»   » 'ಬಿಗ್ ಬಾಸ್' ಮನೆಯೊಳಗೆ ನಟಿ ಶ್ರುತಿ ಹರಿಹರನ್ ಪ್ರತ್ಯಕ್ಷ.!

'ಬಿಗ್ ಬಾಸ್' ಮನೆಯೊಳಗೆ ನಟಿ ಶ್ರುತಿ ಹರಿಹರನ್ ಪ್ರತ್ಯಕ್ಷ.!

Posted By:
Subscribe to Filmibeat Kannada
Bigg Boss Kannada 5 : ಬಿಗ್ ಬಾಸ್' ಮನೆಯೊಳಗೆ ನಟಿ ಶ್ರುತಿ ಹರಿಹರನ್ ಪ್ರತ್ಯಕ್ಷ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐದು ವಾರಗಳು ಕಳೆದಿವೆ. ಐದು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇದೇ ಗ್ಯಾಪ್ ನಲ್ಲಿ 'ವೈಲ್ಡ್ ಕಾರ್ಡ್' ಮೂಲಕ ಸ್ಪರ್ಧಿಯೊಬ್ಬರು ಎಂಟ್ರಿ ಕೊಡಬೇಕಿತ್ತಲ್ವಾ... ಎಂದು ಎಲ್ಲರೂ ಆಲೋಚಿಸುತ್ತಿರುವಾಗಲೇ, 'ಕೋಮಲ ಹೆಣ್ಣೇ....' ಹಾಡಿನ ಮೂಲಕ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟವರು ನಟಿ ಶ್ರುತಿ ಹರಿಹರನ್.

'ಲೂಸಿಯಾ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ತಾರಕ್' ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿರುವ ಶ್ರುತಿ ಹರಿಹರನ್ 'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಯಾಗಿ ಬಂದಿದ್ದಾರಾ ಎಂದು ಎಲ್ಲರೂ ಕಣ್ಣು ಬಾಯಿ ಬಿಡುವಷ್ಟರಲ್ಲಿ ''ನಾನು ಅತಿಥಿಯಾಗಿ ಬಂದಿದ್ದೇನೆ'' ಎಂದರು ಶ್ರುತಿ ಹರಿಹರನ್.! ಮುಂದೆ ಓದಿರಿ...

'ಬಿಗ್ ಬಾಸ್' ಮನೆಯಲ್ಲಿ ಶ್ರುತಿ ಹರಿಹರನ್ ಪ್ರತ್ಯಕ್ಷ

'ಬಿಗ್ ಬಾಸ್' ಮನೆಯೊಳಗೆ ಶ್ರುತಿ ಹರಿಹರನ್ ಪ್ರತ್ಯಕ್ಷರಾದರು. ಎಲ್ಲಾ ಸ್ಪರ್ಧಿಗಳಿಗೂ ಐಸ್ ಕ್ರೀಮ್ ತೆಗೆದುಕೊಂಡು ಅತಿಥಿಯಾಗಿ 'ಬಿಗ್ ಬಾಸ್' ಮನೆಯೊಳಗೆ ಎಂಟ್ರಿಕೊಟ್ಟರು ಶ್ರುತಿ ಹರಿಹರನ್.

'ಕಿಚ್ಚನ್ ಟೈಮ್'ನಲ್ಲಿ ಶ್ರುತಿ ಹರಿಹರನ್

'ಬಿಗ್ ಬಾಸ್' ಮನೆಯೊಳಗೆ ಕಾಲಿಡುವ ಮುನ್ನ 'ಕಿಚ್ಚನ್ ಟೈಮ್' ಕಾರ್ಯಕ್ರಮದಲ್ಲಿ ಕ್ರಿಕೆಟರ್ ಗುಂಡಪ್ಪ ವಿಶ್ವನಾಥ್ ಜೊತೆಗೆ ನಟಿ ಶ್ರುತಿ ಹರಿಹರನ್ ಭಾಗವಹಿಸಿದರು.

ಒಂದು ರೌಂಡ್ ಹಾಕಿ ಬಂದ ಶ್ರುತಿ ಹರಿಹರನ್

'ಕಿಚ್ಚನ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, 'ಬಿಗ್ ಬಾಸ್' ಮನೆಯೊಳಗೆ ಒಂದು ರೌಂಡ್ ಹಾಕಿ ಬಂದರು ನಟಿ ಶ್ರುತಿ ಹರಿಹರನ್

'ಬಿಗ್ ಬಾಸ್' ಬಲ್ಲರು

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐದು ವಾರಗಳು ಕಳೆದಿರುವುದರಿಂದ, ಎಲ್ಲರೂ ವೈಲ್ಡ್ ಕಾರ್ಡ್ ಸ್ಪರ್ಧಿಯನ್ನು ಎದುರು ನೋಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಯಾವಾಗ ಆಗುತ್ತೋ, 'ಬಿಗ್ ಬಾಸ್' ಬಲ್ಲ.!

English summary
Bigg Boss Kannada 5: Week 5: Kannada Actress Shruthi Hariharan enters Bigg Boss house as Guest.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada