twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಆಂಡಿಗೆ ಮದುವೆ.!

    |

    Recommended Video

    Bigg Boss Kannada Season 6:ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಆಂಡಿಗೆ ಮದುವೆ.! | FILMIBEAT KANNADA

    ''ಕವಿತಾ ಎದುರಿಗೆ ಓಡಾಡಿದರೆ ಮೈ ಜುಂ ಎನ್ನುತ್ತೆ'' ಎಂದು 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡು ಹೊಸ ಲವ್ ಆಂಗಲ್ ಶುರು ಮಾಡಿದವರು ಆಂಡ್ರ್ಯೂ ಅಲಿಯಾಸ್ ಆಂಡಿ. ಕವಿತಾ-ಶಶಿ ರೊಮ್ಯಾಂಟಿಕ್ ಡೇಟ್ ಟಾಸ್ಕ್ ನಡೆಯುವಾಗಲೂ, ಕದ್ದು ನೋಡಿದ್ದವರು ಮಿಸ್ಟರ್ ಆಂಡಿ.

    ಕವಿತಾ ಕಂಡ್ರೆ ಆಂಡಿಗೆ ಕ್ರಷ್ ಆಗಿದ್ಯೋ, ಪ್ರೀತಿ ಹುಟ್ಟಿದ್ಯೋ ಗೊತ್ತಿಲ್ಲ. ಆದ್ರೆ, 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಕೂಡಲೆ ಆಂಡಿಗೆ ಮದುವೆ ನಿಶ್ಚಯ ಮಾಡಲು ತಂದೆ-ತಾಯಿ ನಿರ್ಧರಿಸಿದ್ದಾರೆ.

    ಒಂದು ವೇಳೆ ಆಂಡ್ರ್ಯೂ 'ಬಿಗ್ ಬಾಸ್' ವಿನ್ನರ್ ಆದರೆ ಹೀಗೆ ಮಾಡ್ತಾರಂತೆ.!ಒಂದು ವೇಳೆ ಆಂಡ್ರ್ಯೂ 'ಬಿಗ್ ಬಾಸ್' ವಿನ್ನರ್ ಆದರೆ ಹೀಗೆ ಮಾಡ್ತಾರಂತೆ.!

    ಆಂಡಿಗೆ ಸದ್ಯ 28 ವರ್ಷ ವಯಸ್ಸು. ಬೇಗ ಮಗನಿಗೆ ಮದುವೆ ಮಾಡಿ, ಮೊಮ್ಮಕ್ಕಳನ್ನು ಆಡಿಸುವುದು ಆಂಡಿ ತಂದೆ-ತಾಯಿಯ ಕನಸು. ಹೀಗಾಗಿ, ಈಗಾಗಲೇ ಹುಡುಗಿಯನ್ನು ಹುಡುಕುವ ಕಾಯಕದಲ್ಲಿ ಆಂಡಿ ತಂದೆ-ತಾಯಿ ತೊಡಗಿದ್ದಾರೆ. ಹುಡುಗಿ ಸಿಕ್ಕ ಕೂಡಲೆ ಆಂಡಿ ಮದುವೆ ನಡೆಯುವುದು ಕನ್ಫರ್ಮ್.

    Bigg Boss Kannada 6: Andrew to get married after Bigg Boss show

    ಆಂಡ್ರ್ಯೂಗೆ ಹೋಲಿಸಿದರೆ 'ಒಳ್ಳೆ ಹುಡುಗ' ಪ್ರಥಮ್ ಎಷ್ಟೋ ವಾಸಿ.!ಆಂಡ್ರ್ಯೂಗೆ ಹೋಲಿಸಿದರೆ 'ಒಳ್ಳೆ ಹುಡುಗ' ಪ್ರಥಮ್ ಎಷ್ಟೋ ವಾಸಿ.!

    ಅಂದ್ಹಾಗೆ, ಕನ್ನಡ ಚಿತ್ರರಂಗದಲ್ಲಿ ಕಾಮಿಡಿಯನ್ ಆಗಿ ಗುರುತಿಸಿಕೊಳ್ಳಬೇಕೆಂಬುದು ಆಂಡಿ ಇಚ್ಛೆ. ಅದಾಗಲೇ 25-30 ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಆಂಡಿ ಕಾಣಿಸಿಕೊಂಡಿದ್ದಾರೆ. 'ಬಿಗ್ ಬಾಸ್' ಮೂಲಕ ಆಂಡಿಗೆ ಅದೃಷ್ಟ ಖುಲಾಯಿಸಬಹುದು ಎಂಬುದು ತಂದೆ-ತಾಯಿಯ ಆಶಯ.

    English summary
    Bigg Boss Kannada 6: Andrew to get married after Bigg Boss show.
    Friday, January 25, 2019, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X