ಜಯಶ್ರೀನಿವಾಸನ್ ಅಂದುಕೊಂಡಂತೆ ಆಯ್ತು: ಹೊಸ ಸ್ಪರ್ಧಿ ಬಂದ್ರು.!

By Harshitha

Recommended Video

ಬಿಗ್ ಬಾಸ್ ಕನ್ನಡ ಸೀಸನ್ 5 : ಜಯಾಶ್ರೀನಿವಾಸನ್ ಅಂದುಕೊಂಡಂತೆ ಆಯ್ತು? | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗ, 'ದೊಡ್ಮನೆ'ಯೊಳಗೆ ಮೊದಲು ಕಾಲಿಟ್ಟವರು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್. 'ಬಿಗ್ ಬಾಸ್' ಮನೆಗೆ ಎಂಟ್ರಿಕೊಡುತ್ತಿದ್ದಂತೆಯೇ, ಕನ್ಫೆಶನ್ ರೂಮ್ ಸೇರಿದ ಜಯಶ್ರೀನಿವಾಸನ್, ಮಿಕ್ಕೆಲ್ಲಾ ಸ್ಪರ್ಧಿಗಳ ಎಂಟ್ರಿಯನ್ನ ಅಲ್ಲಿಂದಲೇ ವೀಕ್ಷಿಸಿದರು.

ಹಾಗೆ, ಸ್ಪರ್ಧಿಗಳು ಒಬ್ಬೊಬ್ಬರೇ 'ಬಿಗ್' ಮನೆಯೊಳಗೆ ಕಾಲಿಡುತ್ತಿದ್ದಾಗ ಜಯಶ್ರೀನಿವಾಸನ್ ಉದ್ಗಾರ ಮಾಡುತ್ತಿದ್ದ ಮಾತು 'ನಾನ್ ಅಂದ್ಕೊಂಡೆ'.!

ಅವತ್ತು ಜಯಶ್ರೀನಿವಾಸನ್ ಏನ್ ಅಂದುಕೊಂಡಿದ್ರೋ, ಬಿಟ್ಟಿದ್ರೋ... ಆದ್ರೆ, ನಿನ್ನೆ ಜಯಶ್ರೀನಿವಾಸನ್ ಅಂದುಕೊಂಡ ಹಾಗೇ ನಡೆದಿದೆ. ''ಬಿಗ್ ಬಾಸ್' ಮನೆಗೆ ಹದಿನೆಂಟು ನಂಬರ್ ಲಕ್ಕಿ ಅಲ್ಲ. ಇನ್ನೊಬ್ಬ ಸ್ಪರ್ಧಿ ಬೇಕು'' ಅಂತ ಜಯಶ್ರೀನಿವಾಸನ್ ಲೆಕ್ಕಾಚಾರ ಮಾಡುತ್ತಿರುವಾಗಲೇ, ಹತ್ತೊಂಬತ್ತನೆಯ ಸ್ಪರ್ಧಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ. ಮುಂದೆ ಓದಿರಿ...

ಮೊದಲು ಹೋದವರು 17 ಸ್ಪರ್ಧಿಗಳು

ಮೊದಲು ಹೋದವರು 17 ಸ್ಪರ್ಧಿಗಳು

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲ ದಿನ 'ಬಿಗ್' ಮನೆಗೆ ಕಾಲಿಟ್ಟ ಸ್ಪರ್ಧಿಗಳ ಸಂಖ್ಯೆ 17.

ಒಂದು ವೈಲ್ಡ್ ಕಾರ್ಡ್

ಒಂದು ವೈಲ್ಡ್ ಕಾರ್ಡ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿ ವೈಷ್ಣವಿ ಬಂದ್ರು. ಆದ್ರೆ, ಆಟದಲ್ಲಿ ಆಕೆಯ ಬೆನ್ನಿಗೆ ಪೆಟ್ಟು ಬಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಗೇಟ್ ಪಾಸ್ ಪಡೆದರು.

ಹದಿನೆಂಟು ಒಳ್ಳೆಯದಲ್ಲ.!

ಹದಿನೆಂಟು ಒಳ್ಳೆಯದಲ್ಲ.!

ಇಲ್ಲಿಯವರೆಗೂ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಒಟ್ಟು ಸ್ಪರ್ಧಿಗಳ ಸಂಖ್ಯೆ ಹದಿನೆಂಟು. ಈ ಹದಿನೆಂಟು ಜನ ಬಂದು ಹೋಗಿರುವುದು ಒಳ್ಳೆಯದಲ್ಲ. ಇನ್ನೊಬ್ಬರು ಬರಬೇಕು ಎಂಬುದು ಜಯಶ್ರೀನಿವಾಸನ್ ರವರ ಲೆಕ್ಕಾಚಾರ.

ಜಯಶ್ರೀನಿವಾಸನ್ ಹೇಳಿದ್ದೇನು.?

ಜಯಶ್ರೀನಿವಾಸನ್ ಹೇಳಿದ್ದೇನು.?

''18 ಜನ ಬಂದು ಹೋಗಿರುವುದು ಒಳ್ಳೆಯದಲ್ಲ. ಇನ್ನೊಬ್ಬರು ಯಾರಾದರೂ ಬಾರದೇ ಇದ್ದರೆ ಗ್ಯಾರೆಂಟಿ ಹೊಡೆತ ಬೀಳುತ್ತೆ. ಏಟು ಬಿದ್ದೇ ಬೀಳುತ್ತೆ'' ಎಂದು ರಿಯಾಝ್ ಬಳಿ ಜಯಶ್ರೀನಿವಾಸನ್ ಹೇಳಿದರು.

ಟೆಂಪರ್ ಪ್ರಾಬ್ಲಂ

ಟೆಂಪರ್ ಪ್ರಾಬ್ಲಂ

''ಹದಿನೆಂಟು ಮಾತ್ರ ಯಾರಿಗೂ ಒಳ್ಳೆಯದಲ್ಲ. ಟೆಂಪರ್ ನ ಮಾತ್ರ ಕಡಿಮೆ ಮಾಡಿಕೊಳ್ಳೋಣ ಅನ್ಬಹುದು. ಆದ್ರೆ, ಜಗನ್ ಟೆಂಪರ್ ನ ನಾನು ನಂಬುವುದೇ ಇಲ್ಲ. ಕಾಲು ಕೆರೆದುಕೊಂಡು ಜಗಳ ಮಾಡೋದ್ರಲ್ಲಿ ದಿವಾಕರ್ ನೂ ನಂಬಲು ಆಗಲ್ಲ'' ಎನ್ನುವುದು ಜಯಶ್ರೀನಿವಾಸನ್ ಅವರ ಅಭಿಪ್ರಾಯ.

ಇನ್ನೊಬ್ಬರು ಬರ್ತಾರಾ.?

ಇನ್ನೊಬ್ಬರು ಬರ್ತಾರಾ.?

ಜಯಶ್ರೀನಿವಾಸನ್ ಇಷ್ಟೆಲ್ಲ ಹೇಳಿದ್ಮೇಲೆ, ಅವರ ಬಳಿ ''ಇನ್ನೊಬ್ಬರು ಬರ್ತಾರಾ ಯಾರಾದರೂ.?'' ಎಂದು ರಿಯಾಝ್ ಪ್ರಶ್ನಿಸಿದರು. ಅದಕ್ಕೆ, ''ಬಂದರೆ ಒಳ್ಳೆಯದ್ದು ಅನ್ಸುತ್ತೆ'' ಎಂದು ಜಯಶ್ರೀನಿವಾಸನ್ ಉತ್ತರಿಸಿದರು.

ಅಂದುಕೊಂಡಂತೆ ಆಯ್ತಲ್ಲ.!

ಅಂದುಕೊಂಡಂತೆ ಆಯ್ತಲ್ಲ.!

ಜಯಶ್ರೀನಿವಾಸನ್ ಅಂದುಕೊಂಡಂತೆ 'ಬಿಗ್ ಬಾಸ್' ಮನೆಗೆ ಹತ್ತೊಂಬತ್ತನೆಯ ಸ್ಪರ್ಧಿಯ ಆಗಮನ ಆಗಿದೆ. ಆಕೆಯೇ ಲಾಸ್ಯ ನಾಗ್.

ಸೆಲೆಬ್ರಿಟಿ ಗೆಸ್ಟ್ ಆಗಿ ಸಂಯುಕ್ತ

ಸೆಲೆಬ್ರಿಟಿ ಗೆಸ್ಟ್ ಆಗಿ ಸಂಯುಕ್ತ

ಇನ್ನೂ ಲಾಸ್ಯಗೆ ಜೋಡಿಯಾಗಿ 'ಬಿಗ್ ಬಾಸ್' ಮನೆಯೊಳಗೆ ಸಂಯುಕ್ತ ಹೆಗ್ಡೆ ಅತಿಥಿಯಾಗಿ ಬಂದಿದ್ದಾರೆ. ಆದ್ರೆ, ಆಕೆ ಎಂಬ ಸತ್ಯ ಮಾತ್ರ ಮಿಕ್ಕ ಸ್ಪರ್ಧಿಗಳಿಗೆ ಗೊತ್ತಿಲ್ಲ.

More from Filmibeat

English summary
Bigg Boss Kannada 5: Week 9: Jayasreenivasan predicts about wild card entry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X