'ಬಿಗ್' ಮನೆಯೊಳಗೆ 'ಕಿರಿಕ್' ಹುಡುಗಿ ಸಂಯುಕ್ತ ಮಾಡಿದ 'ಕಿರಿಕ್'ಗಳು ಒಂದೆರಡಲ್ಲ.!

By Harshitha

Recommended Video

ಬಿಗ್' ಮನೆಯೊಳಗೆ ಸಂಯುಕ್ತ ಮಾಡಿದ 'ಕಿರಿಕ್'ಗಳು ಒಂದೆರಡಲ್ಲ | Filmibeat Kannada

''ನಾನು ವೈಲ್ಡ್ ಕಾರ್ಡ್ ಸ್ಪರ್ಧಿ'' ಅಂತಲೇ ಬಿಲ್ಡಪ್ ತೆಗೆದುಕೊಂಡು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ನಟಿ ಸಂಯುಕ್ತ ಹೆಗ್ಡೆ ಅದಾಗಲೇ 'ಕಿರಿಕ್' ಶುರು ಮಾಡಿದ್ದಾರೆ.

ಜಯಶ್ರೀನಿವಾಸನ್ 'ಸಂಖ್ಯಾಶಾಸ್ತ್ರಕ್ಕೆ ದೊಡ್ಡ ನಮಸ್ಕಾರ' ಹಾಕಿರುವ ಸಂಯುಕ್ತ ಹೆಗ್ಡೆ, ಸಮೀರಾಚಾರ್ಯ ಗೆ 'ಡೀಮ್ಡ್ ಸ್ವಾಮೀಜಿ' ಅಂತ ಪಟ್ಟ ಕೊಟ್ಟಿದ್ದಾರೆ.

'ಚಳ್ಳೆಹಣ್ಣು' ತಿನ್ನಿಸುತ್ತಿರುವ ನಿವೇದಿತಾ ಹಾಗೂ 'ಜಗಳಗಂಟ' ಜಗನ್ ಗೆ ಬಿಸಿ ಮುಟ್ಟಿಸಿರುವ ಸಂಯುಕ್ತ ರವರ 'ಬಿಗ್ ಬಾಸ್' ಮನೆಯೊಳಗಿನ 'ಕಿರಿಕ್'ಗಳ ಸಂಪೂರ್ಣ ವಿವರ ಇಲ್ಲಿದೆ. ಓದಿರಿ....

ಜಯಶ್ರೀನಿವಾಸನ್ ಗೆ ದೊಡ್ಡ ನಮಸ್ಕಾರ

ಜಯಶ್ರೀನಿವಾಸನ್ ಗೆ ದೊಡ್ಡ ನಮಸ್ಕಾರ

'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ 'ಕಿರಿಕ್' ಶುರು ಮಾಡಿಕೊಂಡ ನಟಿ ಸಂಯುಕ್ತ, ''ಸಂಖ್ಯಾಶಾಸ್ತ್ರಕ್ಕೆ ನಮಸ್ಕಾರ. ಅಷ್ಟೊಂದು ಇದ್ದಿದ್ರೆ, ಅವರ ಸಂಖ್ಯಾಶಾಸ್ತ್ರ ಅವರಿಗೆ ಮೊದಲು ವರ್ಕ್ ಆಗುತ್ತಿತ್ತು. ನನಗೆ ಅವರನ್ನ ಕಂಡ್ರೆ ಇಷ್ಟ ಇಲ್ಲ'' ಅಂತ ಜಯಶ್ರೀನಿವಾಸನ್ ಬಗ್ಗೆ ಸಂಯುಕ್ತ ಕಾಮೆಂಟ್ ಮಾಡಿದರು.

ಡೀಮ್ಡ್ ಸ್ವಾಮೀಜಿ

ಡೀಮ್ಡ್ ಸ್ವಾಮೀಜಿ

''ಸ್ವಾಮಿ ಆಗಬೇಕು ಅಂದ್ರೆ ಎಲ್ಲ ಭೋಗ, ವೈಭೋಗ ಗಳನ್ನೆಲ್ಲ ಬಿಡಬೇಕು. ಇವರು ಸ್ವಾಮಿ ಅಲ್ಲ, ಡೀಮ್ಡ್ ಯೂನಿವರ್ಸಿಟಿ ತರಹ ಇವರು ಡೀಮ್ಡ್ ಸ್ವಾಮೀಜಿ'' ಅಂತ ಹೇಳಿಕೊಂಡು ಸಮೀರಾಚಾರ್ಯ ಜೊತೆಗೂ ವಾದಕ್ಕೆ ಇಳಿದರು ನಟಿ ಸಂಯುಕ್ತ. ''ನಾನು ಸನ್ಯಾಸಿ ಅಲ್ಲ ಗೃಹಸ್ಥ'' ಅಂತ ಸಮೀರಾಚಾರ್ಯ ಹೇಳುತ್ತಿದ್ದರೂ, ಅದನ್ನ ಸಂಯುಕ್ತ ಕೇಳಿಸಿಕೊಳ್ಳಲಿಲ್ಲ.

ಚಳ್ಳೆಹಣ್ಣು ತಿನ್ನಿಸುತ್ತಿರುವ ನಿವೇದಿತಾ

ಚಳ್ಳೆಹಣ್ಣು ತಿನ್ನಿಸುತ್ತಿರುವ ನಿವೇದಿತಾ

''ನನಗಿಂತ ನಿವೇದಿತಾ ಗೌಡ ದೊಡ್ಡವಳು. ನೀವೆಲ್ಲ (ಇತರೆ ಸ್ಪರ್ಧಿಗಳು) ಅವಳನ್ನ 'ಬೇಬಿ' ಮಾಡಿದ್ದೀರಾ. ಆದ್ರೆ, ಆಕೆ smartest. ನಿಮ್ಮೆಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿಕೊಂಡು ಇಲ್ಲಿಯವರೆಗೂ ಬಂದಿದ್ದಾಳೆ. ನಿಮ್ಮ (ನಿವೇದಿತಾ) ಮುಗ್ದತೆಯನ್ನ ಈ ಶೋನಲ್ಲಿ ತುಂಬಾ ಚೆನ್ನಾಗಿ ಬಳಸಿಕೊಂಡಿದ್ದೀರಾ. ತುಂಬಾ ಚೆನ್ನಾಗಿ ಆಡುತ್ತಿದ್ದೀರಾ. ಆಶಿತಾನ ಮನೆಗೆ ಕಳುಹಿಸಿಬಿಟ್ರಿ. ನೀವು ಉಳಿದುಕೊಂಡ್ರಿ. ಎಲ್ಲರೂ ನಿಮ್ಮನ್ನ ತಲೆ ಮೇಲೆ ಕೂರಿಸಿಕೊಂಡಿರುವುದಕ್ಕೆ ಏನಾಗುತ್ತಿದೆ ಅಂತ ಗೊತ್ತಾಗುತ್ತಿದೆ'' ಎಂದು ನಿವೇದಿತಾ ಆಟದ ವೈಖರಿ ಬಗ್ಗೆ ಸಂಯುಕ್ತ ಲೇವಡಿ ಮಾಡಿದರು.

ಜಗಳಗಂಟ ಜಗನ್

ಜಗಳಗಂಟ ಜಗನ್

''ನಿಮಗೆ ದುಬೈನಲ್ಲಿ ಗರ್ಲ್ ಫ್ರೆಂಡ್ ಇದ್ದಾರೆ ಅಲ್ವಾ.?'' ಅಂತ ಸಂಯುಕ್ತ ಪ್ರಶ್ನೆ ಕೇಳಿದಾಗ ''ಹೌದು'' ಎಂದು ಜಗನ್ ಒಪ್ಪಿಕೊಂಡರು. ಆಗ, ''ಮತ್ತೆ ಆಶಿತಾ ಜೊತೆ ನಿಮ್ಮ ಕಡೆಯಿಂದ ಏನಿತ್ತು.?'' ಎಂದು ಪ್ರಶ್ನಿಸಿದರು ನಟಿ ಸಂಯುಕ್ತ. ''ನಾನು ಆಶಿತಾನ ಯಾವತ್ತೂ ಗರ್ಲ್ ಫ್ರೆಂಡ್ ತರಹ ನೋಡೇ ಇಲ್ಲ. ನಾನು ಯಾವತ್ತೂ ಆ ತರಹ ನಡೆದುಕೊಂಡಿಲ್ಲ. ನಾವು ಒಂದು ಫ್ಯಾಮಿಲಿ ತರಹ ಇದ್ವಿ'' ಎಂದು ಜಗನ್ ಉತ್ತರಿಸಿದಾಗ ಸಂಯುಕ್ತ ಪ್ರತಿಕ್ರಿಯೆ ಸಕಾರಾತ್ಮಕವಾಗಿರಲಿಲ್ಲ.

ಜಗನ್ ಕೇಳಿದ್ದೇನು.?

ಜಗನ್ ಕೇಳಿದ್ದೇನು.?

ಸಂಯುಕ್ತ ನೇರ ನುಡಿ ನೋಡಿ ''ಎಷ್ಟು ದಿನ ಇರ್ತೀರಾ ಅಂತ ಡಿಸೈಡ್ ಮಾಡಿದ್ದೀರಾ.?'' ಎಂದು ಜಗನ್ ಕೇಳಿದರು.

ತಿರುಗೇಟು ಕೊಟ್ಟ ಸಂಯುಕ್ತ

ತಿರುಗೇಟು ಕೊಟ್ಟ ಸಂಯುಕ್ತ

''ನಿಮ್ಮನ್ನ ಕಳುಹಿಸಿ ಆದ್ಮೇಲೆ ನಾನು ಮನೆಗೆ ಹೋಗೋದು ಅಂತ ಡಿಸೈಡ್ ಮಾಡಿಕೊಂಡೇ ಬಂದಿದ್ದೇನೆ'' ಎಂದು ಜಗನ್ ಗೆ ತಿರುಗೇಟು ಕೊಟ್ಟರು ಸಂಯುಕ್ತ. ಅದಕ್ಕೆ ''ಸೋ ಸ್ವೀಟ್'' ಎಂದಷ್ಟೇ ಹೇಳಿ ಜಗನ್ ಸುಮ್ಮನಾದರು. ಆಗ ''ತುಂಬಾ ಜಗಳ ಮಾಡ್ತೀರಾ. ಮಾತು ಮಾತಿಗೂ ಜಗಳ ಮಾಡ್ತೀರಾ. ಜಗಳಗಂಟ ಅಂತಾನೇ ಕಾಣಿಸಿಕೊಳ್ಳುತ್ತಿದ್ದೀರಾ'' ಎಂದು ಜಗನ್ ಬಗ್ಗೆ ಸಂಯುಕ್ತ ಕಾಮೆಂಟ್ ಮಾಡಿದರು.

ಚಂದನ್ ಶೆಟ್ಟಿಗೆ ದೊಡ್ಡ ಫ್ಯಾನ್

ಚಂದನ್ ಶೆಟ್ಟಿಗೆ ದೊಡ್ಡ ಫ್ಯಾನ್

''ನಿಮ್ಮ ದೊಡ್ಡ ಫ್ಯಾನ್ ನಾನು. ಚಂದನ್ ಮ್ಯೂಸಿಕ್ ತುಂಬಾ ಇಷ್ಟ. ಆದ್ರೆ, ತುಂಬಾ ಕನ್ನಿಂಗ್ ಅನ್ಸುತ್ತೆ. ಎಲ್ಲ ಟಾಸ್ಕ್ ನ ಹಾಳು ಮಾಡುವುದಕ್ಕೆ ನೋಡುವುದೇ ಚಂದನ್. ಕದಿಯುವುದನ್ನೆಲ್ಲ ಅವರೇ ಶುರು ಮಾಡುವುದು'' ಎಂದು ಚಂದನ್ ಶೆಟ್ಟಿ ಬಗ್ಗೆ ಸಂಯುಕ್ತ ಕಾಮೆಂಟ್ ಮಾಡಿದರು.

ಬುದ್ಧಿವಂತ ರಿಯಾಝ್

ಬುದ್ಧಿವಂತ ರಿಯಾಝ್

''ತುಂಬಾ ಬುದ್ಧಿವಂತಿಕೆಯಿಂದ ಆಟ ಆಡುತ್ತಿದ್ದೀರಾ. ನನಗೆ ಇಷ್ಟ ಆಯ್ತು'' ಎಂದು ರಿಯಾಝ್ ಬಗ್ಗೆ ಸಂಯುಕ್ತ ಹೇಳಿದರು.

More from Filmibeat

English summary
Bigg Boss Kannada 5: Week 9: Samyuktha Hegde comments about BBK5 housemates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X