ಆತ್ಮೀಯ ಗೆಳತಿ ಲಾಸ್ಯಗೆ ಕಿವಿಮಾತು ಹೇಳಿದ ಸಂಯುಕ್ತ
'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರ ಜೊತೆ 'ಕಿರಿಕ್' ಮಾಡಿಕೊಂಡಿರುವ ನಟಿ ಸಂಯುಕ್ತ ಹೆಗ್ಡೆ, ತಮ್ಮ ಜೋಡಿ ಲಾಸ್ಯ ಜೊತೆ ಮಾತ್ರ ಆತ್ಮೀಯವಾಗಿ ಇದ್ದಾರೆ.
ಹಾಗ್ನೋಡಿದ್ರೆ, ಸಂಯುಕ್ತ ಹಾಗೂ ಲಾಸ್ಯ... ಇವರಿಬ್ಬರೂ ಬಹಳ ದಿನಗಳಿಂದ ಕ್ಲೋಸ್ ಫ್ರೆಂಡ್ಸ್. ಇಬ್ಬರ ಫ್ರೆಂಡ್ ಶಿಪ್ 'ಬಿಗ್ ಬಾಸ್' ಮನೆಯಲ್ಲೂ ಮುಂದುವರೆದಿದೆ.

'ಬಿಗ್ ಬಾಸ್' ನೀಡುವ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಎಲ್ಲರಿಗಿಂತ ಅತ್ಯುತ್ತಮವಾಗಿ ಪರ್ಫಾಮ್ ಮಾಡಬೇಕು ಎಂಬುದು ನಟಿ ಸಂಯುಕ್ತ ಬಯಕೆ. ಇದನ್ನೇ ತಮ್ಮ ಜೋಡಿ ಲಾಸ್ಯ ತಲೆಗೂ ತುಂಬಿದ್ದಾರೆ ನಟಿ ಸಂಯುಕ್ತ ಹೆಗ್ಡೆ.
''ಇಲ್ಲಿರುವವರ ಪೈಕಿ ಒಬ್ಬರಾಗಲು ನನಗೆ ಇಷ್ಟ ಇಲ್ಲ. ನಾವು ಇವರುಗಳ ತರಹ ಪರ್ಫಾಮ್ ಮಾಡಿದರೆ ಆಗಲ್ಲ. 50 ದಿನ ಇದ್ದು, ಇವರು ಹೀಗೆ ಪರ್ಫಾಮ್ ಮಾಡ್ತಿದ್ದಾರೆ. ನಾವು ಈಗ ಬಂದು ಹೀಗೆ ಮಾಡಿದರೆ ಆಗಲ್ಲ. ಜನ ಎರಡು ರೀತಿ ಮಾತನಾಡುತ್ತಾರೆ... 'ಈಗ ಬಂದಿದ್ದಾರೆ, ಸ್ಲೋ ಆಗಿ ಪಿಕ್ ಅಪ್ ಆಗ್ತಾರೆ'... 'ಈಗ ಬಂದರೂ ಎಷ್ಟು ಚೆನ್ನಾಗಿ ಮಾಡ್ತಾರೆ'... ಈ ಎರಡರಲ್ಲಿ ಯಾವುದು ಬೇಕು ನೀನೇ ಡಿಸೈಡ್ ಮಾಡು'' ಅಂತ ಲಾಸ್ಯಗೆ ಕಿವಿ ಮಾತು ಹೇಳಿದರು ಸಂಯುಕ್ತ.
ಸಂಯುಕ್ತ ಮಾತುಗಳಿಗೆ ಕಿವಿಕೊಟ್ಟ ಲಾಸ್ಯಗೆ ''ಈಗ ಬಂದರೂ ಎಷ್ಟು ಚೆನ್ನಾಗಿ ಮಾಡ್ತಾರೆ'' ಅಂತ ಜನ ಮಾತನಾಡುವ ಹಾಗೆ ಪರ್ಫಾಮ್ ಮಾಡಬೇಕು'' ಎಂಬ ಹುಮ್ಮಸ್ಸು ಬಂದಿದೆ.


Click it and Unblock the Notifications











