'ಬಿಗ್ ಬಾಸ್ ಕನ್ನಡ-5': ಮೂರನೇ ವಾರ ಗೇಟ್ ಪಾಸ್ ಯಾರಿಗೆ.?
Recommended Video

ಜನಸಾಮಾನ್ಯ ಸ್ಪರ್ಧಿಗಳ ಪರ ದನಿ ಎತ್ತಿ, ಸೆಲೆಬ್ರಿಟಿ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಿಯಾಝ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಇತ್ತ 'ಮೊಟ್ಟೆ' ಆಟದಲ್ಲಿ ಸಿಕ್ಕಾಪಟ್ಟೆ ಗರಂ ಆಗಿದ್ದ ದಯಾಳ್ ಪದ್ಮನಾಭನ್ ರನ್ನೂ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದಾರೆ. ಇತ್ತ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೂ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಟಾರ್ಗೆಟ್ ಆಗಿದ್ದಾರೆ.
ಹಾಗಾದ್ರೆ, 'ಬಿಗ್ ಬಾಸ್' ಮನೆಯಿಂದ ಮೂರನೇ ವಾರ ಹೊರ ಹೋಗಲು ನಾಮಿನೇಟ್ ಆಗಿರುವ ಸದಸ್ಯರು ಯಾರು.? ಸಂಪೂರ್ಣ ವಿವರ ಇಲ್ಲಿದೆ ಓದಿರಿ....

ಕ್ಯಾಪ್ಟನ್ ಆದ ಸಮೀರಾಚಾರ್ಯ
ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ನೀಡಿದ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಮೀರಾಚಾರ್ಯ ಕ್ಯಾಪ್ಟನ್ ಆದರು. ಹೀಗಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಮೀರಾಚಾರ್ಯ ಸೇಫ್ ಆದರು.

ನೇರವಾಗಿ ನಾಮಿನೇಟ್ ಆಗಿರುವ ಶ್ರುತಿ, ದಿವಾಕರ್
'ಕಳಪೆ' ಕಿತ್ತಾಟದ ಪರಿಣಾಮ ಕಳೆದ ವಾರದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಹಾಗೂ ದಿವಾಕರ್ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಡೇಂಜರ್ ಝೋನ್ ನಲ್ಲಿ ರಿಯಾಝ್
ಇದ್ದದ್ದನ್ನ ಇದ್ದ ಹಾಗೆ ಹೇಳುವ ರಿಯಾಝ್ ಈ ವಾರ ಕೂಡ ಡೇಂಜರ್ ಝೋನ್ ನಲ್ಲಿ ಇದ್ದಾರೆ. ಸಿಹಿ ಕಹಿ ಚಂದ್ರು, ಜೆಕೆ, ಆಶಿತಾ, ಅನುಪಮ ಗೌಡ, ಜಗನ್, ಕೃಷಿ ತಾಪಂಡ, ದಯಾಳ್, ಶ್ರುತಿ ಪ್ರಕಾಶ್ ಸೇರಿದಂತೆ ಒಟ್ಟು ಎಂಟು ಮಂದಿ ಮತ ಚಲಾಯಿಸಿದರಿಂದ ರಿಯಾಝ್ ನಾಮಿನೇಟ್ ಆಗಿದ್ದಾರೆ.

ಟಾರ್ಗೆಟ್ ಆದ ಜಯಶ್ರೀನಿವಾಸನ್
ಜಯಶ್ರೀನಿವಾಸನ್ ರವರನ್ನ ನಿವೇದಿತಾ ಗೌಡ, ಜೆಕೆ, ತೇಜಸ್ವಿನಿ, ಆಶಿತಾ, ಅನುಪಮಾ ಗೌಡ, ಜಗನ್, ಕೃಷಿ ತಾಪಂಡ ಹಾಗೂ ದಯಾಳ್ ನಾಮಿನೇಟ್ ಮಾಡಿದ್ದಾರೆ.

ದಯಾಳ್ ಮಿಸ್ ಆಗಲಿಲ್ಲ.!
ಜಯಶ್ರೀನಿವಾಸನ್, ರಿಯಾಝ್, ನಿವೇದಿತಾ ಗೌಡ, ಸಿಹಿ ಕಹಿ ಚಂದ್ರು, ಚಂದನ್ ಶೆಟ್ಟಿ ಸೇರಿದಂತೆ ಒಟ್ಟು ಐದು ಮಂದಿ ದಯಾಳ್ ಪದ್ಮನಾಭನ್ ರನ್ನ 'ಬಿಗ್ ಬಾಸ್' ಮನೆಯಿಂದ ಹೊರ ಕಳುಹಿಸಲು ಇಚ್ಛಿಸಿದ್ದಾರೆ.

ನಾಮಿನೇಟ್ ಆದ ನಿವೇದಿತಾ ಗೌಡ
ಸೆಲೆಬ್ರಿಟಿಗಳ ಮಧ್ಯೆ ಸೇರಿಕೊಂಡು ಸೆಲೆಬ್ರಿಟಿಯೇ ಆಗಿರುವ ನಿವೇದಿತಾ ಗೌಡ ರನ್ನ ಚಂದನ್ ಶೆಟ್ಟಿ, ತೇಜಸ್ವಿನಿ, ಶ್ರುತಿ ಪ್ರಕಾಶ್ ಹಾಗೂ ದಿವಾಕರ್ ನಾಮಿನೇಟ್ ಮಾಡಿದ್ದಾರೆ.

ಮೊದಲ ಬಾರಿ ನಾಮಿನೇಟ್ ಆದ ಅನುಪಮ ಗೌಡ
'ಅಕ್ಕ' ಅನುಪಮಾ ಗೌಡ ಹೆಸರನ್ನ ಕ್ಯಾಪ್ಟನ್ ಸಮೀರಾಚಾರ್ಯ ಸೂಚಿಸಿದರಿಂದ, ಅನುಪಮಾ ಗೌಡ ನೇರವಾಗಿ ನಾಮಿನೇಟ್ ಆದರು.

ಒಂದು ವೋಟ್ ಪಡೆದವರು.!
ಜಗನ್ನಾಥ್ ಹಾಗೂ ಸಿಹಿ ಕಹಿ ಚಂದ್ರು ಕೇವಲ ಒಂದು ವೋಟ್ ಪಡೆದರಿಂದಾಗಿ ನಾಮಿನೇಷನ್ ನಿಂದ ಸೇಫ್ ಆದರು.

ಈ ವಾರ ಯಾರು ಹೊರ ಹೋಗಬೇಕು.?
ರಿಯಾಝ್, ದಯಾಳ್, ಜಯಶ್ರೀನಿವಾಸನ್, ನಿವೇದಿತಾ ಗೌಡ, ದಿವಾಕರ್, ಶ್ರುತಿ ಪ್ರಕಾಶ್, ಅನುಪಮಾ ಗೌಡ ಪೈಕಿ ಈ ವಾರ ಯಾರು ಔಟ್ ಆಗಬೇಕು.? ನಿಮ್ಮ ಮತ ಯಾರಿಗೆ.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











