'ಬಿಗ್ ಬಾಸ್' ಮನೆಯಲ್ಲಿ 'ಮಜಾ ಟಾಕೀಸ್' ಕುಟುಂಬ
Recommended Video

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಮಜಾ ಟಾಕೀಸ್'ಗೆ ಫುಲ್ ಸ್ಟಾಪ್ ಇಟ್ಟಾಗ ವೀಕ್ಷಕರು ಬೇಸರಗೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಮಜಾ ಟಾಕೀಸ್' ಮುಗಿದ ನಂತರ 'ಕಾಮಿಡಿ ಟಾಕೀಸ್'ಗೆ ನಾಂದಿ ಹಾಡಲಾಯ್ತು. ಆದ್ರೆ, 'ಕಾಮಿಡಿ ಟಾಕೀಸ್', 'ಮಜಾ ಟಾಕೀಸ್' ಅಷ್ಟು ಸದ್ದು ಮಾಡಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.
ಇದೀಗ 'ಮಜಾ ಟಾಕೀಸ್' ರೀ ಲಾಂಚ್ ಆಗುತ್ತಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಮಜಾ ಟಾಕೀಸ್' ಸೂಪರ್ ಸೀಸನ್ ಪ್ರಾರಂಭವಾಗಲಿದೆ. ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ 'ಮಜಾ ಟಾಕೀಸ್' ಇನ್ಮುಂದೆ ಗುರುವಾರ ಮತ್ತು ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.
ಈ ವಿಷಯ ಬಹಿರಂಗವಾಗಿದ್ದು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ. ಹೌದು, 'ಬಿಗ್ ಬಾಸ್' ಮನೆಯೊಳಗೆ 'ಮಜಾ ಟಾಕೀಸ್' ಕುಟುಂಬ ಭೇಟಿ ನೀಡಿ, ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆ ನೀಡಿ, ಕಾರ್ಯಕ್ರಮದ ರೀ ಲಾಂಚ್ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದರು.

ಒನ್ ಅಂಡ್ ಒನ್ಲಿ ವರಲಕ್ಷ್ಮಿ (ಅಪರ್ಣ), ಕುರಿ ಪ್ರತಾಪ್, ತರಂಗ ವಿಶ್ವ, ಸೃಜನ್ ಲೋಕೇಶ್, ಶ್ವೇತ ಚೆಂಗಪ್ಪ ಹಾಗೂ ಪವನ್ 'ಬಿಗ್ ಬಾಸ್' ಮನೆಯೊಳಗೆ ನಿನ್ನೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಜೊತೆಗೆ, 'ಮಜಾ ಟಾಕೀಸ್' ಬಗ್ಗೆ ಅದರಲ್ಲೂ ರಾಣಿ (ಶ್ವೇತ ಚೆಂಗಪ್ಪ) ಬಗ್ಗೆ ಒಂದು ಹಾಡು ಮಾಡಲು ಚಂದನ್ ಶೆಟ್ಟಿಗೆ, ಒಂದು ರೂಪಾಯಿ ನಾಣ್ಯ ಹುಡುಕಲು ಸಮೀರಾಚಾರ್ಯಗೆ, ಕುರಿ ಪ್ರತಾಪ್ ಗೆ ಬೆಲ್ಲಿ ಡ್ಯಾನ್ಸ್ ಕಲಿಸಲು ಜೆಕೆ ಹಾಗೂ ದಿವಾಕರ್ ಗೆ, ರುಚಿ ರುಚಿಯಾದ ಅಡುಗೆ ಮಾಡಲು ಶ್ರುತಿ ಹಾಗೂ ನಿವೇದಿತಾಗೆ 'ಮಜಾ ಕುಟುಂಬ' ಟಾಸ್ಕ್ ನೀಡಿತು.
'ಮಜ'ವಾದ ಟಾಸ್ಕ್ ಗಳು ಮುಕ್ತಾಯವಾದ ಬಳಿಕ 'ಮಜಾ ಕುಟುಂಬ' ನಿರ್ಗಮಿಸಿತು. ಅಂದ್ಹಾಗೆ, 'ಮಜಾ ಟಾಕೀಸ್' ಸೂಪರ್ ಸೀಸನ್ ಯಾವಾಗ್ಲಿಂದ ಶುರು ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ.


Click it and Unblock the Notifications











