ಪ್ರೀತಿಯ ಸಂದೇಶ ಬೆಂಕಿಯಲ್ಲಿ ಹೊತ್ತಿ ಉರಿದಾಗ...
'ಬಿಗ್ ಬಾಸ್' ಮನೆ ಅಂದ್ರೇನೇ ಹಾಗೆ, ಅಲ್ಲಿ ಆಡಿಸಿದಾತ ಆಡಿದಂತೆಯೇ ಆಡಬೇಕು. ಅಲ್ಲಿ ಆಡುವ ಪ್ರತಿಯೊಂದು ಆಟದ ಹಿಂದೆಯೂ ಒಂದು ಅರ್ಥ ಇರುತ್ತೆ. ಸಂಬಂಧ, ಭಾವನೆ, ಹಸಿವು... ಇವೆಲ್ಲದರ ನಿಜವಾದ ಬೆಲೆ ಗೊತ್ತಾಗುವುದು ಇಲ್ಲಿಯೇ.
ಹೊರಗಿನ ಪ್ರಪಂಚದ ಸಂಬಂಧ ಕಡಿದುಕೊಂಡು.. ಮೊಬೈಲ್, ಟಿವಿ, ಇಂಟರ್ ನೆಟ್ ಇದಾವುದೂ ಇಲ್ಲದೆ... ಕುಟುಂಬದವರ ಜೊತೆಗೂ ಸಂಪರ್ಕ ಇಲ್ಲದೆ ಒಂಬತ್ತು ವಾರ ಕಳೆದಿರುವ ಸ್ಪರ್ಧಿಗಳಿಗೆ ಕುಟುಂಬದವರ ಮೌಲ್ಯ ಎಂಥದ್ದು ಅಂತ ನಿನ್ನೆ 'ಬಿಗ್ ಬಾಸ್' ಅರ್ಥ ಮಾಡಿಸಿದರು.

ಎಲ್ಲ ಸ್ಪರ್ಧಿಗಳ ಕುಟುಂಬಗಳಿಂದ ಪ್ರೀತಿಯ ಸಂದೇಶ ಸಂಗ್ರಹಿಸಿದ್ದ 'ಬಿಗ್ ಬಾಸ್', ಕೇವಲ ಐದು ಮಂದಿಗೆ ಮಾತ್ರ ಪತ್ರವನ್ನ ಓದುವ ಅವಕಾಶ ನೀಡಿದರು.
ಮನೆಯಿಂದ ಬಂದಿರುವ ಪ್ರೀತಿಯ ಸಂದೇಶವನ್ನು ಓದಲು ಅರ್ಹವಲ್ಲದ ಸ್ಪರ್ಧಿಯ ಪತ್ರವನ್ನು ಇತರೆ ಸ್ಪರ್ಧಿಗಳು ಉರಿಯುತ್ತಿರುವ ಬೆಂಕಿಗೆ ಹಾಕಬೇಕಿತ್ತು.
ಹಾಗೆ... ನಿವೇದಿತಾ ಗೌಡ, ಜೆಕೆ, ಕೃಷಿ ತಾಪಂಡ, ಶ್ರುತಿ ಪ್ರಕಾಶ್, ಸಮೀರಾಚಾರ್ಯ ಹಾಗೂ ಜಗನ್ ಗೆ ಅವರವರ ಕುಟುಂಬದಿಂದ ಬಂದಿದ್ದ ಪತ್ರಗಳು ಬೆಂಕಿಗೆ ಆಹುತಿ ಆದವು. ಪತ್ರಗಳು ಬೆಂಕಿಗೆ ಬಿದ್ದಿದ್ದನ್ನು ಕಂಡು ಸ್ಪರ್ಧಿಗಳು ಭಾವುಕರಾದರು.
ಅನುಪಮಾ ಗೌಡ, ದಿವಾಕರ್, ಚಂದನ್ ಶೆಟ್ಟಿ, ಜಯಶ್ರೀನಿವಾಸನ್ ಹಾಗೂ ರಿಯಾಝ್ ಗೆ ಮಾತ್ರ ಪತ್ರ ಓದುವ ಅವಕಾಶ ಸಿಕ್ತು. ಭಾರದ ಹೃದಯದಿಂದಲೇ ಪತ್ರ ಓದಿದ ಸ್ಪರ್ಧಿಗಳು ಕಣ್ಣೀರಿಟ್ಟರು. ಒಟ್ನಲ್ಲಿ ದೂರ ಇದ್ದರೆ ಸಂಬಂಧದ ಬೆಲೆ ಗೊತ್ತಾಗುವುದು ಎಂದು 'ಬಿಗ್ ಬಾಸ್' ಎಲ್ಲ ಸ್ಪರ್ಧಿಗಳಿಗೂ ಅರಿವು ಮೂಡಿಸಿದರು.


Click it and Unblock the Notifications











