ಚಂದನ್ ಶೆಟ್ಟಿ ಗೆಲುವಿಗೆ ಇದ್ಯಾ ಲಕ್ಕಿ ನಂಬರ್ ನಂಟು.? ಹೀಗೊಂದು ಡೌಟು.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿಜೇತರಾಗಿ ಚಂದನ್ ಶೆಟ್ಟಿ ಹೊರಹೊಮ್ಮಿದ್ದಾರೆ. 106 ದಿನಗಳ ಕಾಲ 'ಬಿಗ್ ಬಾಸ್' ಎಂಬ ಚಿನ್ನದ ಪಂಜರದೊಳಗೆ ಬಂಧಿಯಾಗಿ, ಪ್ರತಿಯೊಂದು ಚಟುವಟಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿ, ಎಲ್ಲರಿಗೂ ಮನರಂಜನೆ ನೀಡಿದ ಚಂದನ್ ಶೆಟ್ಟಿ 'ಬಿಗ್ ಬಾಸ್ ಕನ್ನಡ-5' ವಿನ್ನರ್ ಪಟ್ಟಕ್ಕೆ ಅರ್ಹ ವ್ಯಕ್ತಿ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಗೆಲ್ಲಲು ಹಲವಾರು ಕಾರಣಗಳಿವೆ. ಅದಾಗಲೇ ಕನ್ನಡ rap ಸಾಂಗ್ ಗಳ ಮೂಲಕ ಅಭಿಮಾನಿಗಳ ಬಳಗ ಹೊಂದಿದ್ದ ಚಂದನ್ ಶೆಟ್ಟಿಗೆ 'ಬಿಗ್ ಬಾಸ್' ಮನೆಯೊಳಗೆ ಹೋದ್ಮೇಲೆ ಅವರ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟು ಆಯ್ತು.
ಅಕ್ಕ-ಪಕ್ಕದಲ್ಲೇ ಇದ್ದ ಸ್ಪರ್ಧಿಗಳ ಮೇಲೆ ಹಾಡು ಸಂಯೋಜಿಸಿದ ಚಂದನ್ ಶೆಟ್ಟಿ ಪ್ರತಿಭೆಗೆ ವೀಕ್ಷಕರು ಮಾರು ಹೋದರು. ಯಾರೊಂದಿಗೂ ಕಿತ್ತಾಡದೆ, ಡಬಲ್ ಗೇಮ್ ಆಡದ ಚಂದನ್ ಶೆಟ್ಟಿ ಕಂಡ್ರೆ ಜನರಿಗೆ ಪ್ರೀತಿ ಹೆಚ್ಚಾಯ್ತು.
ಈ ಎಲ್ಲ ಕಾರಣಗಳಿಂದ ಚಂದನ್ ಶೆಟ್ಟಿಗೆ ಮತ ಹಾಕುವವರ ಸಂಖ್ಯೆ ಜಾಸ್ತಿ ಆಯ್ತು. ಇವೆಲ್ಲದರ ಮಧ್ಯೆ ಲಕ್ಕಿ ನಂಬರ್ ಕೂಡ ಚಂದನ್ ಶೆಟ್ಟಿ ಕನಸು ನನಸಾಗಲು ಕಾರಣ ಆಗಿರಬಹುದಾ ಎಂಬ ಡೌಟ್ ಸದ್ಯ ಕೆಲವರಲ್ಲಿ ಕಾಡುತ್ತಿದೆ. ಏನಿದು ಲಕ್ಕಿ ನಂಬರ್ ಗುಟ್ಟು.? ಇಲ್ಲಿದೆ ನೋಡಿ...

ಚಂದನ್ ಶೆಟ್ಟಿ ಲಕ್ಕಿ ನಂಬರ್ 14
ಚಂದನ್ ಶೆಟ್ಟಿ ಅವರ ಲಕ್ಕಿ ನಂಬರ್ 14. ಇದನ್ನ ಸ್ವತಃ ಚಂದನ್ ಶೆಟ್ಟಿ ಹೇಳಿಕೊಂಡಿದ್ದರು.

ಹದಿನಾಲ್ಕನೇ ಸ್ಪರ್ಧಿ.!
'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿ ಕಾಲಿಟ್ಟಿದ್ದು ಹದಿನಾಲ್ಕನೇ ಸ್ಪರ್ಧಿಯಾಗಿ ಅನ್ನೋದು ನಿಮಗೆ ಗೊತ್ತಾ.?

ಅವತ್ತು ಹದಿನಾಲ್ಕನೇ ತಾರೀಖು.!
'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳ ಎಂಟ್ರಿಯಾಗಿದ್ದು (ಶೂಟಿಂಗ್ ನಡೆದಿದ್ದು) ಅಕ್ಟೋಬರ್ 14 ರಂದು ಎಂಬುದು ಮತ್ತೊಂದು ವಿಶೇಷ.!

ಚಂದನ್ ಟ್ಯಾಟೂ ನೋಡಿದ್ದೀರಾ.?
ರೋಮನ್ ನಂಬರ್ 'XIV' ಅರ್ಥಾತ್ 14 ಎಂದು ತಮ್ಮ ಕುತ್ತಿಗೆಯ ಕೆಳಭಾಗದಲ್ಲಿ ಚಂದನ್ ಶೆಟ್ಟಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬೇಕಾದ್ರೆ ನೀವೇ ನೋಡಿ...

ಜ್ಯೋತಿಷ್ಯ, ಸಂಖ್ಯಾಶಾಸ್ತ್ರದ ಮೇಲೆ ನಂಬಿಕೆ ಇದೆ.!
'ಬಿಗ್ ಬಾಸ್' ಮನೆಯೊಳಗೆ ಇದ್ದಾಗಲೇ, ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಮೇಲೆ ನಂಬಿಕೆ ಇರುವುದಾಗಿ ಚಂದನ್ ಶೆಟ್ಟಿ ಹೇಳಿಕೊಂಡಿದ್ದರು. ಅಷ್ಟಕ್ಕೂ, ನಂಬಿಕೆ ಇರುವುದರಿಂದಲೇ ಚಂದನ್ ಶೆಟ್ಟಿ ತಮ್ಮ ಲಕ್ಕಿ ನಂಬರ್ ನ ಟಾಟ್ಯೂ ಹಾಕಿಸಿಕೊಂಡಿರುವುದು.!

ನಂಬಿಕೆ ನಿಜ ಆಗಿದೆ, ಕನಸು ಈಡೇರಿದೆ.!
ಹದಿನಾಲ್ಕನೇ ನಂಬರ್ ನಿಂದ ಮಾತ್ರವೇ ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದಿದ್ದಾರೆ ಅಂತ ಹೇಳಲು ಸಾಧ್ಯವಿಲ್ಲ. ಆದ್ರೆ, ತಮ್ಮ ಲಕ್ಕಿ ನಂಬರ್ 14 ರ ಮೇಲೆ ನಂಬಿಕೆ ಇಟ್ಟಿದ್ದ ಚಂದನ್ ಶೆಟ್ಟಿಗೆ ಸದ್ಯ ಅದೃಷ್ಟ ಖುಲಾಯಿಸಿದೆ. 'ಬಿಗ್ ಬಾಸ್' ನಿಂದ ಅರ್ಧ ಕೋಟಿ ರೂಪಾಯಿಗೆ ಚಂದನ್ ಶೆಟ್ಟಿ ಒಡೆಯನಾಗಿದ್ದಾರೆ. ಜೊತೆಗೆ, ಕನ್ನಡ ಕುಲಕೋಟಿಯ ಮೆಚ್ಚುಗೆ ಗಳಿಸಿದ್ದಾರೆ.


Click it and Unblock the Notifications











