'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮ ಶುರುವಿಗೆ ದಿನಾಂಕ ನಿಗದಿ!
Recommended Video

'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮಕ್ಕೆ ದಿನ ಗಣನೆ ಶುರುವಾಗಿದೆ. ಈ ಬಾರಿಗೆ ಕಾರ್ಯಕ್ರಮಕ್ಕೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಆಗಲಿದೆ.
'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ. ಕಳೆದ ನಾಲ್ಕು ಸೀಸನ್ ಗಳಿಗಿಂತ ಈ ಬಾರಿಯ 'ಬಿಗ್ ಬಾಸ್' ಸೀಸನ್ ನಲ್ಲಿ ಸ್ವಲ್ಪ ಭಿನ್ನತೆ ಇರಲಿದೆ. ನಟ ಸುದೀಪ್ ಅವರೇ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್ ನಲ್ಲಿ ಹೊಸ ಆವೃತ್ತಿಯ ಬಿಗ್ ಬಾಸ್ ಶುರುವಾಗಲಿದ್ದು, 'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮ ಸಿಕ್ಕಾಪಟ್ಟೆ ವಿಶೇಷತೆಗಳನ್ನು ಹೊಂದಿದೆ. ಮುಂದಿದೆ ಓದಿ...

ಅಕ್ಟೋಬರ್ 15ಕ್ಕೆ ಶುರು
'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮ ಅಕ್ಟೋಬರ್ 15ಕ್ಕೆ ಪ್ರಾರಂಭವಾಗಲಿದ್ದು, ಅಕ್ಟೋಬರ್ 16 ರಿಂದ 'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳ ರಿಯಲ್ ಆಟ ಶುರುವಾಗುತ್ತದೆ.

ಫಿಪ್ಟಿ - ಫಿಪ್ಟಿ
ಈ ಬಾರಿಯ 'ಬಿಗ್ ಬಾಸ್' ನಲ್ಲಿ ಫಿಪ್ಟಿ-ಫಿಪ್ಟಿ ನಿಯಮವನ್ನು ಜಾರಿಗೆ ತಂದಿದ್ದಾರೆ. ಅಂದರೆ 'ಬಿಗ್ ಬಾಸ್' ಸ್ಪರ್ಧಿಗಳ ಪೈಕಿ ಅರ್ಧದಷ್ಟು ಸೆಲೆಬ್ರಿಟಿಗಳು ಇದ್ದರೆ, ಇನ್ನು ಅರ್ಧ ಭಾಗ ಸಾಮಾನ್ಯ ಜನರು ಇರಲಿದ್ದಾರೆ.

ಇನ್ನು 23 ದಿನ ಬಾಕಿ ಇದೆ
ಹೊಸ ಆವೃತ್ತಿಯ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಬರಿ 23 ದಿನಗಳು ಬಾಕಿ ಇದ್ದು, ಸದ್ಯ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತಿದೆ.

ಎರಡನೇ ಪ್ರೋಮೋ
'ಬಿಗ್ ಬಾಸ್' ಕಾರ್ಯಕ್ರಮ ಎರಡನೇ ಪ್ರೋಮೋ ಇದೀಗ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಕಾರ್ಯಕ್ರಮ ಪ್ರಾರಂಭವಾಗುವ ದಿನಾಂಕವನ್ನು ಬಹಿರಂಗ ಪಡಿಸಲಾಗಿದೆ. ಇದೇ ಅಕ್ಟೋಬರ್ 15 ರಿಂದ ಸಂಜೆ 8 ಗಂಟೆಗೆ 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಆಗಲಿದೆ.


Click it and Unblock the Notifications











