ಮತ್ತೆ ವೀಕ್ಷಕರ ಅಭಿಪ್ರಾಯಕ್ಕೆ ಮೊರೆ ಹೋದ 'ಬಿಗ್ ಬಾಸ್': ಸ್ಪರ್ಧಿಗಳಿಗೆ ಶಾಕ್.!

By Harshitha

ಕೆಲವೇ ವಾರಗಳ ಹಿಂದೆಯಷ್ಟೇ... ಅಂದ್ರೆ, 'ಬಿಗ್ ಬಾಸ್' ಮನೆಯಿಂದ ಸಿಹಿ ಕಹಿ ಚಂದ್ರು ಔಟ್ ಆದ ಬಳಿಕ 'ಬಿಗ್ ಬಾಸ್' ಮನೆಯ ಎಲ್ಲ ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದರು. ಅಂದು ಕ್ಯಾಪ್ಟನ್ ಆಗಿದ್ದ ಜಗನ್ನಾಥ್ ಚಂದ್ರಶೇಖರ್ ಮತ್ತು 'ವೈಲ್ಡ್ ಕಾರ್ಡ್ ಎಂಟ್ರಿ' ಪಡೆದಿದ್ದ ವೈಷ್ಣವಿ ಬಿಟ್ಟರೆ ಮಿಕ್ಕೆಲ್ಲಾ ಸದಸ್ಯರನ್ನೂ 'ಬಿಗ್ ಬಾಸ್' ಡೇಂಜರ್ ಝೋನ್ ಗೆ ತಳ್ಳಿದ್ದರು.

ಸ್ಪರ್ಧಿಗಳ ಬಗ್ಗೆ ವೀಕ್ಷಕರ ಅಭಿಪ್ರಾಯವನ್ನು ಏಕಕಾಲಕ್ಕೆ ಸಂಗ್ರಹಿಸಲು ಅಂದು 'ಬಿಗ್ ಬಾಸ್' ಈ ನಿರ್ಣಯ ತೆಗೆದುಕೊಂಡಿದ್ದರು. ಇದೀಗ ಮತ್ತೆ ವೀಕ್ಷಕರ ಅಭಿಪ್ರಾಯಕ್ಕೆ 'ಬಿಗ್ ಬಾಸ್' ಮೊರೆ ಹೋಗಿದ್ದಾರೆ.

ಈ ವಾರ ಕೂಡ 'ಬಿಗ್ ಬಾಸ್' ಮನೆಯ ಎಲ್ಲ ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಇನ್ನೇನು ಮುಗಿಯುವ ಹಂತಕ್ಕೆ ಬಂದ ಕಾರಣ, ಜನರ ಪ್ರೀತಿ ಮತ್ತು ವಿಶ್ವಾಸ ಯಾವ ಸ್ಪರ್ಧಿಗೆ ಇದೆ ಎಂದು ತಿಳಿಯಲು ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ 'ಬಿಗ್ ಬಾಸ್'. ಮುಂದೆ ಓದಿರಿ...

ನಾಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ.!

ನಾಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ.!

'ಬಿಗ್ ಬಾಸ್' ಮನೆಯಲ್ಲಿ ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ, ಮನೆಯ ಒಬ್ಬೊಬ್ಬ ಸದಸ್ಯರು ಕನ್ಫೆಶನ್ ರೂಮ್ ಒಳಗೆ ಹೋಗಿ ತಮಗೆ ಆಗದ ಇಬ್ಬರು ಸದಸ್ಯರನ್ನ ನಾಮಿನೇಟ್ ಮಾಡಬೇಕಿತ್ತು. ಆದ್ರೆ, ಈ ವಾರ ಹೀಗೆ ನಡೆಯಲಿಲ್ಲ.

ಶಾಕ್ ಕೊಟ್ಟ 'ಬಿಗ್ ಬಾಸ್'

ಶಾಕ್ ಕೊಟ್ಟ 'ಬಿಗ್ ಬಾಸ್'

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ 90 ದಿನಗಳು ಕಳೆದ ಮೇಲೆ ಎಲ್ಲ ಸದಸ್ಯರನ್ನೂ ಡೇಂಜರ್ ಝೋನ್ ಗೆ ತಳ್ಳಲಾಗಿದೆ.

ಯಾರಿಗೂ ಮುಲಾಜಿಲ್ಲ.!

ಯಾರಿಗೂ ಮುಲಾಜಿಲ್ಲ.!

ಈ ಹಿಂದೆ ಜಗನ್ನಾಥ್ ಚಂದ್ರಶೇಖರ್ ಕ್ಯಾಪ್ಟನ್ ಆಗಿದ್ದಾಗ, ಎಲ್ಲ ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದರು. ಆದ್ರೆ, ಅಂದು ಜಗನ್ ಕ್ಯಾಪ್ಟನ್ ಆಗಿದ್ದ ಕಾರಣಕ್ಕೆ ಹಾಗೂ ವೈಷ್ಣವಿ 'ವೈಲ್ಡ್ ಕಾರ್ಡ್ ಎಂಟ್ರಿ' ಪಡೆದುಕೊಂಡಿದ್ದಕ್ಕೆ... ಇಬ್ಬರನ್ನೂ ನಾಮಿನೇಷನ್ ನಿಂದ ಬಚಾವ್ ಮಾಡಲಾಗಿತ್ತು. ಆದ್ರೆ, ಈ ವಾರ ಯಾರಿಗೂ ಮುಲಾಜು ನೀಡಲಾಗಿಲ್ಲ.! ಎಲ್ಲ ಏಳು ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ.

ಕ್ಯಾಪ್ಟನ್ ಇಲ್ಲ.!

ಕ್ಯಾಪ್ಟನ್ ಇಲ್ಲ.!

ವೀಕ್ಷಕರ ಬೆಂಬಲ ಎಲ್ಲರಿಗೂ ಅನಿವಾರ್ಯ ಇರುವ ಕಾರಣ, ಈ ವಾರ ಯಾರಿಗೂ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿಲ್ಲ.

ಈ ಏಳು ಮಂದಿ ಪೈಕಿ ನಿಮ್ಮ ಆಯ್ಕೆ.?

ಈ ಏಳು ಮಂದಿ ಪೈಕಿ ನಿಮ್ಮ ಆಯ್ಕೆ.?

ಸಮೀರಾಚಾರ್ಯ, ನಿವೇದಿತಾ, ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ಶ್ರುತಿ ಪ್ರಕಾಶ್, ಅನುಪಮಾ, ದಿವಾಕರ್ ಸದ್ಯ ನಿಮ್ಮೆಲ್ಲರ ಮತಗಳ ನಿರೀಕ್ಷೆಯಲ್ಲಿದ್ದಾರೆ. ಇವರುಗಳ ಪೈಕಿ ನಿಮ್ಮ ವೋಟ್ ಯಾರಿಗೆ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ, ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ, ಕಾಮೆಂಟ್ ಮಾಡಿ...

More from Filmibeat

English summary
Bigg Boss Kannada 5: Week 13: Niveditha Gowda, Anupama Gowda, Sameer Acharya, Shruthi Prakash, Chandan Shetty, Diwakar and Jayaram Karthik are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X