ಮತ್ತದೇ ತಪ್ಪು ಮಾಡಿದ್ರಾ.? ಎರಡು ಪ್ಯಾಕೆಟ್ ಹಾಲು ಮುಚ್ಚಿಟ್ಟಿದ್ದು ಯಾಕೆ.?

By Harshitha

ಅದಾಗಲೇ ಒಮ್ಮೆ ಹಾಲಿನ ವಿಚಾರಕ್ಕೆ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಕೋಲಾಹಲವೇ ನಡೆದು ಹೋಗಿದೆ. ನಾಲ್ಕು ಪ್ಯಾಕೆಟ್ ಹಾಲನ್ನ ಬಚ್ಚಿಟ್ಟು, ಸಮೀರಾಚಾರ್ಯ ಒಂದು ಲೋಟ ಹಾಲು ಕೇಳಿದಾಗ ಕೊಡದೆ, ದೊಡ್ಡ ಪಂಚಾಯತಿ ನಡೆಸಿದವರು 'ಬಿಗ್ ಬಾಸ್' ಮನೆಯ ಮಹಾನ್ ಸ್ಪರ್ಧಿಗಳು.!

ಸ್ಪರ್ಧಿಗಳ ಈ ವರ್ತನೆಯನ್ನ ಖಂಡಿಸಿ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದರು. ಹಾಲನ್ನ ಮುಚ್ಚಿಟ್ಟವರು ಜನರ ಮುಂದೆ ಹೇಗೆ ಕಾಣಿಸಿಕೊಳ್ಳುತ್ತಿದ್ದೀರಾ ಅಂತ ಮೊದಲು ಯೋಚಿಸಿ ಎಂದು ಸ್ಪರ್ಧಿಗಳಿಗೆ ಸುದೀಪ್ ಎಚ್ಚರಿಸಿದ್ದರು. ಆದರೂ, ಸ್ಪರ್ಧಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಯಾಕಂದ್ರೆ, ಅಡುಗೆ ಮನೆಯಲ್ಲಿ ಎರಡು ಪ್ಯಾಕೆಟ್ ಹಾಲನ್ನ ಮತ್ತೆ ಮುಚ್ಚಿಡಲಾಗಿದೆ.

ಎರಡು ಪ್ಯಾಕೆಟ್ ಹಾಲನ್ನ ಮುಚ್ಚಿಟ್ಟಿರುವುದು ದಿವಾಕರ್ ಗಮನಕ್ಕೆ ಬಂದಿದೆ. ಅದನ್ನ ಕ್ಯಾಪ್ಟನ್ ಕೃಷಿ ಬಳಿ ದಿವಾಕರ್ ಪ್ರಶ್ನಿಸಿದ್ದಾರೆ. ಅದಕ್ಕೆ ಕೃಷಿ ಕೊಟ್ಟ ಸಬೂಬು ಏನು ಗೊತ್ತಾ.? ಮುಂದೆ ಓದಿರಿ...

ದಿವಾಕರ್ ಮನಸ್ಸಲ್ಲಿ ಮೂಡಿದೆ ಅನುಮಾನ

ದಿವಾಕರ್ ಮನಸ್ಸಲ್ಲಿ ಮೂಡಿದೆ ಅನುಮಾನ

ಹಾಲನ್ನ ಮುಚ್ಚಿಟ್ಟಿರುವುದನ್ನು ನೋಡಿದ್ಮೇಲೆ, ಕ್ಯಾಪ್ಟನ್ ಕೃಷಿ ನ ಕರೆದು ''ಎರಡು ಪ್ಯಾಕೆಟ್ ಹಾಲನ್ನು ಯಾರೋ ಕೆಳಗೆ ಇಟ್ಟಿದ್ದಾರೆ'' ಅಂತ ದಿವಾಕರ್ ಹೇಳಿದರು.

ಕೃಷಿ ಕೊಟ್ಟ ಸಬೂಬು ಏನು.?

ಕೃಷಿ ಕೊಟ್ಟ ಸಬೂಬು ಏನು.?

''ಅದು ಹಳೆಯದ್ದು, ಕಳೆದ ವಾರದ್ದು'' ಅಂತ ಕೃಷಿ ಕಾರಣ ಕೊಟ್ಟರು. ''ಒಟ್ಟಿಗೆ ಇಟ್ಟರೆ ಒಳ್ಳೆಯದ್ದಲ್ವಾ.?'' ಅಂತ ದಿವಾಕರ್ ಕೇಳಿದ್ದಕ್ಕೆ, ''ಅದು ಮೊಸರಿಗೆ ಅಂತ ತೆಗೆದು ಇಟ್ಟಿರುವುದು. ಹೊಸ ಪ್ಯಾಕೆಟ್ ಜೊತೆ ಸೇರಿಸಿದರೆ ಪ್ರಾಬ್ಲಂ ಆಗುತ್ತೆ ಅಂತ ಸೈಡಲ್ಲಿ ತೆಗೆದು ಇಟ್ಟಿರುವುದು. ಯಾರೂ ಮುಚ್ಚಿಟ್ಟಿಲ್ಲ'' ಎಂದು ಕೃಷಿ ಸಬೂಬು ನೀಡಿದರು.

ಎಚ್ಚರಿಸಿದ ದಿವಾಕರ್

ಎಚ್ಚರಿಸಿದ ದಿವಾಕರ್

''ಕಳೆದ ಬಾರಿ ಹೀಗೆ ಆಗಿತ್ತು, ಅದಕ್ಕೆ ಹೇಳ್ದೆ'' ಎಂದು ಹಳೆಯ ಘಟನೆಯನ್ನ ನೆನಪಿಸುತ್ತಾ ಕೃಷಿಗೆ ದಿವಾಕರ್ ಎಚ್ಚರಿಸಿದರು. ಆದ್ರೆ, ಅದನ್ನ ಸಕಾರಾತ್ಮಕವಾಗಿ ಸ್ವೀಕರಿಸಿದೇ, ಅನುಪಮಾ ಗೌಡ ಬಳಿ ಹೋಗಿ ವರದಿ ಒಪ್ಪಿಸುತ್ತಿದ್ದರು ಕ್ಯಾಪ್ಟನ್ ಕೃಷಿ.

ಕಳೆದ ಬಾರಿ ದಯಾಳ್ ಗೆ ಹೇಳಿದ್ದೂ ಇದೇ ಕೃಷಿ.!

ಕಳೆದ ಬಾರಿ ದಯಾಳ್ ಗೆ ಹೇಳಿದ್ದೂ ಇದೇ ಕೃಷಿ.!

ಹಾಲನ್ನ ಎತ್ತಿಡಲು ದಯಾಳ್ ಗೆ ಕಳೆದ ಬಾರಿ ಹೇಳಿದ್ದು ಇದೇ ಕೃಷಿ ತಾಪಂಡ. ಅರ್ಧಕ್ಕೆ ಅರ್ಧ ಮನೆಗೆ ಹಾಲನ್ನ ಎತ್ತಿಡುವ ವಿಷಯ ಗೊತ್ತಿಲ್ಲದ ಕಾರಣ ದೊಡ್ಡ ರಾದ್ದಾಂತ ಆಗಿತ್ತು. ಈಗಲೂ, ಯಾರಿಗೂ ಗೊತ್ತಿಲ್ಲದೆ ಹಾಲನ್ನ ಎತ್ತಿಡಲಾಗಿದೆ. ಎಲ್ಲರಿಗೂ ಹೇಳಿದರೆ ಏನ್ ಸಮಸ್ಯೆ ಆಗುತ್ತೋ, ದೇವರೇ ಬಲ್ಲ. ಆದ್ರೆ, ಅದನ್ನ ಪ್ರಶ್ನೆ ಮಾಡಿದವರು ಮಾತ್ರ ಕೆಟ್ಟವರು ಎಂಬಂತೆ ಕಿಚ್ಚನ್ ಡಿಪಾರ್ಟ್ಮೆಂಟ್ ನವರು ಭಾವಿಸುತ್ತಾರೆ.

More from Filmibeat

English summary
Bigg Boss Kannada 5: Week 9: Diwakar questions Krishi about Milk Packets hidden in Kitchen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X