'ಬಿಗ್ ಬಾಸ್' ಮನೆಯಲ್ಲಿ ಆನಂದ್ ಒಂಥರಾ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ.!

Recommended Video

Bigg Boss Kannada Season 6: ಆನಂದ್ ಮಾಲಗತ್ತಿ ಆಟಕ್ಕುಂಟು, ಲೆಕ್ಕಕ್ಕಿಲ್ಲ | FILMIBEAT KANNADA

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅದಾಗಲೇ ನಾಲ್ಕು ವಾರಗಳು ಉರುಳಿವೆ. ಈ ನಾಲ್ಕು ವಾರಗಳಲ್ಲಿ ಯಾದಗಿರಿ ಮೂಲದ ಸ್ಪರ್ಧಿ ಆನಂದ ಮಾಲಗತ್ತಿ ವೀಕ್ಷಕರಿಗೆ ಅಷ್ಟೇನೂ ಇಂಪ್ರೆಸ್ ಮಾಡಿಲ್ಲ.

'ಬಿಗ್ ಬಾಸ್' ಮನೆಯೊಳಗೆ ಇರುವ ಇತರೆ ಸ್ಪರ್ಧಿಗಳಿಗೂ ಆನಂದ ಮಾಲಗತ್ತಿ ಕೊಂಚ ವೀಕ್ ಅಂತ ಅನಿಸಿದೆ. ಮೊದಲೆರಡು ವಾರ ಕೆಲವೊಮ್ಮೆ ಸುಮ್ ಸುಮ್ನೆ ಕಿರಿಕಿರಿ ಮಾಡಿಕೊಂಡು ಕಿತ್ತಾಟ ಆಡಿದ್ದು ಬಿಟ್ಟರೆ, ಆನಂದ ಮಾಲಗತ್ತಿ ಬಹುತೇಕ ಸೈಲೆಂಟ್ ಆಗಿದ್ದಾರೆ.

''ಜ್ಞಾನ ಇಲ್ಲ'' ಅಂತ ಅನಿಸಿಕೊಂಡ ಆನಂದನಿಗೆ ಕ್ವಿಝ್ ಮಾಸ್ಟರ್ ಆಗುವ ಅವಕಾಶ ಸಿಕ್ತು. 'ವಿಷ ಸರ್ಪ' ಚಟುವಟಿಕೆಯಲ್ಲೂ ಕ್ಯಾಪ್ಟನ್ ಆಗುವ ಚಾನ್ಸ್ ಆನಂದ್ ಗೆ ಲಭಿಸಿತ್ತು. ಒಮ್ಮೆ ಕ್ಯಾಪ್ಟನ್ ಪ್ರತಿಸ್ಪರ್ಧಿಯಾಗಿ ಆನಂದ ಕಣಕ್ಕೆ ಇಳಿದಿದ್ದೂ ಇದೆ. ಇಷ್ಟಾದರೂ, 'ಬಿಗ್ ಬಾಸ್' ಮನೆ ಸದಸ್ಯರ ಪಾಲಿಗೆ ಆನಂದ್ ಒಂಥರಾ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ ಹಾಗೆ.! ಯಾಕಂತೀರಾ.? ಮುಂದೆ ಓದಿರಿ...

ಆನಂದ್ ನ ಸೇಫ್ ಮಾಡಿದ ಶಶಿ

ಆನಂದ್ ನ ಸೇಫ್ ಮಾಡಿದ ಶಶಿ

'ಬಿಗ್ ಬಾಸ್' ಮನೆಯ ಐದನೇ ವಾರದ ಕ್ಯಾಪ್ಟನ್ ಆಗಿ ಶಶಿ ಕುಮಾರ್ ಆಯ್ಕೆ ಆದರು. ನಾಮಿನೇಷನ್ ಪ್ರಕ್ರಿಯೆಯಿಂದ ಒಬ್ಬರನ್ನು ಸೇಫ್ ಮಾಡುವ ಅಧಿಕಾರ ಶಶಿಗೆ ಸಿಕ್ಕಾಗ, ಆತ ಸೇಫ್ ಮಾಡಿದ್ದು ಆನಂದ ಮಾಲಗತ್ತಿಯನ್ನ.

