»   » 'ಬಿಗ್ ಬಾಸ್' ಮನೆಯ ಗಾಸಿಪ್ ಕ್ವೀನ್ ಯಾರು ಅಂತ ನಿಮ್ಗೊತ್ತಾ.?

'ಬಿಗ್ ಬಾಸ್' ಮನೆಯ ಗಾಸಿಪ್ ಕ್ವೀನ್ ಯಾರು ಅಂತ ನಿಮ್ಗೊತ್ತಾ.?

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಗುಸು ಗುಸು ಮಾಡುವವರು ಯಾರು.? ಎಂಬ ಪ್ರಶ್ನೆಗೆ ನಟಿ ಕೃಷಿ ತಾಪಂಡ ಥಟ್ ಅಂತ ಕೊಟ್ಟ ಹೆಸರು 'ಜೆಕೆ' ಅಲಿಯಾಸ್ ಜಯರಾಂ ಕಾರ್ತಿಕ್.

ಅಷ್ಟಕ್ಕೂ, ಕೃಷಿ ತಾಪಂಡ ಹೀಗೆ ಹೇಳಿದ್ದು 'ಸೂಪರ್ ಟಾಕ್ ಟೈಮ್'ನಲ್ಲಿ.! 'ಬಿಗ್ ಬಾಸ್' ಮನೆಗೆ ಅಕುಲ್ ಬಾಲಾಜಿ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದರು. 'ಅಕುಲ್ ಕಮಾಲ್' ಎಂಬ ವಿಶೇಷ ಚಟುವಟಿಕೆ ಮುಗಿದ ಬಳಿಕ 'ಬಿಗ್ ಬಾಸ್' ಮನೆಯಲ್ಲಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ರೀತಿ 'ದಿಢೀರ್ ಬೆಂಕಿ' ಸುತ್ತು ನಡೆಯಿತು. ಮನೆಯ ಎಲ್ಲ ಸದಸ್ಯರು ಇದರಲ್ಲಿ ಪಾಲ್ಗೊಂಡು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

Bigg Boss Kannada 5: Week 8: Karthik Jayaram is Gossip queen says Krishi Thapanda

ಹೊಡೆಯಿತು ಬಂಪರ್: ಎರಡು ಲಕ್ಷ ರೂಪಾಯಿ ಬಹುಮಾನ ಪಡೆದ ಜೆಕೆ.!

ಇದೇ ವೇಳೆ ನಟಿ ಕೃಷಿ ತಾಪಂಡ ಸರದಿ ಬಂದಾಗ, ''ಈ ಕೆಳಗಿನ ಹೆಸರು ಕಂಡಾಗ, ನಿಮ್ಮ ತಲೆಗೆ ಬರುವ ಮನೆಯ ಸದಸ್ಯರು ಯಾರು.?'' ಎಂದು 'ಗಾಸಿಪ್ ಕ್ವೀನ್' ಎಂಬ ಟ್ಯಾಗ್ ಲೈನ್ ನ ಕೃಷಿ ತಾಪಂಡ ಮುಂದಿಟ್ಟರು ಅಕುಲ್ ಬಾಲಾಜಿ.

ಆಗ ಹಿಂದು ಮುಂದು ಯೋಚಿಸದೆ, ಹೆಣ್ಮಕ್ಕಳ ಹೆಸರು ಹೇಳುವ ಬದಲು 'ಜೆಕೆ' ಎಂದುಬಿಟ್ಟರು ಕೃಷಿ ತಾಪಂಡ. 'ಕ್ವೀನ್' ಅಂತ ಅಕುಲ್ ಒತ್ತಿ ಒತ್ತಿ ಹೇಳಿದರೂ, 'ಜೆಕೆ' ಅಂತಲೇ ಕೃಷಿ ತಾಪಂಡ ಉತ್ತರಿಸಿದರು. ಜೊತೆಗೆ ''ನಾನು ಹೆಚ್ಚು ಗಾಸಿಪ್ ಮಾಡುವುದು ಜೆಕೆ ಜೊತೆ'' ಎಂದು ಕೃಷಿ ತಾಪಂಡ ಸಮರ್ಥಿಸಿಕೊಂಡರು.

Bigg Boss Kannada 5: Week 8: Karthik Jayaram is Gossip queen says Krishi Thapanda

ನಂತರ ನಿವೇದಿತಾ ಗೌಡಗೆ 'ಡ್ರಾಮಾ ಕ್ವೀನ್' ಹಾಗೂ ಶ್ರುತಿ ಪ್ರಕಾಶ್ ಗೆ 'ಇನ್ನೋಸೆಂಟ್ ಕ್ವೀನ್' ಪಟ್ಟವನ್ನ ಕೃಷಿ ತಾಪಂಡ ನೀಡಿದರು.

English summary
Bigg Boss Kannada 5: Week 8: Karthik Jayaram is 'Gossip queen' comments Krishi Thapanda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada