Don't Miss!
- News Karnataka Weather: ಮೈಸೂರು, ಬಾಗಲಕೋಟೆ ಸೇರಿ ಎಂಟು ಜಿಲ್ಲೆಗಳಿಗೆ ತಂಪಿನ ಸುದ್ದಿ ಕೊಟ್ಟ ಹವಾಮಾನ ಇಲಾಖೆ
- Finance Zero Shadow Day: ಬೆಂಗಳೂರಿನಲ್ಲಿ ಇಂದು ಪ್ರಕೃತಿಯ ಅಚ್ಚರಿ
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಯೊಳಗೆ ಮತ್ತೆ ಜಯಶ್ರೀನಿವಾಸನ್ ಪ್ರತ್ಯಕ್ಷ.!
Recommended Video
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹನ್ನೊಂದನೇ ವಾರ ಇದ್ದಕ್ಕಿದ್ದಂತೆ ಕನ್ಫೆಶನ್ ರೂಮ್ ನಿಂದ ನಾಪತ್ತೆ ಆದ ಜಯಶ್ರೀನಿವಾಸನ್ ನಂತರ ಪ್ರತ್ಯಕ್ಷವಾಗಿದ್ದು ಸೀಕ್ರೆಟ್ ರೂಮ್ ನಲ್ಲಿ. ಅದೇ ವಾರ ಸೀಕ್ರೆಟ್ ರೂಮ್ ನಿಂದಲೇ ಜಯಶ್ರೀನಿವಾಸನ್ ಎಲಿಮಿನೇಟ್ ಆಗ್ಬಿಟ್ರು.
ಇಂತಿಪ್ಪ ಜಯಶ್ರೀನಿವಾಸನ್ ಇದೀಗ 'ಬಿಗ್ ಬಾಸ್' ಮನೆಯೊಳಗೆ ರೀ ಎಂಟ್ರಿಕೊಟ್ಟಿದ್ದಾರೆ. ಯಾವ ಕನ್ಫೆಶನ್ ರೂಮ್ ನಿಂದ ಜಯಶ್ರೀನಿವಾಸನ್ ಹೊರ ನಡೆದಿದ್ರೋ, ಅದೇ ಕನ್ಫೆಶನ್ ರೂಮ್ ನಿಂದ ಜಯಶ್ರೀನಿವಾಸನ್ 'ಬಿಗ್ ಬಾಸ್' ಮನೆಯೊಳಗೆ ಅತಿಥಿಯಾಗಿ ಬಂದಿದ್ದಾರೆ.
ಹಾಗ್ನೋಡಿದ್ರೆ, ಜಯಶ್ರೀನಿವಾಸನ್ ಎಲಿಮಿನೇಟ್ ಆದ ವಿಚಾರ ಮಿಕ್ಕ ಸ್ಪರ್ಧಿಗಳಿಗೆ ಗೊತ್ತಾಗಿದ್ದೇ ತಡವಾಗಿ. ಹೀಗಾಗಿ ಜಯಶ್ರೀನಿವಾಸನ್ ಔಟ್ ಆದಾಗ, ಅವರನ್ನ ಮಿಕ್ಕ ಸ್ಪರ್ಧಿಗಳು ಮಾತನಾಡಿಸಿರಲಿಲ್ಲ.
ಜಯಶ್ರೀನಿವಾಸನ್ ಎಂಟ್ರಿ ವಿಚಿತ್ರ: ಔಟ್ ಆಗಿದ್ದೂ ವಿಚಿತ್ರವೇ.!
ಈಗ ಜಯಶ್ರೀನಿವಾಸನ್ ಒಂದು ಚಟುವಟಿಕೆಗಾಗಿ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದಾರೆ. ಈಗಾಗಲೇ, ತೇಜಸ್ವಿನಿ, ಆಶಿತಾ, ದಯಾಳ್, ಸಿಹಿ ಕಹಿ ಚಂದ್ರು, ಜಗನ್ ಸೇರಿದಂತೆ ಎಲಿಮಿನೇಟ್ ಆದ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ಚಟುವಟಿಕೆಯ ಸಾರಥ್ಯ ವಹಿಸಿಕೊಳ್ಳುತ್ತಿದ್ದಾರೆ. ಅದರಂತೆ ಇಂದು 'ದೊಡ್ಮನೆ'ಯೊಳಗೆ ಜಯಶ್ರೀನಿವಾಸನ್ ಎಂಟ್ರಿಕೊಡ್ತಾರೆ.
ಜಯಶ್ರೀನಿವಾಸನ್ ಕೊಡುವ ಚಟುವಟಿಕೆ ಯಾವುದು ಅಂತ ತಿಳಿದುಕೊಳ್ಳಲು ಇಂದಿನ ಸಂಚಿಕೆ ನೋಡ್ಬೇಕು.