ಕೋಪ ಕಮ್ಮಿ ಮಾಡಿ ಅಂತ ಸುದೀಪ್ ಹೇಳದೇ ಇದ್ದಿದ್ರೆ, ಕಥೆ ಬೇರೆ ಆಗ್ತಿತ್ತು.!

By Harshitha

Recommended Video

ಬಿಗ್ ಬಾಸ್ ಕನ್ನಡ ಸೀಸನ್ 5 : ಸಂಯುಕ್ತ ಹೆಗ್ಡೆ ಬಗ್ಗೆ ಕಾಮೆಂಟ್ ಮಾಡಿದ ಜಗನ್ | Filmibeat Kannada

ಪ್ರತಿ ವಾರ ಒಂದಲ್ಲ ಒಂದು ಜಗಳ ಆಡದೆ ಜಗನ್ ಕಾಲ ಕಳೆದಿದ್ದೇ ಇಲ್ಲ. ಟಾಸ್ಕ್ ನಲ್ಲಂತೂ ರೋಷಾವೇಷದಿಂದ ಆಡುವ ಜಗನ್ ಅನೇಕ ಬಾರಿ ಕಣ್ಣು ದೊಡ್ಡದು ಮಾಡಿ ಕೂಗಾಡಿದ್ದಾರೆ.

ಜಗನ್ ರವರ ಉಗ್ರಪ್ರತಾಪ ನೋಡಿ ''ಕೋಪ ಕಮ್ಮಿ ಮಾಡಿಕೊಳ್ಳಿ. ಆಟದಲ್ಲಿ ಆಕ್ರಮಣಕಾರಿ ಆಗಬೇಡಿ'' ಎಂದು ಸುದೀಪ್ ಕೂಡ ಅನೇಕ ಬಾರಿ ಜಗನ್ ಗೆ ಬುದ್ಧಿ ಮಾತು ಹೇಳಿದ್ದರು.

ಸುದೀಪ್ ಆಡಿದ ಮಾತುಗಳು ಜಗನ್ ತಲೆಯೊಳಗೆ ಹೋದ ಕಾರಣ, ಜಗನ್ ಕೋಪಕ್ಕೆ ನಟಿ ಸಂಯುಕ್ತ ಬಲಿ ಆಗಲಿಲ್ಲ. ಒಂದು ವೇಳೆ ಸುದೀಪ್ ಹಾಗೆ ಹೇಳದೇ ಇದ್ದಿದ್ದರೆ, ಕಥೆ ಬೇರೆ ಆಗ್ತಿತ್ತು.! ಮುಂದೆ ಓದಿರಿ...

ಬಾಂಬ್ ಹಾಕಿದ ಸಂಯುಕ್ತ

ಬಾಂಬ್ ಹಾಕಿದ ಸಂಯುಕ್ತ

''ಸಂಯುಕ್ತ ಬರ್ತಿದ್ದಂತೆ, ನಿಮ್ಮ ಮುಖದ ಮೇಲೆ ಒಂದು ಬಾಂಬ್ ಹಾಕ್ತಾರೆ. ಆ ಪ್ರಶ್ನೆ ನಿಮಗೆ ಓಕೆ ಇತ್ತಾ.?'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಜಗನ್ ಗೆ ಸುದೀಪ್ ಪ್ರಶ್ನಿಸಿದರು.

ಜಗನ್ ಹೇಳಿದ್ದೇನು.?

ಜಗನ್ ಹೇಳಿದ್ದೇನು.?

''ನಿಜ ಹೇಳ್ಬೇಕಂದ್ರೆ, ಕಳೆದ ಶನಿವಾರ ನೀವು ನನಗೆ ಬುದ್ಧಿ ಹೇಳಿದ್ರಿ. ಅದಕ್ಕಿಂತ ಮುಂಚೆ ಈ ಘಟನೆ ನಡೆದಿದ್ರೆ, ಉತ್ತರ ಬೇರೆ ತರಹ ಇರ್ತಿತ್ತು'' ಎಂದು ಜಗನ್ ಹೇಳಿದಾಗ, ''ಹೇಗೆ ಇರ್ತಿತ್ತು.?'' ಎಂದು ಸುದೀಪ್ ಕೇಳಿದರು. ಆಗ ಜಗನ್ ಕೊಟ್ಟ ಉತ್ತರ ಏನು ಅಂದ್ರೆ...

ಜಗನ್ ಕೊಟ್ಟ ಉತ್ತರ ಏನು.?

ಜಗನ್ ಕೊಟ್ಟ ಉತ್ತರ ಏನು.?

''ನೀನು ಯಾರು ಅದನ್ನೆಲ್ಲ ಕೇಳೋಕೆ ಅಂತಿದ್ದೆ'' ಎಂದರು ಜಗನ್. ಆಗ ''ಈ ತರಹ ಪ್ರಶ್ನೆಗಳಿಗೆ ಉತ್ತರ ಕೊಡಲು ಸಂಯುಕ್ತ ಯಾವತ್ತೂ ರೆಡಿ'' ಎಂದರು ಸುದೀಪ್.

ಸಂಯುಕ್ತ ಏನು ಹೇಳ್ತಿದ್ರು.?

ಸಂಯುಕ್ತ ಏನು ಹೇಳ್ತಿದ್ರು.?

ಒಂದ್ವೇಳೆ, ಜಗನ್ ಆ ರೀತಿ ಹೇಳಿದ್ರೆ,'' ನಾನು ಕೇಳ್ತಿಲ್ಲ. ಹೊರಗೆ ಇರುವ ಕೋಟ್ಯಾಂತರ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರ ಕೊಡು'' ಅಂತಿದ್ರಂತೆ ಸಂಯುಕ್ತ

ಆಶಿತಾ ಹಾಗೂ ಜಗನ್ ನಡುವೆ ಇದ್ದದ್ದು ಏನು.?

ಆಶಿತಾ ಹಾಗೂ ಜಗನ್ ನಡುವೆ ಇದ್ದದ್ದು ಏನು.?

''ನನ್ನ ಹಾಗೂ ಆಶಿತಾ ನಡುವೆ ಇದ್ದದ್ದು ಫ್ರೆಂಡ್ ಶಿಪ್ ಗಿಂತ ಒಂದು ಸ್ಟೆಪ್ ಮೇಲೆ'' ಎಂದು ಕ್ಲಾರಿಟಿ ನೀಡಿದರು ನಟ ಜಗನ್

More from Filmibeat

English summary
Bigg Boss Kannada 5: Week 9: Jaganath Chandrashekar comments about Samyuktha Hegde.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X