'ಬಿಗ್' ಕಿತ್ತಾಟ: ರಶ್ಮಿ 'ಲೋಕಲ್ ಆಂಟಿ', ಸ್ಲಂ ಕ್ಯಾಟಗರಿ ಎಂದ ಆಂಡ್ರ್ಯೂ.!

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಮೊಟ್ಟ ಮೊದಲು ವಾಕ್ಸಮರಕ್ಕೆ ನಾಂದಿ ಹಾಡಿದವರು Rapid ರಶ್ಮಿ. ನಾಮಿನೇಷನ್ ನಡೆಯುವಾಗ ರಶ್ಮಿ, ಜಯಶ್ರೀ ಹಾಗೂ ಆಂಡ್ರ್ಯೂ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವಿಚಾರವನ್ನು ಇಟ್ಟುಕೊಂಡು ನಾಮಿನೇಷನ್ ಗೆ ಆಂಡ್ರ್ಯೂ ನ ರಶ್ಮಿ ಆಯ್ಕೆ ಮಾಡಿಕೊಂಡರು. ಅಂದಿನಿಂದ ಇಬ್ಬರ ನಡುವೆ ಕಂದಕ ಶುರುವಾಯ್ತು.

ಈಗ ನೋಡಿದ್ರೆ, ಆಂಡ್ರ್ಯೂಗೆ ರಶ್ಮಿ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಅತ್ತ ಆಂಡ್ರ್ಯೂ ಕೂಡ ರಶ್ಮಿಗೆ ಕ್ಯಾಕರಿಸಿ ಉಗಿದಿದ್ದಾರೆ. ಈ ವಿಚಾರ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಮುಂದೆಯೂ ಚರ್ಚೆ ಆಯ್ತು. ಕೊನೆಗೆ ಇಬ್ಬರೂ ಕ್ಷಮೆ ಕೇಳಿ ಕೂಲ್ ಆದರು.

ಅಷ್ಟಕ್ಕೂ, ರಶ್ಮಿ ಹಾಗೂ ಆಂಡ್ರ್ಯೂ ನಡುವೆ ನಡೆದದ್ದು ಏನು.? ಆಂಡ್ರ್ಯೂ ಸಿಟ್ಟು ಮಾಡಿಕೊಂಡಿದ್ದು ಯಾಕೆ.? ರಶ್ಮಿಗೆ ಬಾಯಿಗೆ ಬಂದ ಹಾಗೆ ಬೈದಿದ್ದು ಯಾಕೆ.? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ, ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಮಾತಿನ ಚಕಮಕಿ

ಮಾತಿನ ಚಕಮಕಿ

ಮೊದಲ ದಿನದಿಂದಲೂ ರಶ್ಮಿ ಹಾಗೂ ಆಂಡ್ರ್ಯೂ ನಡುವೆ ಅಷ್ಟಕಷ್ಟೆ. ಹೀಗಿರುವಾಗಲೇ, 'ಆಂಟಿ' ಜಗಳ ಶುರುವಾಯ್ತು. ''ರಶ್ಮಿ.. ಸೆಲೆಬ್ರಿಟಿ, ತುಂಬಾ ಸ್ಟ್ಯಾಂಡರ್ಡ್ ಲೇಡಿ ಅಂದುಕೊಂಡಿದ್ದೆ. ಆದ್ರೆ, ಅವರು ಲೋಕಲ್ ಆಂಟಿ. ನಿಜವಾಗಲೂ ಹೇಳುತ್ತಿರುವೆ, ಸ್ಲಂ ಕ್ಯಾಟಗರಿ ಅದು. ಸೆಲೆಬ್ರಿಟಿ ಸ್ಲಮರ್'' ಅಂತ ಆಂಡ್ರ್ಯೂ ಹೇಳಿಬಿಟ್ಟರು.

ಆಂಡ್ರ್ಯೂ ಮಾತನ್ನ ಕೇಳಿ ರೊಚ್ಚಿಗೆದ್ದ ರಶ್ಮಿ

ಆಂಡ್ರ್ಯೂ ಮಾತನ್ನ ಕೇಳಿ ರೊಚ್ಚಿಗೆದ್ದ ರಶ್ಮಿ

''ಅವನ್ಯಾರು ನನ್ನನ್ನ ಆಂಟಿ ಅನ್ನೋಕೆ.? ಅವನ್ಯಾರು ನನ್ನ ಫ್ಯಾನ್ಸ್ ನ ಅಂಕಲ್ ಅಂತ ಕರೆಯೋಕೆ.? ಆಂಟಿ ಅಂದಿದ್ದು ಯಾವನು.?'' ಅಂತ ರಶ್ಮಿ ರೊಚ್ಚಿಗೆದ್ದರು. ಇದರಿಂದ ರಶ್ಮಿ ಹಾಗೂ ಆಂಡ್ರ್ಯೂ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಈ ನಡುವೆ ಆಂಡ್ರ್ಯೂ ಕ್ಯಾಕರಿಸಿ ಉಗಿದಿದ್ದೂ ಉಂಟು.

ನಾಯಿ, ಮೋರಿ ಅಂದಿದ್ರಂತೆ ರಶ್ಮಿ.!

ನಾಯಿ, ಮೋರಿ ಅಂದಿದ್ರಂತೆ ರಶ್ಮಿ.!

''ರಶ್ಮಿ ಈ ಮನೆಯ ಟೆರರಿಸ್ಟ್. ನನ್ನನ್ನ ನಾಯಿ, ಮೋರಿ, ಥರ್ಡ್ ಕ್ಲಾಸ್ ಅಂತೆಲ್ಲಾ ಬೈದರು. ಹೀಗಾಗಿ, ನಾನೂ ಬೈದೆ'' ಅಂತ ಸುದೀಪ್ ಮುಂದೆ ಆಂಡ್ರ್ಯೂ ಹೇಳಿದರು. ಕೊನೆಗೆ ಇಬ್ಬರೂ ಕ್ಷಮೆ ಕೇಳಿದರು.

ಎಚ್ಚರಿಕೆ ಕೊಟ್ಟ ಸುದೀಪ್

ಎಚ್ಚರಿಕೆ ಕೊಟ್ಟ ಸುದೀಪ್

''ನೀವಿಬ್ಬರೂ ಹೊರಗೆ ಬರುವ ಹೊತ್ತಿಗೆ ನಿಮ್ಮ ಮನೆಯವರೇ ನಿಮ್ಮನ್ನ ಇಷ್ಟಪಡಲ್ಲ'' ಅಂತ ಇಬ್ಬರಿಗೂ ಸುದೀಪ್ ಎಚ್ಚರಿಕೆ ಕೊಟ್ಟರು. ಸುದೀಪ್ ಆಡಿದ ಮಾತನ್ನ ಸೀರಿಯಸ್ ಆಗಿ ತೆಗೆದುಕೊಂಡು ಇನ್ಮುಂದೆ ಆದರೂ ರಶ್ಮಿ ಹಾಗೂ ಆಂಡ್ರ್ಯೂ ಸೈಲೆಂಟ್ ಆಗ್ತಾರಾ.? ನೋಡಬೇಕು.

More from Filmibeat

English summary
Bigg Boss Kannada 6: Andrew calls Rapid Rashmi 'Local Aunty'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X