ನಿವೇದಿತಾಗೆ 'ಮೆಂಟಲ್', 'ಡವ್ ರಾಣಿ' ಎಂದ ದಿವಾಕರ್.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಇದೇ ಶನಿವಾರ ಹಾಗೂ ಭಾನುವಾರ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ.
'ಬಿಗ್ ಬಾಸ್' ಮನೆಗೆ ಗುಡ್ ಬೈ ಹೇಳುವ ಸಮಯ ಬಂದಿರುವುದರಿಂದ, ಪ್ರತಿ ಕ್ಷಣ ಕೂಡ ಖುಷಿ ಖುಷಿಯಾಗಿ ಕಳೆಯಬೇಕು ಎಂದು ಟಾಪ್ 5 ಸ್ಪರ್ಧಿಗಳು ಅಂದುಕೊಳ್ಳುತ್ತಿರುವಾಗಲೇ, ನಿವೇದಿತಾ ಗೌಡ ಗೊಳೋ ಎಂದು ಕಣ್ಣೀರು ಸುರಿಸಿದ್ದಾರೆ. ಅದಕ್ಕೆ ಕಾರಣ ದಿವಾಕರ್ ಅವರ ಮಾತುಗಳು.!
ಹಾಡುಗಳ ಆಯ್ಕೆ ವಿಚಾರದಲ್ಲಿ ದಿವಾಕರ್ ಹಾಗೂ ನಿವೇದಿತಾ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಮಗೆ ಮೆಲೋಡಿ ಸಾಂಗ್ ಬೇಕು, ಹೀಗಾಗಿ 'ಪರವಶನಾದೆನು...' ಹಾಡನ್ನ ಆಯ್ಕೆ ಮಾಡಿ ಎಂದು ನಿವೇದಿತಾ ಕೇಳಿಕೊಂಡರೆ... ವಿಷ್ಣುವರ್ಧನ್ ಅವರ ಹಾಡು ಹಾಕಲು ದಿವಾಕರ್ ಬೇಡಿಕೆ ಇಟ್ಟರು.

ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ನಿವೇದಿತಾಗೆ 'ಮೆಂಟಲ್', 'ಡವ್ ರಾಣಿ' ಅಂತೆಲ್ಲ ದಿವಾಕರ್ ಹೇಳಿದರು. ಇದರಿಂದ ಬೇಸರಗೊಂಡ ನಿವೇದಿತಾ ಗೊಳೋ ಎಂದು ಕಣ್ಣೀರು ಸುರಿಸಿದರು.
ಕೊನೆಗೆ 'ಪರವಶನಾದೆನು...' ಹಾಡು ಆಯ್ಕೆ ಆಯ್ತು. ಇತ್ತ ವಿಷ್ಣುವರ್ಧನ್ ಅವರ 'ಪ್ರೀತಿಯೇ ನನ್ನುಸಿರು...' ಹಾಡು ಕೂಡ 'ಬಿಗ್ ಬಾಸ್' ಮನೆಯೊಳಗೆ ಅಕುಲ್ ಬಾಲಾಜಿ ಬಂದ್ಮೇಲೆ ಪ್ಲೇ ಆಯ್ತು.
'ಬಿಗ್ ಬಾಸ್' ಮನೆಯೊಳಗೆ ಕೊನೆಯ ಕ್ಷಣಗಳನ್ನು ಸಂತಸದಿಂದ ಕಳೆಯುವುದನ್ನು ಬಿಟ್ಟು ಈಗಲೂ ಕಿತ್ತಾಡುತ್ತಿರುವುದನ್ನು ನೋಡಿ ವೀಕ್ಷಕರಿಗೂ ಬೇಸರ ಆಗಿದೆ.


Click it and Unblock the Notifications











