ಬೇಕು ಅಂತಲೇ ಸೋತರಂತೆ ಚಂದ್ರು.! ಕ್ಯಾಪ್ಟನ್ ನಿವೇದಿತಾಗೆ ಮುನಿಸು.!

By Harshitha

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐದನೇ ವಾರ ಚಂದನ್ ಶೆಟ್ಟಿ ಕ್ಯಾಪ್ಟನ್ ಆದಾಗ 'ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ' ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿಹಿ ಕಹಿ ಚಂದ್ರು ಇದೀಗ 'ಬೇಕು' ಅಂತಲೇ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಸೋತಿದ್ದಾರಂತೆ.!

ಆರನೇ ವಾರದ ಕ್ಯಾಪ್ಟನ್ ಆಯ್ಕೆಗಾಗಿ ಸ್ಪರ್ಧಿಗಳ ಸಾಮಾನ್ಯ ಜ್ಞಾನವನ್ನು 'ಬಿಗ್ ಬಾಸ್' ಪರೀಕ್ಷಿಸಿದರು. 'ಬಿಗ್ ಬಾಸ್' ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಗೊತ್ತಿದ್ದರೂ, ತಪ್ಪು ಉತ್ತರ ನೀಡಿ 'ಕ್ಯಾಪ್ಟನ್ ಟಾಸ್ಕ್'ನಲ್ಲಿ ಸೋಲು ಅನುಭವಿಸಿದರಂತೆ ಸಿಹಿ ಕಹಿ ಚಂದ್ರು.!

ಹಾಗಂತ ಸ್ವತಃ ಸಿಹಿ ಕಹಿ ಚಂದ್ರು ಅವರೇ... ಪ್ರಸ್ತುತ ಕ್ಯಾಪ್ಟನ್ ನಿವೇದಿತಾ ಗೌಡ ಬಳಿ ಹೇಳಿಕೊಂಡಿದ್ದಾರೆ. ''ಸರಿಯಾದ ಉತ್ತರ ಗೊತ್ತಿಲ್ಲದೇ ತಪ್ಪು ಉತ್ತರ ನೀಡಿ ಈಗ ಮಾತು ಬದಲಿಸುತ್ತಿರುವ ಸಿಹಿ ಕಹಿ ಚಂದ್ರು'' ಮೇಲೆ ನಿವೇದಿತಾ ಗೌಡ ಮುನಿಸಿಕೊಂಡಿದ್ದಾರೆ. ಮುಂದೆ ಓದಿರಿ....

ಎಲ್ಲ ಮುಗಿದ್ಮೇಲೆ ಈ ಮಾತು

ಎಲ್ಲ ಮುಗಿದ್ಮೇಲೆ ಈ ಮಾತು

ಕ್ಯಾಪ್ಟನ್ ಟಾಸ್ಕ್ ಮುಗಿದು... ಅತಿ ಹೆಚ್ಚು ಸರಿಯಾದ ಉತ್ತರಗಳನ್ನು ನೀಡಿದ ನಿವೇದಿತಾ ಗೌಡ ಕ್ಯಾಪ್ಟನ್ ಆಗಿ ಆಯ್ಕೆ ಆದ್ಮೇಲೆ... ಅಡುಗೆ ಅನಿಲ ಪೂರೈಕೆ ಸ್ಥಗಿತಗೊಂಡು ದೊಡ್ಡ ರಾದ್ಧಾಂತ ಆಗಿ... ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಿಹಿ ಕಹಿ ಚಂದ್ರು ರವರನ್ನ ನಿವೇದಿತಾ ನೇರವಾಗಿ ನಾಮಿನೇಟ್ ಮಾಡಿ... ಒಂದು ರಾತ್ರಿ ಕಳೆದ ಮೇಲೆ 'ಕ್ಯಾಪ್ಟನ್ ಟಾಸ್ಕ್ ನಲ್ಲಿ ಬೇಕು ಅಂತಲೇ ಸೋತಿದ್ದು' ಎಂದು ಸಿಹಿ ಕಹಿ ಚಂದ್ರು ಬಾಯಿಬಿಟ್ಟಿದ್ದಾರೆ.

ಅನುಪಮಾ ಜೊತೆ ಚಂದ್ರು ಮಾತುಕತೆ

ಅನುಪಮಾ ಜೊತೆ ಚಂದ್ರು ಮಾತುಕತೆ

''ಒಂದಾದರೂ ಉತ್ತರ ಸರಿಯಾಗಿ ಹೇಳೋಣ, ಇಲ್ಲ ಅಂದ್ರೆ ಮಾನ ಮರ್ಯಾದೆ ಹೋಗುತ್ತೆ ಅಂತ ಶರಾವತಿ ನದಿ ಎಂದು ಉತ್ತರಿಸಿದೆ. 'ಮಾಡು ಇಲ್ಲವೇ ಮಡಿ' ಪ್ರಶ್ನೆ ಕೇಳಿದಾಗ ಸರ್ದಾರ್ ವಲ್ಲಭಾಯ್ ಪಟೇಲ್ ಅಂತ ಸೀರಿಯಸ್ ಆಗಿ ಹೇಳಿದೆ'' ಎಂದು ತಾವು ಕ್ಯಾಪ್ಟನ್ ಟಾಸ್ಕ್ ನಲ್ಲಿ ಸರಿ-ತಪ್ಪು ಉತ್ತರಗಳನ್ನು ನೀಡಿದ ಬಗ್ಗೆ ಅನುಪಮಾ ಗೌಡ ಬಳಿ ಸಿಹಿ ಕಹಿ ಚಂದ್ರು ಹೇಳುತ್ತಿದ್ದರು.

ಕಾಲೆಳೆದ್ರಾ ಚಂದ್ರು.?

ಕಾಲೆಳೆದ್ರಾ ಚಂದ್ರು.?

ಇನ್ನೂ 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿ ಇದ್ದಾಗ, ಮನೆಯ ಕ್ಯಾಪ್ಟನ್ ಆಗಿದ್ದ ನಿವೇದಿತಾ ಗೌಡ... ಸ್ಕೂಲ್ ನಲ್ಲಿ ಕ್ಲಾಸ್ ಲೀಡರ್ (ಮಾನಿಟರ್) ಆದರು. ಇದೇ ವೇಳೆ ನಿವೇದಿತಾ ಗೌಡ ಕಾಲೆಳೆದರು ಸಿಹಿ ಕಹಿ ಚಂದ್ರು.

ಕನ್ನಡ ಬರೆಯುವ ಟಾಸ್ಕ್ ನಲ್ಲಿ...

ಕನ್ನಡ ಬರೆಯುವ ಟಾಸ್ಕ್ ನಲ್ಲಿ...

ಕನ್ನಡವನ್ನ ನಿವೇದಿತಾ ಸರಿಯಾಗಿ ಬರೆಯದೇ ಇದ್ದಾಗ, ''ಇವಳನ್ನ ಹೋಗಿ ಮಾನಿಟರ್ ಮಾಡಿದ್ದೀರಾ... ನಿಮಗೇನು ಹೇಳಬೇಕು ನಾವು...'' ಎಂದು ಕನ್ನಡ ಮೇಷ್ಟ್ರು 'ಕಿರಿಕ್' ಕೀರ್ತಿಗೆ ಸಿಹಿ ಕಹಿ ಚಂದ್ರು ಕೇಳಿದರು.

ಕೀರ್ತಿ ಕೊಟ್ಟ ಉತ್ತರ ಏನು.?

ಕೀರ್ತಿ ಕೊಟ್ಟ ಉತ್ತರ ಏನು.?

''ಅವಳ ಜಾಣತನ ಅಲ್ಲದೇ ಇದ್ದರೂ, ಇನ್ನೊಬ್ಬರ ದಡ್ಡತನ ಅವಳನ್ನ ಮಾನಿಟರ್ ಮಾಡಿದೆ'' ಎಂದು ಕೀರ್ತಿ ಉತ್ತರ ಕೊಟ್ಟರು. ಕೀರ್ತಿ ಕೊಟ್ಟ ಉತ್ತರ ನಿವೇದಿತಾಗೆ ಖುಷಿ ಕೊಡ್ತು.

ಬೇಕು ಅಂತಲೇ ಸೋತಿದ್ದು ಎಂದ ಸಿಹಿ ಕಹಿ ಚಂದ್ರು

ಬೇಕು ಅಂತಲೇ ಸೋತಿದ್ದು ಎಂದ ಸಿಹಿ ಕಹಿ ಚಂದ್ರು

ಸಿಹಿ ಕಹಿ ಚಂದ್ರು: ''ನೀನು ಹೇಳಿದ ಅಷ್ಟೂ ಪ್ರಶ್ನೆಗೆ ನನಗೆ ಉತ್ತರ ಗೊತ್ತಿತ್ತು''

ನಿವೇದಿತಾ ಗೌಡ : ''ನಿಮಗೆ ಬಂದ ಪ್ರಶ್ನೆಗಳಿಗೆ ನಿಮಗೆ ಉತ್ತರ ಗೊತ್ತಿತ್ತಾ.?''

ಸಿಹಿ ಕಹಿ ಚಂದ್ರು: ''ಹ್ಹೂಂ ಗೊತ್ತಿತ್ತು''

ನಿವೇದಿತಾ ಗೌಡ: ''ಮತ್ಯಾಕೆ ಹೇಳಿಲ್ಲ.?''

ಸಿಹಿ ಕಹಿ ಚಂದ್ರು: ''ನಾನು ಹೇಳಿದ್ರೆ, ನಾನು ಕ್ಯಾಪ್ಟನ್ ಆಗುತ್ತಿದ್ದೆ. ನಾನು ಕ್ಯಾಪ್ಟನ್ ಆಗಬಾರದು, ನೀನು ಆಗಬೇಕು ಅಂತ ಹೇಳಿಲ್ಲ. ನಾನು ಕ್ಯಾಪ್ಟನ್ ಆಗಿದ್ರೆ, ನೀನು ಮಾನಿಟರ್ ಆಗ್ತಿದ್ಯಾ.? ನಾನು ಕ್ಯಾಪ್ಟನ್ ಆಗಿದ್ರೆ, ನಿನಗೆ ರೂಮ್ ಸಿಗುತ್ತಿತ್ತಾ.? ನಿನಗೆ ಆಸೆ ಇತ್ತು ಅಲ್ವಾ ಕ್ಯಾಪ್ಟನ್ ಆಗಬೇಕು ಅಂತ. ಆದ್ರೆ, ನನಗೆ ಆಸೆ ಇರಲಿಲ್ಲ''

ನಿವೇದಿತಾ ಗೌಡ : ''ಸುಳ್ಳು, ತಪ್ಪು ತಪ್ಪು ಹೇಳಿಬಿಟ್ಟು ಈಗ ನನ್ನ ಮೇಲೆ ಹಾಕುತ್ತಾರೆ''

ಮುನಿಸಿಕೊಂಡ ನಿವೇದಿತಾ ಗೌಡ

ಮುನಿಸಿಕೊಂಡ ನಿವೇದಿತಾ ಗೌಡ

ಸಿಹಿ ಕಹಿ ಚಂದ್ರು ಆಡಿದ ಮಾತುಗಳನ್ನು ಕೇಳಿಸಿಕೊಂಡ ನಿವೇದಿತಾ ಗೌಡ, ದಿನದ ಟಾಸ್ಕ್ ಅಂತ್ಯವಾದ ಬಳಿಕ, ''ಅವರು ಬೇಕು ಅಂತ ಬಿಟ್ಟು ಕೊಟ್ಟಿಲ್ಲ. ಉತ್ತರಗಳನ್ನು ತಪ್ಪಾಗಿ ಹೇಳಿದರು. ನನಗೆ ಆ ಮಾತು ತುಂಬಾ ಬೇಜಾರು ಆಯ್ತು'' ಎಂದು ತಮ್ಮ ಬೇಸರವನ್ನ ಗಾರ್ಡನ್ ಏರಿಯಾದಲ್ಲಿ ಹೊರ ಹಾಕಿದರು.

ಅಷ್ಟಕ್ಕೂ, ಅವಶ್ಯಕತೆ ಏನಿತ್ತು.?

ಅಷ್ಟಕ್ಕೂ, ಅವಶ್ಯಕತೆ ಏನಿತ್ತು.?

ಅಸಲಿಗೆ, ಕ್ಯಾಪ್ಟನ್ ಟಾಸ್ಕ್ ನಲ್ಲಿ ಸೋಲುವ ಅವಶ್ಯಕತೆ ಸಿಹಿ ಕಹಿ ಚಂದ್ರು ಅವರಿಗೆ ಏನಿತ್ತೋ, ನಮಗೆ ಗೊತ್ತಿಲ್ಲ. ಒಂದು ವೇಳೆ ನಿವೇದಿತಾ ಗೌಡ ಕ್ಯಾಪ್ಟನ್ ಆಗಲಿ ಅಂತ ಮನಸ್ಸು ಪೂರ್ವಕವಾಗಿ ಬಿಟ್ಟುಕೊಟ್ಟಿದ್ದರೂ, ಅದನ್ನ ಪದೇ ಪದೇ ಹೇಳುವ, ಅಣಕಿಸುವ, ಕಾಲೆಳೆಯುವ ಅಗತ್ಯ ಇತ್ತಾ.? ಅಥವಾ ತಪ್ಪು ಉತ್ತರಗಳನ್ನು ನೀಡಿದ್ಮೇಲೆ ಅದನ್ನ ಮರೆಮಾಚಲು ಚಂದ್ರು ಹೀಗೆ ಮಾಡ್ತಿದ್ದಾರಾ.? ಈ ಪ್ರಶ್ನೆಗಳಿಗೆ ಸ್ವತಃ ಚಂದ್ರು ಅವರೇ ಉತ್ತರ ಕೊಡಬೇಕು.!

More from Filmibeat

English summary
Bigg Boss Kannada 5: Week 6: Sihi Kahi Chandru purposely loses captaincy task
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X