»   » ಇಂದು 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಡುವವರು ಯಾರು.?

ಇಂದು 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಡುವವರು ಯಾರು.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಏಳನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಇಂದು ನಡೆಯಲಿದೆ. ನಾಮಿನೇಟ್ ಆಗಿರುವ ಆರು ಮಂದಿ ಪೈಕಿ ಇಂದು ಯಾರಾದರೂ ಒಬ್ಬರು ಔಟ್ ಆಗಲಿದ್ದಾರೆ.

ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯಲ್ಲಿ ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಆದ್ರೆ, ಇಂದು ಹಾಗಾಗಲ್ಲ.

ಇವರನ್ನೆಲ್ಲ ಇತರೆ ಸ್ಪರ್ಧಿಗಳು ಉಳಿಸಲಿಲ್ಲ, ನೀವು ಉಳಿಸುತ್ತೀರಾ.?

ಕಳೆದ ವಾರವಷ್ಟೇ 'ಬಿಗ್ ಬಾಸ್' ಮನೆಯೊಳಗೆ ರೀಎಂಟ್ರಿ ಕೊಟ್ಟಿದ್ದ ಕೃಷಿ ತಾಪಂಡ ಸದ್ಯ ನಾಮಿನೇಟ್ ಆಗಿದ್ದಾರೆ. ಕೃಷಿ ತಾಪಂಡ ಜೊತೆಗೆ ಸಮೀರಾಚಾರ್ಯ, ರಿಯಾಝ್, ದಿವಾಕರ್, ಜಯಶ್ರೀನಿವಾಸನ್, ಸಿಹಿ ಕಹಿ ಚಂದ್ರು ಕೂಡ ನಾಮಿನೇಟ್ ಆಗಿದ್ದಾರೆ.

Bigg Boss Kannada 5: Week 7: who will get eliminated this week.?

ಕಿವಿಯೋಲೆ ಕೊಡಿಸಿದ ರಿಯಾಝ್: ಭಾವುಕರಾದ ಹೆಣ್ಮಕ್ಕಳು

ವೀಕ್ಷಕರ ಬೆಂಬಲ ಇಲ್ಲದೇ, ಅದಾಗಲೇ ಒಮ್ಮೆ ಔಟ್ ಆಗಿದ್ದ ಕೃಷಿ ತಾಪಂಡ ಈ ಬಾರಿ ವೀಕ್ಷಕರ ಮನಗೆಲ್ಲಲು ಯಶಸ್ವಿ ಆಗಿದ್ದಾರಾ.? ಟ್ಯಾಕ್ಸಿ ಚಾಲಕನಾಗಿ ಕಷ್ಟ ಪಟ್ಟು ಈ ವಾರ ಆಟವಾಡಿದ ಜಯಶ್ರೀನಿವಾಸನ್ ಇಂದು ಸೇಫ್ ಆಗುತ್ತಾರಾ.? ಚಂದನ್ ಶೆಟ್ಟಿ ಹಾಗೂ ದಿವಾಕರ್ ರಿಂದ ದೂರ ಆಗಿರುವ ರಿಯಾಝ್ ವೀಕ್ಷಕರಿಗೆ ಹತ್ತಿರವಾಗಿದ್ದಾರಾ.? ಕಳೆದ ವಾರ ವೀಕ್ಷಕರ ಬಗ್ಗೆ ಕೇವಲವಾಗಿ ಮಾತನಾಡಿದ್ದ ದಿವಾಕರ್ ಗೆ ವೀಕ್ಷಕರು ಜೈ ಎನ್ನುತ್ತಾರಾ.? ಒಂದೇ ಅಡುಗೆ ಮನೆ ಸೇರಿದ್ದ ಸಿಹಿ ಕಹಿ ಚಂದ್ರು ಹಾಗೂ ಸಮೀರಾಚಾರ್ಯ ವೀಕ್ಷಕರಿಗೆ ಇಷ್ಟವಾದ್ರಾ.?

'ಗೋಮುಖ ವ್ಯಾಘ್ರ' ರಿಯಾಝ್ ಔಟ್ ಆದರೆ ಪಾರ್ಟಿ ಮಾಡ್ತಾರಂತೆ ಚಂದನ್ ಶೆಟ್ಟಿ.!

ಈ ಪ್ರಶ್ನೆಗಳಿಗೆ ಇಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಉತ್ತರ ಸಿಗಲಿದೆ. ವಾರದ ಎಲ್ಲ ಘಟನೆಗಳ ಬಗ್ಗೆ ಪಂಚಾಯತಿ ನಡೆದ ಬಳಿಕ ಕಿಚ್ಚ ಸುದೀಪ್ ಯಾರನ್ನ ಹೊರ ಕರೆಯುತ್ತಾರೋ, ಕಾದು ನೋಡಬೇಕು.

English summary
Bigg Boss Kannada 5: Week 7: Sihi Kahi Chandru, Diwakar, Riyaz, Sameeracharya, Jayasreenivasan and Krishi are nominated for elimination. Who will get eliminated this week.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada