»   » 'ಬಿಗ್ ಬಾಸ್' ಮನೆಯಿಂದ ಇಂದು ಗಂಟು ಮೂಟೆ ಕಟ್ಟೋರು ಯಾರು.?

'ಬಿಗ್ ಬಾಸ್' ಮನೆಯಿಂದ ಇಂದು ಗಂಟು ಮೂಟೆ ಕಟ್ಟೋರು ಯಾರು.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 99ನೇ ದಿನ ಅನುಪಮಾ ಗೌಡ ಎಲಿಮಿನೇಟ್ ಆದರು. ಇದೀಗ 101ನೇ ದಿನ ಮತ್ತೊಂದು ಎಲಿಮಿನೇಷನ್ ನಡೆಯಲಿದೆ.

ಚಂದನ್ ಶೆಟ್ಟಿ, ದಿವಾಕರ್, ಸಮೀರಾಚಾರ್ಯ, ನಿವೇದಿತಾ ಗೌಡ, ಜಯರಾಂ ಕಾರ್ತಿಕ್ ಹಾಗೂ ಶ್ರುತಿ ಪ್ರಕಾಶ್ ಪೈಕಿ ಒಬ್ಬರು ಇಂದು ಹೊರ ಬೀಳಲಿದ್ದಾರೆ.

''ಬಿಗ್ ಬಾಸ್' ಮನೆಯಿಂದ ಶ್ರುತಿ ಪ್ರಕಾಶ್ ಔಟ್ ಆಗಿದ್ದಾರೆ, ನಿವೇದಿತಾ ಗೌಡ ಹೊರಬಂದಿದ್ದಾರೆ, ಸಮೀರಾಚಾರ್ಯ ಎಲಿಮಿನೇಟ್ ಆಗಿದ್ದಾರೆ'' ಎಂಬೆಲ್ಲ ಸುದ್ದಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದ್ರೆ, ಅಧಿಕೃತ ಮಾಹಿತಿ ಇಲ್ಲ.! ಮುಂದೆ ಓದಿರಿ...

'ಬಾಟಂ 2'ನಲ್ಲಿ ಇದ್ದೋರು ಮನೆಗೆ.!

ಕಳೆದ ವಾರ ಇದ್ದ ಏಳು ಮನೆ ಮಂದಿ ಪೈಕಿ ಯಾವ ಇಬ್ಬರು ಸ್ಪರ್ಧಿಗಳಿಗೆ ಅತಿ ಕಡಿಮೆ ವೋಟ್ ಬಂದಿದೆಯೋ, ಆ ಇಬ್ಬರಿಗೆ ಗೇಟ್ ಪಾಸ್ ಖಚಿತ. ಅದರಲ್ಲಿ ಈಗಾಗಲೇ ಅನುಪಮಾ ಗೌಡ ಎಲಿಮಿನೇಟ್ ಆಗಿದ್ದಾಗಿದೆ. ಅನುಪಮಾಗಿಂತ ಕೊಂಚ ಹೆಚ್ಚಿಗೆ ವೋಟ್ ಪಡೆದುಕೊಂಡಿರುವವರು, ಇತರರಿಗಿಂತ ಕಡಿಮೆ ವೋಟ್ ಗಿಟ್ಟಿಸಿಕೊಂಡಿರುವವರು ಇಂದು ಔಟ್ ಆಗಲಿದ್ದಾರೆ.

ವೋಟ್ ಗಳೆಲ್ಲವೂ ಒಂದೇ, ಆದ್ರೆ ಎಲಿಮೇಷನ್ ಮಾತ್ರ ಬೇರೆ ಬೇರೆ ದಿನ.!

ಯಾರೂ ಸೇಫ್ ಅಲ್ಲ.!

ಕಳೆದ ವಾರ ಪಂಚಾಯತಿ ನಡೆಸಿದ ಬಳಿಕ ದಿವಾಕರ್ ಅವರನ್ನ ಮೊದಲು ಸುದೀಪ್ ಸೇಫ್ ಮಾಡಿದರು. ಬಳಿಕ ಚಂದನ್ ಶೆಟ್ಟಿ, ಸಮೀರಾಚಾರ್ಯ, ನಿವೇದಿತಾ ಗೌಡ ಹಾಗೂ ಜೆಕೆ ರವರನ್ನ ಸುದೀಪ್ ಬಚಾವ್ ಮಾಡಿದರು. ಬಾಟಂ 2 ನಲ್ಲಿ ಶ್ರುತಿ ಪ್ರಕಾಶ್ ಹಾಗೂ ಅನುಪಮಾ ಗೌಡ ಇದ್ದರು.

ಸುದೀಪ್ ನೀಡಿದ್ದ ಸ್ಪಷ್ಟನೆ

''ಇವತ್ತು ಯಾರನ್ನ ಯಾವ ಆರ್ಡರ್ ನಲ್ಲಿ ಸೇವ್ ಮಾಡಿಕೊಂಡು ಬಂದ್ನೋ ಅದಕ್ಕೆ ಅರ್ಥ ಇಲ್ಲ'' ಎಂದು ಅಂದೇ ಸುದೀಪ್ ಸ್ಪಷ್ಟ ಪಡಿಸಿದರು. ಹೀಗಾಗಿ, ಮಿಕ್ಕ ಆರು ಮಂದಿ ಪೈಕಿ ಯಾರೂ ಸೇಫ್ ಆಗಿಲ್ಲ.

ಟಾಪ್ 5 ಹಂತಕ್ಕೆ ಹೋಗುವವರು ಯಾರ್ಯಾರು.?

ದಿವಾಕರ್, ಚಂದನ್ ಶೆಟ್ಟಿ, ಸಮೀರಾಚಾರ್ಯ, ನಿವೇದಿತಾ ಗೌಡ, ಜೆಕೆ, ಶ್ರುತಿ ಪ್ರಕಾಶ್ ಪೈಕಿ ಇಂದು ಯಾರು ಔಟ್ ಆಗಬೇಕು.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 5: Week 15: Among 6 Contestants, (Chandan Shetty, Diwakar, Niveditha Gowda, Jayaram Karthik, Sameer Acharya and Shruti Prakash) who will get eliminated today.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada