»   » ಸತತ ಏಳು ವಾರ ಸೇಫ್ ಆದ ಚಂದನ್ ಶೆಟ್ಟಿ: ಇದು ದಾಖಲೆ ಅಲ್ಲದೇ ಮತ್ತೇನು.?

ಸತತ ಏಳು ವಾರ ಸೇಫ್ ಆದ ಚಂದನ್ ಶೆಟ್ಟಿ: ಇದು ದಾಖಲೆ ಅಲ್ಲದೇ ಮತ್ತೇನು.?

Posted By:
Subscribe to Filmibeat Kannada
ಸತತ ಏಳು ವಾರ ಸೇಫ್ ಆದ ಚಂದನ್ ಶೆಟ್ಟಿ: ಇದು ದಾಖಲೆ ಅಲ್ಲದೇ ಮತ್ತೇನು.? | Filmibeat Kannada

ಚಂದನ್ ಶೆಟ್ಟಿ..... 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸತತ ಏಳನೇ ವಾರವೂ ನಾಮಿನೇಟ್ ಆಗದೆ ಡೇಂಜರ್ ಝೋನ್ ನಿಂದ ಸಂಪೂರ್ಣವಾಗಿ ದೂರ ಉಳಿದಿರುವ ಏಕೈಕ ಸ್ಪರ್ಧಿ.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ನಾಲ್ಕು ವಾರಗಳ ಕಾಲ ನಾಮಿನೇಟ್ ಆಗದೇ ಇದ್ದ ಚಂದನ್ ಶೆಟ್ಟಿ, ಐದನೇ ವಾರ ಕ್ಯಾಪ್ಟನ್ ಆಗಿ ಸೇಫ್ ಆದರು.

Bigg Boss Kannada 5: Week 7: Chandan Shetty safe from elimination

ಅದೃಷ್ಟವಶಾತ್ ಕ್ಯಾಪ್ಟನ್ ಆದ ಚಂದನ್ ಶೆಟ್ಟಿ: ಈ ವಾರ ಕೂಡ ಸೇಫ್.!

ಆರನೇ ವಾರ ನಾಮಿನೇಟ್ ಆಗಿದ್ದರೂ, ಅದು ನೋ ಎಲಿಮಿನೇಷನ್ ವೀಕ್ ಆಗಿದ್ರಿಂದ, ನಾಮಿನೇಷನ್ ಪ್ರಕ್ರಿಯೆ ಜಸ್ಟ್ ನಾಮಕಾವಸ್ತೆಗೆ ಆಗಿತ್ತು. ಹಾಗೇ, ವೋಟಿಂಗ್ ಲೈನ್ ಗಳು ಕೂಡ ತೆರೆದಿರಲಿಲ್ಲ.

ಇನ್ನೂ ಏಳನೇ ವಾರ ಚಂದನ್ ಶೆಟ್ಟಿಯನ್ನ 'ಬಿಗ್ ಬಾಸ್' ಮನೆಯ ಸದಸ್ಯರು ಬಚಾವ್ ಮಾಡಿದ ಪರಿಣಾಮ ಈ ವಾರವೂ ಚಂದನ್ ಶೆಟ್ಟಿ ಫುಲ್ ಸೇಫ್ ಆಗಿದ್ದಾರೆ.

ಅಷ್ಟರಲ್ಲೇ ಜಸ್ಟ್ ಮಿಸ್ ಆದ ಚಂದನ್: ಈ ವಾರವೂ ಶೆಟ್ರಿಗೆ ತಲೆನೋವಿಲ್ಲ.!

'ಬಿಗ್ ಬಾಸ್' ಮನೆಯಲ್ಲಿ ಒಮ್ಮೆ ಕೂಡ ವೀಕ್ಷಕರ ಎಸ್.ಎಂ.ಎಸ್ ಪಡೆಯದೆ ಏಳು ವಾರಗಳ ಕಾಲ ಸೇಫ್ ಆಗಿರುವ ಚಂದನ್ ಶೆಟ್ಟಿ ಗೇಮ್ ಪ್ಲಾನ್ ನ ಮೆಚ್ಚಲೇಬೇಕು. ಜೊತೆಗೆ ಇದು ದಾಖಲೆ ಅಲ್ಲದೇ ಮತ್ತೇನು.?

English summary
Bigg Boss Kannada 5: Week 7: Chandan Shetty safe from elimination

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada