'ಬಿಗ್ ಬಾಸ್' ಮನೆಯ 'ಕಿಚನ್' ವಾಸ್ತು ಸರಿಯಿಲ್ಲ.! ಸಾಕ್ಷಿ ಬೇಕಾ.?

By Harshitha

Recommended Video

ಬಿಗ್ ಬಾಸ್ ಕನ್ನಡ ಸೀಸನ್ 5 : ಬಿಗ್ ಮನೆಯ ಅಡುಗೆಮನೆಗೆ ವಾಸ್ತು ದೋಷ ಇದ್ಯಾ? | Filmibeat Kannada

'ಬಿಗ್ ಬಾಸ್ ಕನ್ನಡ-5' ಶುರು ಆಗಿ 59 ದಿನಗಳು ಕಳೆದಿವೆ. ಅರ್ಧಕ್ಕೆ ಅರ್ಧ ಆಟ ಮುಗಿದ್ಮೇಲೆ 'ಬಿಗ್ ಬಾಸ್' ಮನೆಯಲ್ಲಿ ಅಡುಗೆ ಮನೆಯ ವಾಸ್ತು ಸರಿಯಿಲ್ವಾ ಎಂಬ ಅನುಮಾನ ಮೂಡಲು ಶುರು ಆಗಿದೆ.

ಅದಕ್ಕೆ ಕಾರಣ ಏನಪ್ಪಾ ಅಂದ್ರೆ, ಅಡುಗೆ ಮನೆಯ ಡಿಪಾರ್ಟ್ ಮೆಂಟ್ ನಲ್ಲಿ ಇದ್ದವರೇ ಇಲ್ಲಿಯವರೆಗೂ ಎಲಿಮಿನೇಟ್ ಆಗಿದ್ದಾರೆ. ಹೀಗಾಗಿ, ಹೊಸ ಲೆಕ್ಕಾಚಾರ ಆರಂಭವಾಗಿದೆ. ಅದು ಕೃಷಿ ತಾಪಂಡ, ಅನುಪಮಾ ಗೌಡ ಕಡೆಯಿಂದ....

ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹೆಚ್ಚು ಕಿರಿಕ್ ಆಗುತ್ತಿರುವುದೇ ಅಡುಗೆ, ಊಟ, ತಿಂಡಿ ವಿಚಾರಕ್ಕೆ. ಹೀಗಾಗಿ, ಅಡುಗೆ ಮಾಡುವವರೇ ಎಲ್ಲರ ಟಾರ್ಗೆಟ್ ಆಗಿದ್ದಾರೆ. ಕಾಕತಾಳೀಯ ಅಂದ್ರೆ, ಅಡುಗೆ ಮನೆಯ ಡಿಪಾರ್ಟ್ ಮೆಂಟ್ ನಲ್ಲಿ ಇರುವವರೇ ಎಲಿಮಿನೇಟ್ ಆಗುತ್ತಿದ್ದಾರೆ. ಹಾಗಾದ್ರೆ, ಇದು ವಾಸ್ತು ದೋಷವೇ.? ನಮಗಂತೂ ಗೊತ್ತಿಲ್ಲ. ಆದ್ರೆ, ಅದಕ್ಕೆ ಪೂರಕವಾಗಿರುವ ಸಾಕ್ಷಿ ಇಲ್ಲಿದೆ. ಓದಿರಿ...

ಅಡುಗೆ ಮನೆಯಲ್ಲಿ ಇದ್ದವರೇ ಔಟ್ ಆಗಿದ್ದಾರೆ.!

ಅಡುಗೆ ಮನೆಯಲ್ಲಿ ಇದ್ದವರೇ ಔಟ್ ಆಗಿದ್ದಾರೆ.!

ಇಲ್ಲಿಯವರೆಗೂ ಆರು ಮಂದಿ (ಸುಮಾ ರಾಜ್ ಕುಮಾರ್, ಮೇಘ, ದಯಾಳ್ ಪದ್ಮನಾಭನ್, ತೇಜಸ್ವಿನಿ, ಸಿಹಿ ಕಹಿ ಚಂದ್ರು ಮತ್ತು ಆಶಿತಾ) 'ಬಿಗ್ ಬಾಸ್' ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಆಶ್ಚರ್ಯ ಅಂದ್ರೆ, ಈ ಆರು ಮಂದಿ ಪೈಕಿ ಮೇಘ ಒಬ್ಬರನ್ನು ಬಿಟ್ಟರೆ, ಮಿಕ್ಕ ಐದು ಮಂದಿ ಕೂಡ 'ಬಿಗ್ ಬಾಸ್' ಮನೆಯಲ್ಲಿ ಅಡುಗೆ ಮನೆಯಲ್ಲಿಯೇ ಹೆಚ್ಚು ಕಾಲ ಕಳೆದವರು.!

ಎರಡು ದೊಡ್ಡ ತಲೆ ಉರುಳಿದ್ದು ಅಡುಗೆ ಮನೆಯಿಂದಲೇ.!

ಎರಡು ದೊಡ್ಡ ತಲೆ ಉರುಳಿದ್ದು ಅಡುಗೆ ಮನೆಯಿಂದಲೇ.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಘಟಾನುಘಟಿ ಸ್ಪರ್ಧಿಗಳು ಅಂತಲೇ ಗುರುತಿಸಿಕೊಂಡಿದ್ದ ದಯಾಳ್ ಪದ್ಮನಾಭನ್ ಹಾಗೂ ಸಿಹಿ ಕಹಿ ಚಂದ್ರು ಕೂಡ ಅಡುಗೆ ಮನೆಯ ಉಸ್ತುವಾರಿ ವಹಿಸಿಕೊಂಡಿದ್ದವರು. ಅಚ್ಚರಿ ಅಂದ್ರೆ, ಇವರಿಬ್ಬರೂ ಅರ್ಧ ಆಟ ಮುಗಿಯುವ ಮುನ್ನವೇ ಎಲಿಮಿನೇಟ್ ಆಗ್ಬಿಟ್ಟರು.

ಆಗಾಗ ಗಲಾಟೆ ಆಗುವುದು ತಿನ್ನುವ ವಿಚಾರಕ್ಕೆ.!

ಆಗಾಗ ಗಲಾಟೆ ಆಗುವುದು ತಿನ್ನುವ ವಿಚಾರಕ್ಕೆ.!

ಒಂದು ಲೋಟ ಹಾಲು, ಪ್ಯಾಕೆಟ್ ಬಿಸ್ಕತ್ತು, ಐಸ್ ಕ್ರೀಮ್ ಸೇರಿದಂತೆ ತಿನ್ನುವ ವಿಚಾರಕ್ಕೆ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ರಾದ್ಧಾಂತ ಆಗಿದೆ, ಆಗುತ್ತಿದೆ.

ಸ್ಪರ್ಧಿಗಳ ತಲೆಯಲ್ಲೂ ಈ ಲೆಕ್ಕಾಚಾರ ಬಂದಿದೆ.!

ಸ್ಪರ್ಧಿಗಳ ತಲೆಯಲ್ಲೂ ಈ ಲೆಕ್ಕಾಚಾರ ಬಂದಿದೆ.!

''ಅಡುಗೆ ಮನೆಯಲ್ಲಿ ಇದ್ದವರೇ ಹೊರಗೆ ಹೋಗುತ್ತಿರುವುದು'' ಎಂದು ಸ್ವತಃ ಕೃಷಿ ತಾಪಂಡ ಹೇಳಿದ್ದಾರೆ.

ಅಡುಗೆ ಮನೆಯಲ್ಲಿ ಇದ್ದವರಿಗೆ ಸಮಯ ಇಲ್ಲ.!

ಅಡುಗೆ ಮನೆಯಲ್ಲಿ ಇದ್ದವರಿಗೆ ಸಮಯ ಇಲ್ಲ.!

ಅಡುಗೆ ಮನೆಯಲ್ಲಿ ಇದ್ದವರಿಗೆ ಸಮಯ ಸಿಗುತ್ತಿಲ್ಲ. ಬೇರೆಯವರಿಗೆ ಸಮಯ ಸಿಗುತ್ತಿದೆ ಅಂತಾರೆ ಅನುಪಮಾ ಗೌಡ.

ಮ್ಯೂಸಿಕ್ - ಡ್ಯಾನ್ಸ್

ಮ್ಯೂಸಿಕ್ - ಡ್ಯಾನ್ಸ್

ತಮ್ಮ ಮ್ಯೂಸಿಕ್ ನಿಂದಾಗಿ ಚಂದನ್ ಶೆಟ್ಟಿ ಅಭಿಮಾನಿಗಳನ್ನು ಗಳಿಸಿದ್ದರೆ, ನಿವೇದಿತಾ ಡ್ಯಾನ್ಸ್ ಮಾಡುತ್ತಾ ಕ್ಯಾಮರಾ ಕಂಗಳಲ್ಲಿ ಸೆರೆಯಾಗುತ್ತಿದ್ದಾರೆ ಅನ್ನೋದು ಅನುಪಮಾ ಅಭಿಪ್ರಾಯ.

ಇವರಿಬ್ಬರು ಯಾಕೆ ಉಳಿದುಕೊಂಡಿದ್ದಾರೋ.?

ಇವರಿಬ್ಬರು ಯಾಕೆ ಉಳಿದುಕೊಂಡಿದ್ದಾರೋ.?

''ಜಯಶ್ರೀನಿವಾಸನ್ ಇಷ್ಟು ವಾರ ಉಳಿದುಕೊಳ್ಳುತ್ತಾರೆ ಅಂತಲೇ ಅಂದುಕೊಂಡಿರಲಿಲ್ಲ'' ಅಂತ ಕೃಷಿ ಹೇಳಿದರೆ ''ದಿವಾಕರ್ ಉಳಿದುಕೊಂಡಿರುವುದಕ್ಕೆ ಕಾರಣ ಏನೂ ಅಂತಲೇ ಗೊತ್ತಾಗುತ್ತಿಲ್ಲ'' ಅಂತಾರೆ ಅನುಪಮಾ ಗೌಡ.

ಈ ವಾರ ಏನಾಗುತ್ತೋ.?

ಈ ವಾರ ಏನಾಗುತ್ತೋ.?

ಬಾಕಿಯವರೆಲ್ಲ ಉಳಿದುಕೊಂಡು ಅಡುಗೆ ಮನೆಯಲ್ಲಿ ಇದ್ದವರೇ ಹೊರಗೆ ಹೋಗುತ್ತಿರುವುದರಿಂದ ಸ್ಪರ್ಧಿಗಳ ತಲೆಯಲ್ಲಿ ಹೊಸ ಲೆಕ್ಕಾಚಾರ ಶುರು ಆಗಿದೆ. ಅಡುಗೆ ಮನೆಯಲ್ಲಿ ಇದ್ದವರಿಗೇ ಗೇಟ್ ಪಾಸ್ ಸಿಗುತ್ತಿದ್ದರೆ, ಈ ವಾರ ಯಾರು ಹೊರ ಹೋಗುತ್ತಾರೋ, ನೋಡೋಣ.

More from Filmibeat

English summary
Bigg Boss Kannada 5: Week 9: Krishi and Anupama's analysis over Kitchen department and eliminated contestants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X