Don't Miss!
- News ಒಂದಲ್ಲ..ಎರಡಲ್ಲ ಹಿರಿಯೂರಿನಲ್ಲಿ ಬರೋಬ್ಬರಿ ಐದು ಕೆ.ಜಿ ಚಿನ್ನ ವಶ: ಹೆಚ್ಚಿನ ವಿವರ ಇಲ್ಲಿದೆ
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- Lifestyle ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರಂತೆ 'ಬೊಂಬೆ' ನಿವೇದಿತಾ.!
Recommended Video
'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರಿಗೂ 'ಬೊಂಬೆ' ನಿವೇದಿತಾ ಗೌಡ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರಂತೆ. ಹಾಗಂತ ಕಾಮೆಂಟ್ ಮಾಡಿದವರು ಬೇರಾರೂ ಅಲ್ಲ, 'ಕಿರಿಕ್' ಬೆಡಗಿ ಸಂಯುಕ್ತ ಹೆಗ್ಡೆ.
'ಬಿಗ್ ಬಾಸ್' ಮನೆಯೊಳಗೆ 'ವೈಲ್ಡ್ ಕಾರ್ಡ್ ಎಂಟ್ರಿ' ರೂಪದಲ್ಲಿ ಕಾಲಿಡುತ್ತಿದ್ದಂತೆಯೇ, ಎಲ್ಲರ ಬಗ್ಗೆ ನಟಿ ಸಂಯುಕ್ತ ಹೆಗ್ಡೆ ಕಾಮೆಂಟ್ ಮಾಡಲು ಶುರು ಮಾಡಿದರು.
ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ ಗೌಡ ಬಗ್ಗೆ ನಟಿ ಸಂಯುಕ್ತ ಹೆಗ್ಡೆ ಆಡಿದ ಮಾತುಗಳಿವು - ''ನನಗಿಂತ ನಿವೇದಿತಾ ಗೌಡ ದೊಡ್ಡವಳು. ನೀವೆಲ್ಲ (ಇತರೆ ಸ್ಪರ್ಧಿಗಳು) ಅವಳನ್ನ 'ಬೇಬಿ' ಮಾಡಿದ್ದೀರಾ. ಆದ್ರೆ, ಆಕೆ smartest. ನಿಮ್ಮೆಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿಕೊಂಡು ಇಲ್ಲಿಯವರೆಗೂ ಬಂದಿದ್ದಾಳೆ''
''ನಿಮ್ಮ (ನಿವೇದಿತಾ) ಮುಗ್ದತೆಯನ್ನ ಈ ಶೋನಲ್ಲಿ ತುಂಬಾ ಚೆನ್ನಾಗಿ ಬಳಸಿಕೊಂಡಿದ್ದೀರಾ. ತುಂಬಾ ಚೆನ್ನಾಗಿ ಆಡುತ್ತಿದ್ದೀರಾ. ಆಶಿತಾನ ಮನೆಗೆ ಕಳುಹಿಸಿಬಿಟ್ರಿ. ನೀವು ಉಳಿದುಕೊಂಡ್ರಿ. ಎಲ್ಲರೂ ನಿಮ್ಮನ್ನ ತಲೆ ಮೇಲೆ ಕೂರಿಸಿಕೊಂಡಿರುವುದಕ್ಕೆ ಏನಾಗುತ್ತಿದೆ ಅಂತ ಗೊತ್ತಾಗುತ್ತಿದೆ'' ಎಂದು ನಿವೇದಿತಾ ಆಟದ ವೈಖರಿ ಬಗ್ಗೆ ಸಂಯುಕ್ತ ಲೇವಡಿ ಮಾಡಿದರು.
''ಬಟ್ಟೆ ಬಗ್ಗೆ ಬೇರೆಯವರು ಕಾಮೆಂಟ್ ಮಾಡಿದಾಗ ನೀವು ಪ್ರತಿಕ್ರಿಯೆ ಕೊಟ್ಟ ರೀತಿ ತುಂಬಾ ಚೆನ್ನಾಗಿತ್ತು. ಪರಿಸ್ಥಿತಿಯನ್ನ ತುಂಬಾ ಚೆನ್ನಾಗಿ ನಿಭಾಯಿಸುತ್ತೀರಾ. 59 ದಿನಗಳಲ್ಲಿ ನಿಮ್ಮನ್ನ ನೀವು ಕ್ಯಾರಿ ಮಾಡಿರುವ ರೀತಿ ತುಂಬಾ ಚೆನ್ನಾಗಿದೆ'' ಎಂದು ನಿವೇದಿತಾ ರನ್ನ ಸಂಯುಕ್ತ ಹೊಗಳಿದರು.