»   » ನಿರ್ದೇಶಕ ದಯಾಳ್ ಗೆ 'ಕಾಮಿಡಿ ಪೀಸ್' ಎಂದುಬಿಟ್ಟ ಅನುಪಮಾ ಗೌಡ.!

ನಿರ್ದೇಶಕ ದಯಾಳ್ ಗೆ 'ಕಾಮಿಡಿ ಪೀಸ್' ಎಂದುಬಿಟ್ಟ ಅನುಪಮಾ ಗೌಡ.!

Posted By:
Subscribe to Filmibeat Kannada

'ಸರ್ಕಸ್', 'ಆಕ್ಟರ್', 'ಸತ್ಯ ಹರಿಶ್ಚಂದ್ರ' ಮುಂತಾದ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ಕಾಮಿಡಿ ಪೀಸ್ ಅಂತೆ.!

ಹಾಗಂತ ಹೇಳಿರುವವರು ಬೇರೆ ಯಾರೂ ಅಲ್ಲ, 'ಅಕ್ಕ' ಧಾರಾವಾಹಿ ಖ್ಯಾತಿಯ ನಟಿ ಅನುಪಮಾ ಗೌಡ.!

ಹೌದು, ನಿರ್ದೇಶಕ ದಯಾಳ್ ಪದ್ಮನಾಭನ್ 'ಕಾಮಿಡಿ ಪೀಸ್' ಅಂತ ಅನುಪಮಾ ಗೌಡ ಕಾಮೆಂಟ್ ಮಾಡಿದ್ದಾರೆ. ಅದು 'ಬಿಗ್ ಬಾಸ್' ವೇದಿಕೆ ಮೇಲೆ... ಕಿಚ್ಚ ಸುದೀಪ್ ಮುಂದೆ.!

Bigg Boss Kannada 5: Week 14: Dayal Padmanabhan is comedy piece comments Anupama

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಅನುಪಮಾ ಗೌಡ ಔಟ್ ಆಗಿದ್ದಾರೆ. ಎಲಿಮಿನೇಟ್ ಆದ್ಮೇಲೆ, ಕಿಚ್ಚ ಸುದೀಪ್ ಜೊತೆಗೆ ಹರಟಿದ ಅನುಪಮಾ ಗೌಡ ''ದಯಾಳ್ ಒಂದು ಕಾಮಿಡಿ ಪೀಸ್'' ಎಂದಿದ್ದಾರೆ. ಜೊತೆಗೆ ''ಇವರಷ್ಟು ಸ್ಟ್ರೇಟ್ ಫಾರ್ವರ್ಡ್ ಹದಿನೇಳು ಜನರಲ್ಲಿ ಯಾರೂ ಇರಲಿಲ್ಲ'' ಅಂತಲೂ ಹೇಳಿದ್ದಾರೆ.

ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ದಯಾಳ್ ಗೆ ಅತ್ಯಾಪ್ತರಾಗಿದ್ದವರ ಪೈಕಿ ಅನುಪಮಾ ಗೌಡ ಕೂಡ ಒಬ್ಬರು. ದಯಾಳ್ ಹೊರಬಂದಾಗ ಅನುಪಮಾ ಗೌಡ ಕಣ್ಣೀರು ಹಾಕಿದ್ದರು. ಆದ್ರೆ ಈಗ ಅದೇ ದಯಾಳ್ ಗೆ 'ಕಾಮಿಡಿ ಪೀಸ್' ಎಂದು ಅನುಪಮಾ ಹೇಳಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

English summary
Bigg Boss Kannada 5: Week 14: ''Dayal Padmanabhan is comedy piece'' comments Anupama Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada