾಗಿ, ಈ ವಾರವೂ ರಿಯಾಝ್ ನಾಮಿನೇಟ್ ಆಗಬೇಕಾಯಿತು.

ಡೇಂಜರ್ ಝೋನ್ ನಲ್ಲಿ ನಿವೇದಿತಾ
ರಿಯಾಝ್, ದಿವಾಕರ್ ಹಾಗೂ ಶ್ರುತಿ ಮತ ಹಾಕಿದ್ರಿಂದಾಗಿ ನಿವೇದಿತಾ ಗೌಡ ನಾಮಿನೇಟ್ ಆದರು.

ಶ್ರುತಿ ಪ್ರಕಾಶ್ ಮಿಸ್ ಆಗಲಿಲ್ಲ
ಸಮೀರಾಚಾರ್ಯ ಹಾಗೂ ಚಂದನ್ ಶೆಟ್ಟಿ ಮಾತ್ರ ಶ್ರುತಿ ಹೆಸರನ್ನ ಸೂಚಿಸಿದರು. ಆದರೂ ಶ್ರುತಿ ಡೇಂಜರ್ ಝೋನ್ ಗೆ ಬರಲೇಬೇಕಾಯಿತು.

ಜೆಕೆ ಕೂಡ ನಾಮಿನೇಟೆಡ್
ಸಮೀರಾಚಾರ್ಯ ಹಾಗೂ ನಿವೇದಿತಾ ವೋಟ್ ಮಾಡಿದ್ರಿಂದಾಗಿ ಜಯರಾಂ ಕಾರ್ತಿಕ್ ಕೂಡ ನಾಮಿನೇಟ್ ಆದರು.

ಈ ಬಾರಿ ಸೇಫ್ ಆಗ್ತಾರಾ ಸಮೀರಾಚಾರ್ಯ.?
ಜೆಕೆ ಹಾಗೂ ಶ್ರುತಿ, ಸಮೀರಾಚಾರ್ಯ ಹೆಸರನ್ನ ಸೂಚಿಸಿದರು. ಈ ವಾರವೂ ಸಮೀರಾಚಾರ್ಯ ಎಲಿಮಿನೇಷನ್ ನಿಂದ ಸೇಫ್ ಆಗ್ತಾರಾ.? ನೋಡೋಣ.

ನೇರವಾಗಿ ನಾಮಿನೇಟ್ ಆದ ಚಂದನ್
ಕ್ಯಾಪ್ಟನ್ ಆಗಿರುವ ಅನುಪಮಾ ಗೌಡ, ಚಂದನ್ ಶೆಟ್ಟಿ ಅವರನ್ನ ನೇರವಾಗಿ ನಾಮಿನೇಟ್ ಮಾಡಿದರು. ಹೀಗಾಗಿ, ಚಂದನ್ ಶೆಟ್ಟಿ ಗೂ ಈ ವಾರ ಎಲಿಮಿನೇಷನ್ ತಲೆಬಿಸಿ ತಪ್ಪಿದ್ದಲ್ಲ.

ದಿವಾಕರ್ ಜಸ್ಟ್ ಮಿಸ್
ಜೆಕೆ ಮಾತ್ರ ದಿವಾಕರ್ ವಿರುದ್ಧ ಮತ ಚಲಾಯಿಸಿದರು. ಕೇವಲ ಒಂದು ವೋಟ್ ಬಿದ್ದಿದ್ರಿಂದಾಗಿ ದಿವಾಕರ್ ಜಸ್ಟ್ ಮಿಸ್ ಆದರು.

ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?
ರಿಯಾಝ್, ನಿವೇದಿತಾ, ಶ್ರುತಿ, ಜೆಕೆ, ಸಮೀರಾಚಾರ್ಯ, ಚಂದನ್... ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ..


Click it and Unblock the Notifications











