twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಮನೆಯೊಳಗೆ ಪುಟಾಣಿ ಮಗುವಿನ ಕಲರವ

    By Harshitha
    |

    Recommended Video

    ಬಿಗ್ ಬಾಸ್ ಕನ್ನಡ ಸೀಸನ್ 5 : ನಿವೇದಿತಾ ಗೌಡ ಕೈಯಲ್ಲಿ ಪುಟ್ಟ ಕಂದಮ್ಮ | Filmibeat Kannada

    'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಒಂದು ಮುದ್ದು ಕಂದಮ್ಮ ಎಂಟ್ರಿಕೊಟ್ಟಿದೆ. ಹಾಗಂತ ಪುಟಾಣಿ ಮಗು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿಲ್ಲ. ಬದಲಾಗಿ, ಮಗುವಿನ ಗೊಂಬೆಯೊಂದು 'ದೊಡ್ಮನೆ'ಯೊಳಗೆ ಬಂದಿದೆ.

    ಹೌದು, ಮನೆಗೆ ಮಗುವಿನ ಗೊಂಬೆಯೊಂದನ್ನು ಕಳುಹಿಸುವ ಮೂಲಕ ಸ್ಪರ್ಧಿಗಳಿಗೆಲ್ಲ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದಾರೆ. ಮಗುವಿನ ಗೊಂಬೆ ಯಾವ ಜೋಡಿ ಬಳಿ ಇರುತ್ತದೆಯೋ, ಅವರು ಅದನ್ನು ಎಚ್ಚರಿಕೆ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು.

    Bigg Boss Kannada 5: Week 9: Baby Care special task for bbk5 contestants

    ಈ ವಾರ ನಾಮಿನೇಷನ್ ನಲ್ಲಿ 'ಜೋಡಿ' ಶಾಕ್ ಕೊಟ್ಟ ಬಿಗ್ ಬಾಸ್ ಈ ವಾರ ನಾಮಿನೇಷನ್ ನಲ್ಲಿ 'ಜೋಡಿ' ಶಾಕ್ ಕೊಟ್ಟ ಬಿಗ್ ಬಾಸ್

    ಮಗುವಿನ ಗೊಂಬೆಯನ್ನು ಗೊಂಬೆಯಂತೆ ಪರಿಗಣಿಸದೆ, ನಿಜವಾದ ಮಗುವಿನಂತೆ ಲಾಲನೆ, ಪೋಷಣೆ ಮಾಡುವ ಜವಾಬ್ದಾರಿ 'ಬಿಗ್ ಬಾಸ್' ಸ್ಪರ್ಧಿಗಳದ್ದು.

    ಸದ್ಯ ಅನುಪಮಾ ಗೌಡ ಹಾಗೂ ಶ್ರುತಿ ಪ್ರಕಾಶ್, ಜಯಶ್ರೀನಿವಾಸನ್ ಹಾಗೂ ರಿಯಾಝ್, ಜಗನ್ ಹಾಗೂ ಜೆಕೆ, ಸಮೀರಾಚಾರ್ಯ ಮತ್ತು ದಿವಾಕರ್, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿಯಾಗಿದ್ದಾರೆ.

    Bigg Boss Kannada 5: Week 9: Baby Care special task for bbk5 contestants

    ಈ ಜೋಡಿಗಳ ಪೈಕಿ ಕಾಲ ಕಾಲಕ್ಕೆ ಯಾರ ಜೊತೆ ಮಗು ಇರಬೇಕು ಅಂತ ನಿರ್ಧಾರ ಮಾಡುವವರು ಕ್ಯಾಪ್ಟನ್ ಕೃಷಿ ತಾಪಂಡ. ಈಗಾಗಲೇ, ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ, ಜಯಶ್ರೀನಿವಾಸನ್ ಹಾಗೂ ರಿಯಾಝ್, ಅನುಪಮಾ ಹಾಗೂ ಶ್ರುತಿ ಕೈಗೆ ಮಗು ಸೇರಿದ್ದಾಗಿದೆ.

    Bigg Boss Kannada 5: Week 9: Baby Care special task for bbk5 contestants

    ಮಗುವಿಗೆ ಸ್ನಾನ ಮಾಡಿಸುವುದರಿಂದ ಹಿಡಿದು, ದೃಷ್ಟಿ ತೆಗೆದು, ಲಾಲಿ ಹಾಡಿ ಮಲಗಿಸುವುದರ ವರೆಗೂ ಈ ಜೋಡಿಗಳು ಮಗುವಿನ ಆರೈಕೆ ಮಾಡಿವೆ.

    English summary
    Bigg Boss Kannada 5: Week 9: Baby Care - Special task for BBK5 Contestants
    Wednesday, December 13, 2017, 10:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X