ಕಾರಣ ಏನು.?

ಕಾರಣ ಏನು.?

ಆನಂದ್ ಹೇಳಿಕೊಳ್ಳುವಂತಹ ಟಫ್ ಕಾಂಪಿಟೇಟರ್ ಅಲ್ಲ.. ಆತ ನಾಮಿನೇಟ್ ಆಗುವ ಬದಲು ಇತರೆ ಘಟಾನುಘಟಿ ಸ್ಪರ್ಧಿಗಳ ಪೈಕಿ ಒಬ್ಬರು ಈ ವಾರ ಔಟ್ ಆಗಲಿ ಅನ್ನೋದು ಶಶಿ ಪ್ಲಾನ್ ಆಗಿತ್ತು ಎಂಬುದು 'ಬಿಗ್ ಬಾಸ್' ಮನೆ ಸದಸ್ಯರ ಅಭಿಪ್ರಾಯ.

ಮತ್ತೆ ಟಾರ್ಗೆಟ್ ಆದ ಆನಂದ್.!

ಮತ್ತೆ ಟಾರ್ಗೆಟ್ ಆದ ಆನಂದ್.!

ಲುಕ್ಷುರಿ ಬಜೆಟ್ ಟಾಸ್ಕ್ ನಲ್ಲಿ 'ಕಳಪೆ ಪ್ರದರ್ಶನ' ನೀಡಿದ ಒಬ್ಬ ಸ್ಪರ್ಧಿಯನ್ನ ಕ್ಯಾಪ್ಟನ್ ಶಶಿ ಆಯ್ಕೆ ಮಾಡಬೇಕಿತ್ತು. ಆಗಲೂ ಶಶಿ ತಲೆಗೆ ಹೊಳೆದ ಮೊದಲ ಹೆಸರು ಆನಂದ್ ಮಾಲಗತ್ತಿ.! ಟಾಸ್ಕ್ ನಲ್ಲಿ ಇತರರಿಗೆ ಹೋಲಿಸಿದರೆ, ಕಮ್ಮಿ ಎಫರ್ಟ್ ಹಾಕಿದರು ಅಂತ ಕಾರಣ ಕೊಟ್ಟು ಆನಂದ್ ನ ಜೈಲಿಗೆ ಕಳುಹಿಸಲು ಶಶಿ ನಿರ್ಧಾರ ಮಾಡಿದರು.

ಸ್ಪರ್ಧಿಗಳ ಲೆಕ್ಕಾಚಾರ ಏನು ಗೊತ್ತಾ.?

ಸ್ಪರ್ಧಿಗಳ ಲೆಕ್ಕಾಚಾರ ಏನು ಗೊತ್ತಾ.?

''ಆನಂದ್ ಹೆಸರನ್ನು ಹೇಳಿ ಶಶಿ ಸೇಫ್ ಗೇಮ್ ಆಡಿದ್ದಾರೆ. ಬೇರೆಯವರ ಹೆಸರು ತೆಗೆದುಕೊಂಡಿದ್ದರೆ ಶಶಿ ಟಾರ್ಗೆಟ್ ಆಗುತ್ತಿದ್ದರು'' ಅಂತ ಇತರೆ ಸ್ಪರ್ಧಿಗಳು ಲೆಕ್ಕಾಚಾರ ಹಾಕಿದ್ದಾರೆ. ಹಾಗಾದ್ರೆ, 'ಬಿಗ್ ಬಾಸ್' ಮನೆಯಲ್ಲಿ ಆನಂದ್ ಮಾಲಗತ್ತಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಇದ್ದಾರಾ.? ಇದಕ್ಕೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Day 31: Anand Malagatti becomes easy target.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X