'ಗೊಂಬೆ' ನಿವೇದಿತಾ ಪಾಲಾಯ್ತು 'ಕಳಪೆ' ಬೋರ್ಡ್.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸದ್ಯ 'ಬಿಗ್ ಬಾಸ್ ನಗರ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಸಮಾಪ್ತಿ ಆಗಿದೆ. ಈ ಟಾಸ್ಕ್ ನಲ್ಲಿ ಎಲ್ಲರ ಭಾಗವಹಿಸುವಿಕೆ ಉತ್ತಮವಾಗಿದ್ದರೂ, 'ಬೆಸ್ಟ್ ಪರ್ಫಾಮರ್' ಪಟ್ಟವನ್ನ ಕ್ಯಾಪ್ಟನ್ ಜೆಕೆ (ಜಯರಾಂ ಕಾರ್ತಿಕ್) ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗೆ ನೀಡಿದ್ದಾರೆ.
ಆರೋಗ್ಯ ಚೆನ್ನಾಗಿ ಇಲ್ಲದೇ ಇದ್ದರೂ, ಟ್ಯಾಕ್ಸಿ ಡ್ರೈವರ್ ಪಾತ್ರವನ್ನ ಜಯಶ್ರೀನಿವಾಸನ್ ಅತ್ಯುತ್ತಮವಾಗಿ ನಿಭಾಯಿಸಿದರು. ಜೊತೆಗೆ ಮನರಂಜನೆ ಕೂಡ ನೀಡಿದ್ರಿಂದಾಗಿ ಜಯಶ್ರೀನಿವಾಸನ್ ಗೆ 'ಬೆಸ್ಟ್ ಪರ್ಫಾಮರ್' ಪಟ್ಟವನ್ನ ಕ್ಯಾಪ್ಟನ್ ಜೆಕೆ ನೀಡಿದರು.

ಇನ್ನೂ, 'ಗೊಂಬೆ' ನಿವೇದಿತಾ ಗೌಡಗೆ ಕ್ಯಾಪ್ಟನ್ ಜೆಕೆ 'ಕಳಪೆ' ಬೋರ್ಡ್ ನೀಡಿದ್ದಾರೆ.
ಕಳಪೆ ಬೋರ್ಡ್ ನ ಸ್ವೀಕರಿಸಿದ ನಿವೇದಿತಾ, ''ಟಾಸ್ಕ್ ನಲ್ಲಿ ನಾನು ಸರಿಯಾಗಿ ಭಾಗವಹಿಸಲಿಲ್ಲ. ಹೀಗಾಗಿ ಕಳಪೆ ಬೋರ್ಡ್ ನ ಸ್ವಾಗತಿಸುತ್ತೇನೆ'' ಎಂದರು.
English summary
Bigg Boss Kannada 5: Week 7: Niveditha Gowda becomes worst performer
bigg boss kannada 5 bigg boss kannada news bigg boss tv colors channel niveditha gowda jayasreenivasan ಬಿಗ್ ಬಾಸ್ ಕನ್ನಡ 5 ಟಿವಿ ಬಿಗ್ ಬಾಸ್ ಕಲರ್ಸ್ ವಾಹಿನಿ ನಿವೇದಿತಾ ಗೌಡ ಜಯಶ್ರೀನಿವಾಸನ್


Click it and Unblock the Notifications