ಸುದೀಪ್ ಕೊಟ್ಟ ಒಂದೇ ಚಮಕ್ ಗೆ ಗೊಳೋ ಎಂದು ಕಣ್ಣೀರಿಟ್ಟ ನಟಿ ಸಂಯುಕ್ತ.!

By Harshitha

Recommended Video

ಬಿಗ್ ಬಾಸ್ ಕನ್ನಡ ಸೀಸನ್ 5 : ಸುದೀಪ್ ಎದುರು ಗೊಳೋ ಅಂದು ಅತ್ತ ಸಂಯುಕ್ತ ಹೆಗ್ಡೆ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ನಟಿ ಸಂಯುಕ್ತ ಎಂಟ್ರಿ ಕೊಟ್ಟು ಒಂದು ವಾರ ಕಳೆದಿದೆ ಅಷ್ಟೆ. ಅಷ್ಟು ಬೇಗ, 'ಬಿಗ್ ಬಾಸ್' ಮನೆಯಲ್ಲಿ ಕಿರಿಕ್ ಮೇಲೆ ಕಿರಿಕ್ ಮಾಡಿಕೊಂಡಿರುವ 'ಕು'ಖ್ಯಾತಿ ಸಂಯುಕ್ತ ಹೆಗ್ಡೆ ರವರದ್ದು.

'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, ಎಲ್ಲರ ಬಗ್ಗೆ ಕಾಮೆಂಟ್ ಮಾಡಿದ ಸಂಯುಕ್ತ ವಾದ-ವಿವಾದ-ವಾಕ್ಸಮರಕ್ಕೆ ನಾಂದಿ ಹಾಡಿದರು. ಬರೀ ಸ್ಪರ್ಧಿಗಳ ಮುಂದೆ ಮಾತ್ರ ಅಲ್ಲ. ಕಿಚ್ಚ ಸುದೀಪ್ ಎದುರಿಗೂ ವಾದಕ್ಕೆ ಇಳಿದ ನಟಿ ಸಂಯುಕ್ತ, ಅದೇ ಸುದೀಪ್ ಎದುರಿಗೆ ಗೊಳೋ ಎಂದು ಕಣ್ಣೀರಿಟ್ಟರು. ಅದು ಕಿಚ್ಚ ಕೊಟ್ಟ ಒಂದೇ ಒಂದು ಚಮಕ್ ಗೆ.!

'ತಾವು ಹೇಳಿದ್ದೇ ಸರಿ, ತಮಗೆ ಅನಿಸಿದ್ದೇ ಸರಿ' ಎಂಬಂತೆ ವಾದ ಮಾಡುವ ಸಂಯುಕ್ತ ಕಣ್ಣೀರಿಟ್ಟಿದ್ದು ಯಾಕೆ.? 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಏನಾಯ್ತು.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಓದಿರಿ....

ವಾದ ಮಾಡುವ ಸಂಯುಕ್ತ ಬಗ್ಗೆ ಸುದೀಪ್ ಹೇಳಿದ್ದೇನು.?

ವಾದ ಮಾಡುವ ಸಂಯುಕ್ತ ಬಗ್ಗೆ ಸುದೀಪ್ ಹೇಳಿದ್ದೇನು.?

'ಬಿಗ್ ಬಾಸ್' ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆಯೇ, ''ಸಂಖ್ಯಾಶಾಸ್ತ್ರದ ಬಗ್ಗೆ ನಂಬಿಕೆ ಇಲ್ಲ'' ಅಂತ ಜಯಶ್ರೀನಿವಾಸನ್ ರವರಿಗೆ ನೇರವಾಗಿ ಸಂಯುಕ್ತ ಹೇಳಿದ್ದರು. ಜೊತೆಗೆ ಸಮೀರಾಚಾರ್ಯ 'ಡೀಮ್ಡ್ ಸ್ವಾಮೀಜಿ' ಅಂತೆಲ್ಲ ಕಾಮೆಂಟ್ ಮಾಡಿದರು. ಹೀಗಾಗಿ, ''ಸಂಖ್ಯಾಶಾಸ್ತ್ರ ಅಂದ್ರೆ ವಾದ ಮಾಡುತ್ತಾರೆ, ಗುರೂಜಿ ಅಂದ್ರೆ ವಾದ ಮಾಡುತ್ತಾರೆ'' ಎಂದು ಸಂಯುಕ್ತ ಬಗ್ಗೆ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಹೇಳುತ್ತಿದ್ದಂತೆಯೇ...

ವಾದಕ್ಕೆ ಇಳಿದ ಸಂಯುಕ್ತ

ವಾದಕ್ಕೆ ಇಳಿದ ಸಂಯುಕ್ತ

''ಸಂಖ್ಯಾಶಾಸ್ತ್ರವನ್ನ ನಾನು ನಂಬಲ್ಲ. ನನ್ನ ಪ್ರಾಬ್ಲಂ ಏನು ಅಂದ್ರೆ, ನನಗೆ ಕುತೂಹಲ ಜಾಸ್ತಿ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ನಾನು ಸುಮ್ನೆ ಆಗ್ತೀನಿ. ಪ್ರಶ್ನೆಗಳಿಗೆ ಉತ್ತರ ಯಾರ ಬಳಿಯೂ ಇರಲ್ಲ. ಆದ್ರೆ, ವಿವರಣೆ ಮಾತ್ರ ಕೊಡ್ತಾರೆ'' ಎಂದು ಸುದೀಪ್ ಜೊತೆ ವಾದಕ್ಕೆ ಇಳಿದರು ನಟಿ ಸಂಯುಕ್ತ.

ಸಂಯುಕ್ತಗೆ ಬುದ್ದಿಮಾತು ಹೇಳಿದ ಸುದೀಪ್

ಸಂಯುಕ್ತಗೆ ಬುದ್ದಿಮಾತು ಹೇಳಿದ ಸುದೀಪ್

''ನಿಮ್ಮ ನಿರೀಕ್ಷೆಗೆ ತಕ್ಕಂತೆ ಉತ್ತರ ಬಂದ್ರೆ, ನಿಮಗೆ ಖುಷಿ'' ಎಂದು ಸುದೀಪ್ ಕಾಮೆಂಟ್ ಮಾಡಿದ್ದಕ್ಕೆ ''ಇಲ್ಲ'' ಎಂದರು ಸಂಯುಕ್ತ. ಅದನ್ನ ಒಪ್ಪಿಕೊಳ್ಳದ ಸುದೀಪ್, ''ಹೌದು. ಉತ್ತರ ಅವರವರಿಗೆ ಬಿಟ್ಟು ಬಿಡಿ. ನಿರ್ಧಾರ ಮನಸ್ಸಿನಲ್ಲಿ ಮಾಡಿಕೊಳ್ಳಿ. ಆದ್ರೆ, ಆ ನಿರ್ಧಾರ ಮತ್ತೆ ನಾಲಿಗೆ ಮೂಲಕ ನಿಮ್ಮಿಂದ ಹೊರಗೆ ಬರುತ್ತದೆ. ನಿಮ್ಮ ಜೀವನ ಇನ್ನೂ ದೊಡ್ಡದಿದೆ. ಪ್ರಪಂಚ ಇಲ್ಲದೆ ನಾವ್ಯಾರೂ ಬದುಕಲು ಆಗಲ್ಲ. ನಮ್ಮ ಪ್ರಪಂಚದಲ್ಲಿ ಯಾರು ಇರಬೇಕು ಅಂತ ನಾವು ಡಿಸೈಡ್ ಮಾಡೋಣ'' ಎಂದು ಸಂಯುಕ್ತಗೆ ಬುದ್ಧಿಮಾತು ಹೇಳಿದರು ಸುದೀಪ್.

ಯಾರಿಗೂ ಅರ್ಹತೆ ಇಲ್ಲ

ಯಾರಿಗೂ ಅರ್ಹತೆ ಇಲ್ಲ

''ಯಾರ ವೃತ್ತಿ ಬಗ್ಗೆ ಕಾಮೆಂಟ್ ಮಾಡುವ ಅರ್ಹತೆ, ಯೋಗ್ಯತೆ ಯಾರಿಗೂ ಇಲ್ಲ'' ಎಂದು ಇದೇ ವೇಳೆ ಎಲ್ಲರಿಗೂ ಎಚ್ಚರಿಸಿದರು ಸುದೀಪ್.

ಚಳ್ಳೆಹಣ್ಣು ತಿನ್ನಿಸುವುದು ಹೇಗೆ.?

ಚಳ್ಳೆಹಣ್ಣು ತಿನ್ನಿಸುವುದು ಹೇಗೆ.?

ಇನ್ನೂ ''ನಿವೇದಿತಾ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ'' ಅಂತ ಸಂಯುಕ್ತ ಆಡಿದ ಮಾತಿನ ಬಗ್ಗೆ ಸುದೀಪ್ ಪ್ರಶ್ನಿಸಿದಾಗ ನಿವೇದಿತಾ ಕೊಟ್ಟ ಪ್ರತಿಕ್ರಿಯೆ ಇಷ್ಟು - ''ನಾನು ಇರುವುದೇ ಹೀಗೆ... ಚಳ್ಳೆಹಣ್ಣು ತಿನ್ನಿಸುವುದು ಹೇಗೆ ಅನ್ನೋದೇ ನನಗೆ ಗೊತ್ತಿಲ್ಲ. ಅದರ ಬಗ್ಗೆ ಐಡಿಯಾ ಕೂಡ ಇಲ್ಲ. ಹೊರಗಡೆ ಕೂಡ ನಾನು ಇರುವುದು ಹೀಗೆ. ಎಲ್ಲರ ಜೊತೆ ಖುಷಿ ಖುಷಿಯಾಗಿ ಇರುತ್ತೇನೆ. ಸಂಯುಕ್ತಗೆ ಹಾಗೆ ಅನ್ನಿಸಿದ್ರೆ, ಅದು ಅವರ ಅಭಿಪ್ರಾಯ. ಅದಕ್ಕೆ ನಾನು ಏನೂ ಹೇಳುವುದಿಲ್ಲ''

ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಸಂಯುಕ್ತ

ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಸಂಯುಕ್ತ

''ಆಶಿತಾ ರನ್ನ ನಿವೇದಿತಾ ಹೊರಗೆ ಕಳುಹಿಸಿದರು'' ಎಂಬ ಮಾತು ಕೂಡ ಸಂಯುಕ್ತ ಬಾಯಿಂದ ಬಂದಿತ್ತು. ಆ ಮಾತು ಯಾಕೆ ಬಂತು ಅಂತ ಕೇಳಿದಾಗ, ಸಂಯುಕ್ತ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ರೀತಿ ಉತ್ತರ ಕೊಟ್ಟರು.

ಏನೋ ಕೇಳಿದರೆ, ಹೇಳಿದ್ದು ಬೇರೇನೋ.!

ಏನೋ ಕೇಳಿದರೆ, ಹೇಳಿದ್ದು ಬೇರೇನೋ.!

ಏನೋ ಕೇಳಿದರೆ, ಬೇರೇನೋ ಹೇಳುತ್ತ ಸಂಯುಕ್ತ ದೀರ್ಘ ಉತ್ತರ ನೀಡುತ್ತಿದ್ದಾಗ, ಸುದೀಪ್ ಗೆ ಸೆಕೆ ಆಯ್ತು, ಧರಿಸಿದ್ದ ಕೋಟ್ ಬಿಚ್ಚಿದರು. ಸಾಲದಕ್ಕೆ ಫ್ಯಾನ್ ಹಾಕಲು ಸೂಚಿಸಿದರು. ಆಗ ಎಲ್ಲ ಸ್ಪರ್ಧಿಗಳು ನಕ್ಕರು. ಆಗ ಇರುಸುಮುರುಸಾಗಿ ಸಂಯುಕ್ತ ಕಣ್ಣೀರಿಟ್ಟರು.

ಅದಕ್ಕೂ ಇದ್ದಕ್ಕೂ ಸಂಬಂಧ ಇಲ್ಲ.!

ಅದಕ್ಕೂ ಇದ್ದಕ್ಕೂ ಸಂಬಂಧ ಇಲ್ಲ.!

ನಿಜವಾಗಲೂ ಸೆಕೆ ಆಗಿದ್ದಕ್ಕೆ ಕೋಟ್ ಬಿಚ್ಚಿದೆ ಹೊರತು, ಬೇರೆ ಯಾವ ಕಾರಣಕ್ಕೂ ಅಲ್ಲ ಎಂದು ಸುದೀಪ್ ಸ್ಪಷ್ಟ ಪಡಿಸಿದರು. ಅದೇನೇಯಿದ್ದರೂ, ಸುದೀಪ್ ಕೊಟ್ಟ ಒಂದು ಚಮಕ್ ಗೆ ಸಂಯುಕ್ತ ಶೇಕ್ ಆಗಿದ್ದು ಮಾತ್ರ ಸುಳ್ಳಲ್ಲ.

More from Filmibeat

English summary
Bigg Boss Kannada 5: Week 9: Samyuktha Hegde starts crying in front of Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X