ಅಂತೂ ಸಂಯುಕ್ತ ಆಡಿದ ಮಾತು ನಿಜ ಆಗ್ಹೋಯ್ತು: ಜಗನ್ ಮನೆಗೆ ಹೋದ್ರು.!

By Harshitha

ಬೇಕು ಅಂತ ಸಂಯುಕ್ತ ಹಾಗೆ ಮಾತನಾಡಿದ್ರೋ.. ಅಥವಾ, ಬಾಯಿ ತಪ್ಪಿ ಹಾಗೆ ಹೇಳಿಬಿಟ್ರೋ.. ಇಲ್ಲ, ತಿರುಗೇಟು ನೀಡುವ ಸಲುವಾಗಿ ತಮಾಷೆಯಿಂದ ಕಾಮೆಂಟ್ ಮಾಡಿದ್ರೋ.. ಗೊತ್ತಿಲ್ಲ.! ಒಟ್ನಲ್ಲಿ, ಜಗನ್ ಬಗ್ಗೆ ನಟಿ ಸಂಯುಕ್ತ ಹೇಳಿದ ಮಾತು ನಿಜವಾಗಿದೆ.

''ನಿಮ್ಮನ್ನ ಮನೆಗೆ ಕಳುಹಿಸಿದ ಬಳಿಕವೇ ನಾನು ಹೊರಗೆ ಹೋಗುವುದು'' ಅಂತ ನಟಿ ಸಂಯುಕ್ತ ನಾಲ್ಕೈದು ದಿನಗಳ ಹಿಂದೆಯಷ್ಟೇ ಜಗನ್ ಬಳಿ ಹೇಳಿದ್ದರು.

''ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಒಂದೇ ಆಯ್ತು'' ಎಂಬಂತೆ ನಟಿ ಸಂಯುಕ್ತ ಹೇಳಿದ ಹಾಗೆ, ಜಗನ್ ಮನೆ ಕಡೆ ಮುಖ ಮಾಡಿದ್ದಾರೆ. ನಟಿ ಸಂಯುಕ್ತ ಇನ್ನೂ 'ಬಿಗ್ ಬಾಸ್' ಮನೆಯೊಳಗೆ ಇರುವಾಗಲೇ, ಜಗನ್ ಎಲಿಮಿನೇಟ್ ಆಗಿದ್ದಾರೆ. ಮುಂದೆ ಓದಿರಿ...

'ಬಿಗ್ ಬಾಸ್' ಮನೆಯಲ್ಲಿ 'ಕಿರಿಕ್' ಹುಡುಗಿ

'ಬಿಗ್ ಬಾಸ್' ಮನೆಯಲ್ಲಿ 'ಕಿರಿಕ್' ಹುಡುಗಿ

'ಬಿಗ್ ಬಾಸ್' ಮನೆಯೊಳಗೆ ನಟಿ ಸಂಯುಕ್ತ ಹೆಗ್ಡೆ ಕಾಲಿಟ್ಟ ಕೂಡಲೆ ಎಲ್ಲರ ಬಗ್ಗೆ ಕಾಮೆಂಟ್ ಮಾಡಲು ಶುರು ಮಾಡಿದರು. ಜಗನ್ ಹಾಗೂ ಆಶಿತಾ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಸಂಯುಕ್ತ, ''ನಿಮ್ಮನ್ನ ಕಳುಹಿಸಿ ಆದ್ಮೇಲೆ ನಾನು ಮನೆಗೆ ಹೋಗುವುದು ಅಂತ ಡಿಸೈಡ್ ಮಾಡಿಕೊಂಡೇ ಬಂದಿದ್ದೇನೆ'' ಎಂದು ಜಗನ್ ಗೆ ಹೇಳಿದ್ದರು.

ಸಂಯುಕ್ತ ಮಾತು ನಿಜವಾಗಿದೆ.!

ಸಂಯುಕ್ತ ಮಾತು ನಿಜವಾಗಿದೆ.!

ಸಂಯುಕ್ತ ಆಡಿದ ಮಾತಿನಂತೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಒಂಬತ್ತನೇ ವಾರ ನಟ ಜಗನ್ನಾಥ್ ಎಲಿಮಿನೇಟ್ ಆದರು.

ಸುದೀಪ್ ಹೇಳಿದ್ದೇನು.?

ಸುದೀಪ್ ಹೇಳಿದ್ದೇನು.?

ಜಗನ್ ಎಲಿಮಿನೇಟ್ ಆಗಿದ್ದಾರೆ ಅಂತ ಘೋಷಿಸಿದ್ಮೇಲೆ, ಸಂಯುಕ್ತ ಗೆ ನಟ ಸುದೀಪ್ ಹೇಳಿದಿಷ್ಟು - ''ತಮಾಷೆಗೆ ಒಂದು ಮಾತು ಹೇಳಿದ್ರಿ, ನಿಮ್ಮನ್ನ ಕಳುಹಿಸಿದ ಮೇಲೆ ನಾನು ಹೊರಗೆ ಹೋಗುವುದು ಅಂತ. ಭಗವಂತ ಅಸ್ತು ಅಂದನೇನೋ ಗೊತ್ತಿಲ್ಲ. ಈ ಮಾತು ಯಾಕೆ ನೆನಪಿಸಿದೆ ಅಂದ್ರೆ, ಕೆಲವೊಮ್ಮೆ ನಾವು ಆಡಿದ ಮಾತುಗಳು ನಿಜ ಆದರೆ ಮನಸ್ಸಿಗೆ ಭಾರಿ ಬೇಸರ ಆಗುತ್ತೆ. ಜಗನ್ ಹೋಗುವುದೇ ಇಲ್ಲ ಎಂಬ ಕಾರಣಕ್ಕೆ ನೀವು ಹೇಳಿರಬಹುದು ನನಗೆ ಗೊತ್ತಿದೆ''

ಕ್ಷಮೆ ಕೇಳಿದ ಸಂಯುಕ್ತ

ಕ್ಷಮೆ ಕೇಳಿದ ಸಂಯುಕ್ತ

ಜಗನ್ ಔಟ್ ಆದ್ಮೇಲೆ, ''ಸಾರಿ ಜಗನ್, ನಾನು ತಮಾಷೆ ಮಾಡಿದ್ದು'' ಎಂದರು ನಟಿ ಸಂಯುಕ್ತ. ಸಂಯುಕ್ತ ಮಾಡಿದ ತಮಾಷೆ, ಜಗನ್ ಪಾಲಿಗೆ ಅಮಾವಾಸ್ಯೆ ಆಯ್ತೇನೋ.!

More from Filmibeat

English summary
Bigg Boss Kannada 5: Week 9: What Samyuktha Hegde told about Jaganath turns out to be true. Jaganath has been eliminated from Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X