ಎಲ್ಲರನ್ನೂ ಡೇಂಜರ್ ಝೋನ್ ಗೆ ತಳ್ಳಿ ಶಾಕ್ ಕೊಟ್ಟ 'ಬಿಗ್ ಬಾಸ್'.!

By Harshitha

Recommended Video

ಬಿಗ್ ಬಾಸ್ ಕನ್ನಡ ಸೀಸನ್ 5 : ಸ್ಪರ್ಧಿಗಳಿಗೆ ಸಿಕ್ತು ಷಾಕಿಂಗ್ ಸುದ್ದಿ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎಲ್ಲರಿಗೂ ರುಚಿ ರುಚಿಯಾದ ಅಡುಗೆ ಮಾಡುತ್ತ, ಮನೆಯಲ್ಲಿ 'ಅಪ್ಪ'ನ ಸ್ಥಾನ ತುಂಬಿದ್ದ ಸಿಹಿ ಕಹಿ ಚಂದ್ರು ಔಟ್ ಆದ ಬಳಿಕ 'ಬಿಗ್ ಬಾಸ್' ಮನೆಯ ಎಲ್ಲ ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ, ಮನೆಯ ಒಬ್ಬೊಬ್ಬ ಸದಸ್ಯರು ಕನ್ಫೆಶನ್ ರೂಮ್ ಒಳಗೆ ಹೋಗಿ ತಮಗೆ ಆಗದ ಇಬ್ಬರು ಸದಸ್ಯರನ್ನ ನಾಮಿನೇಟ್ ಮಾಡಬೇಕಿತ್ತು. ಆದ್ರೆ, ಈ ವಾರ ಹಾಗೆ ನಡೆಯಲಿಲ್ಲ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎಂಟನೇ ವಾರದ ನಾಮಿನೇಷನ್ ಪ್ರಕ್ರಿಯೆ ತದ್ವಿರುದ್ಧವಾಗಿತ್ತು. ಮನೆಯ ಸದಸ್ಯರೆಲ್ಲ ಕುಣಿದು ಕುಪ್ಪಳಿಸುತ್ತಿದ್ದಾಗ, 'ಬಿಗ್ ಬಾಸ್' ಶಾಕ್ ಟ್ರೀಟ್ಮೆಂಟ್ ಕೊಟ್ಟರು. ಮುಂದೆ ಓದಿರಿ...

ಶಾಕ್ ಕೊಟ್ಟ 'ಬಿಗ್ ಬಾಸ್'

ಶಾಕ್ ಕೊಟ್ಟ 'ಬಿಗ್ ಬಾಸ್'

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐವತ್ತು ದಿನಗಳು ಕಳೆದ ಮೇಲೆ ಎಲ್ಲ ಸದಸ್ಯರನ್ನ 'ಬಿಗ್ ಬಾಸ್' ಡೇಂಜರ್ ಝೋನ್ ಗೆ ತಳ್ಳಿದ್ದಾರೆ.

ಕ್ಯಾಪ್ಟನ್ ಮಾತ್ರ ಸೇಫ್

ಕ್ಯಾಪ್ಟನ್ ಮಾತ್ರ ಸೇಫ್

ಜಗನ್ನಾಥ್ ಚಂದ್ರಶೇಖರ್... 'ಬಿಗ್ ಬಾಸ್' ಮನೆಯ ಎಂಟನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆದರು. ಹೀಗಾಗಿ, ನಾಮಿನೇಷನ್ ನಿಂದ ಜಗನ್ ಸೇಫ್ ಆದರು.

ಹೊಸ ಸ್ಪರ್ಧಿ ಕೂಡ ಸೇಫ್.!

ಹೊಸ ಸ್ಪರ್ಧಿ ಕೂಡ ಸೇಫ್.!

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ವೈಷ್ಣವಿ ಕೂಡ ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಿದ್ದಾರೆ. ವೈಷ್ಣವಿ ಮತ್ತು ಜಗನ್ ಹೊರತು ಪಡಿಸಿದರೆ, ಬಾಕಿ ಎಲ್ಲರೂ ನಾಮಿನೇಟ್ ಆಗಿದ್ದಾರೆ.

ನಾಮಿನೇಟ್ ಆಗಿದ್ದಾರೆ ಹನ್ನೊಂದು ಮಂದಿ.!

ನಾಮಿನೇಟ್ ಆಗಿದ್ದಾರೆ ಹನ್ನೊಂದು ಮಂದಿ.!

ಜೆಕೆ, ಜಯಶ್ರೀನಿವಾಸನ್, ಶ್ರುತಿ ಪ್ರಕಾಶ್, ಆಶಿತಾ, ರಿಯಾಝ್, ಚಂದನ್ ಶೆಟ್ಟಿ, ಸಮೀರಾಚಾರ್ಯ, ದಿವಾಕರ್, ಅನುಪಮಾ ಗೌಡ, ನಿವೇದಿತಾ ಗೌಡ ಹಾಗೂ ಕೃಷಿ ತಾಪಂಡ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.

'ಬಿಗ್ ಬಾಸ್' ಹೀಗೆ ಮಾಡಲು ಕಾರಣ ಏನು.?

'ಬಿಗ್ ಬಾಸ್' ಹೀಗೆ ಮಾಡಲು ಕಾರಣ ಏನು.?

ಮನೆಯ ನಿಯಮದಂತೆ ಪ್ರತಿ ವಾರ ಸದಸ್ಯರ ಆಯ್ಕೆ ಮತ್ತು ಇನ್ನಿತರ ವಿಶೇಷ ನಿಯಮಗಳ ಅನುಸಾರ ಸದಸ್ಯರು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗುತ್ತಾರೆ. ಕಳೆದ ಏಳು ವಾರಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ಇದೇ ರೀತಿ ನಡೆದಿದೆ. ಮನೆಗೆ ಬಂದು ಐವತ್ತು ದಿನಗಳು ಕಳೆದಿದೆ. ಈ ಹಂತದಲ್ಲಿ ಮನೆಯ ಸದಸ್ಯರ ಬಗ್ಗೆ ವೀಕ್ಷಕರ ಅಭಿಪ್ರಾಯವನ್ನು ಏಕ ಕಾಲಕ್ಕೆ ತಿಳಿಯಲು ಬಿಗ್ ಬಾಸ್ ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ.

ಹನ್ನೊಂದು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?

ಹನ್ನೊಂದು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?

ಜೆಕೆ, ಜಯಶ್ರೀನಿವಾಸನ್, ಶ್ರುತಿ ಪ್ರಕಾಶ್, ಆಶಿತಾ, ರಿಯಾಝ್, ಚಂದನ್ ಶೆಟ್ಟಿ, ಸಮೀರಾಚಾರ್ಯ, ದಿವಾಕರ್, ಅನುಪಮಾ ಗೌಡ, ನಿವೇದಿತಾ ಗೌಡ ಹಾಗೂ ಕೃಷಿ ತಾಪಂಡ.... ಈ ಹನ್ನೊಂದು ಮಂದಿ ಪೈಕಿ 'ಬಿಗ್ ಬಾಸ್' ಮನೆಯಲ್ಲಿ ಯಾರು ಉಳಿಯಬೇಕು.? ಯಾರು ಔಟ್ ಆಗಬೇಕು ಎಂಬ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

More from Filmibeat

English summary
Bigg Boss Kannada 5: Week 8: Diwakar, Riyaz, Sameeracharya, Jayasreenivasan, Ashita, Shruti Prakash, Chandan Shetty, Anupama Gowda, Niveditha Gowda, Jayaram Karthik and Krishi are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X