ದಿವಾಕರ್ ಗೆ ದುಡ್ಡು ಕೊಡ್ಬೇಕಿತ್ತು ಅಂತ ಹೇಳಿದವ್ರಿಗೆ ಚಂದನ್ ಶೆಟ್ಟಿ ಕೊಟ್ಟ ಉತ್ತರ ಇದು.!
Recommended Video

''ನೀನ್ ಗೆಲ್ಲಬೇಕು. ಬರುವ ಬಹುಮಾನ ಹಣವನ್ನ ನಾನು ನನ್ನ ಜೀವನದಲ್ಲಿ ಹೇಗೋ ದುಡಿಯುತ್ತೇನೆ. ಆದ್ರೆ ನೀನ್ ಗೆಲ್ಲಬೇಕು'' ಅಂತ 'ಬಿಗ್ ಬಾಸ್' ಮನೆಯೊಳಗೆ ದಿವಾಕರ್ ಗೆ ಚಂದನ್ ಶೆಟ್ಟಿ ಹೇಳ್ತಿದ್ರು. ಹಾಗೇ, ಹಣದ ಬಗ್ಗೆ ವ್ಯಾಮೋಹ ಇಲ್ಲ ಎಂದಿದ್ದರು ಚಂದನ್ ಶೆಟ್ಟಿ.
ಆದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ದಿವಾಕರ್ ಗೆಲ್ಲಲಿಲ್ಲ. ಬದಲಾಗಿ ರನ್ನರ್ ಅಪ್ ಆದರು. ಚಂದನ್ ಶೆಟ್ಟಿ ಗೆಲುವಿನ ನಗೆ ಬೀರಿದರು. ಅವರಿಗೆ ಐವತ್ತು ಲಕ್ಷ ರೂಪಾಯಿ ಬಹುಮಾನ ಲಭಿಸಿತು.
''ಬಂದ ಅರ್ಧ ಕೋಟಿ ರೂಪಾಯಿಯಲ್ಲಿ ಸ್ವಲ್ಪ ಹಣವನ್ನ ದಿವಾಕರ್ ಗೆ ಚಂದನ್ ಶೆಟ್ಟಿ ಕೊಡಬಹುದಿತ್ತು'' ಎಂದು ವೀಕ್ಷಕರು ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೇ ವಿಚಾರದ ಕುರಿತಾಗಿ ಚಂದನ್ ಶೆಟ್ಟಿ ಏನಂತ ಸ್ಪಷ್ಟನೆ ಕೊಟ್ಟಿದ್ದಾರೆ ಗೊತ್ತಾ.? ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಚಂದನ್ ಶೆಟ್ಟಿ ಕೊಟ್ಟಿರುವ ಸ್ಪಷ್ಟನೆ ಏನು.
''ಐವತ್ತು ಲಕ್ಷ ಬಹುಮಾನ ಹಣದಲ್ಲೇ ದಿವಾಕರ್ ಗೆ ಸಹಾಯ ಮಾಡಬೇಕು ಅಂತ ಏನಿಲ್ಲ. ಜೀವನದಲ್ಲಿ ದಿವಾಕರ್ ಗೆ ನಾನು ಕೊಡಬೇಕಾಗಿರುವುದು ತುಂಬಾ ಇದೆ. ಬೇರೆ ಬೇರೆ ತರಹ ಕೂಡ ನಾನು ದಿವಾಕರ್ ನ ಸಪೋರ್ಟ್ ಮಾಡ್ತೀನಿ'' ಎಂದು ಸಂದರ್ಶನವೊಂದರಲ್ಲಿ ಚಂದನ್ ಶೆಟ್ಟಿ ಹೇಳಿದ್ದಾರೆ.

ದಿವಾಕರ್ ಸಿನಿಮಾಗೆ ಮ್ಯೂಸಿಕ್ ಮಾಡುವೆ
''ದಿವಾಕರ್ ಹೀರೋ ಆಗಿ ಆಕ್ಟ್ ಮಾಡುವ ಸಿನಿಮಾಗೆ ನಾನು ಮ್ಯೂಸಿಕ್ ಮಾಡಿ ಕೊಡ್ತೀನಿ ಅಂತ ಮಾತು ಕೊಟ್ಟಿದ್ದೇನೆ'' ಎಂದಿದ್ದಾರೆ ಚಂದನ್ ಶೆಟ್ಟಿ

ಕಥೆ ರೆಡಿ ಆಗಿದೆ
''ದಿವಾಕರ್ ಗಾಗಿ ನಾನು ಒಂದು ಕಥೆ ರೆಡಿ ಮಾಡಿದ್ದೇನೆ. 'ದಿವಾಕರ್, ದಿ ಸೇಲ್ಸ್ ಮ್ಯಾನ್' ಅಂತ ಟೈಟಲ್ ಕೊಡ ಇಟ್ಟಿದ್ದೇನೆ'' - ಚಂದನ್ ಶೆಟ್ಟಿ.

ಮುಂದಿನ ಹಾಡು ಯಾವುದು.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಗೆದ್ದಿರುವ ಹಣವನ್ನ ತಮ್ಮ ತಂದೆಗೆ ನೀಡಿರುವ ಚಂದನ್ ಶೆಟ್ಟಿ, ಮುಂದೆ 'ಫೈಯರ್' ಅಂತ ಹಾಡು ಮಾಡ್ತಾರಂತೆ.


Click it and Unblock the Notifications











